ಪೆಂಟಗನ್​ನಲ್ಲಿ ‘‘ಕಾಪಾಡೋ ಶಿವ’’ ಅಂತಿದ್ದಾರೆ ಆರ್ಮುಗಂ ರವಿಶಂಕರ್​

ಪೆಂಟಗನ್​ನಲ್ಲಿ ‘‘ಕಾಪಾಡೋ ಶಿವ’’ ಅಂತಿದ್ದಾರೆ ಆರ್ಮುಗಂ ರವಿಶಂಕರ್​

ಸದ್ಯಕ್ಕೆ ಚಿತ್ರರಂಗದಲ್ಲಿ ಕೊರೊನಾ ಕಪ್ಪು ಛಾಯೆ.. ಸಿನಿಮಾ ರಂಗದ ಸಿನಿಮಾ ಮಂದಿರದಲ್ಲಿ ಸರಿಯಾಗಿ ಆಗುತ್ತಿಲ್ಲ ಸಿನಿಮಾ ಮಾಯೆ.. ಈ ಟೈಮ್​​ನಲ್ಲಿ ‘‘ಕಾಯೋ ಶಿವ’’, ‘‘ಕಾಪಾಡೋ ಶಿವ’’ ಅಂತ ಹಾಡ್ತಿದ್ದಾರೆ ಆರ್ಮುಗಂ ರವಿಶಂಕರ್.. ಏನಿದು ಹೊಸ ಸಮಾಚಾರ.

ಅದ್ಯಾವುದೇ ಪಾತ್ರ ಕೊಡ್ಲಿ ವಿಲನೇ ಆಗಿರಲಿ , ಹೀರೋನೇ ಆಗಿರಲಿ , ಕಚಗುಳಿ ಕೊಡೋ ಕಾಮಿಡಿಯನೇ ಆಗಿರಲಿ ಎಲ್ಲಾ ಪಾತ್ರವನ್ನ ನುಂಗಿ ನೀರು ಕುಡಿಯೋ ಕಲಾವಿದ ಪಿ.ರವಿಶಂಕರ್​​.. ಕನ್ನಡಿಗರ ಪಾಲಿನ ಆರ್ಮುಗಂ ರವಿಶಂಕರ್.

blank

ಈಗ ಹೊಸ ವಿಷಯವೆನು ಗೊತ್ತಾ.. ಪೆಂಟಗನ್ ಅನ್ನೊ ಹೊಸ ಸಿನಮಾದಲ್ಲಿ ರವಿಶಂಕರ್ ಖಡಕ್ ಪಾತ್ರವೊಂದನ್ನ ಮಾಡ್ತಿದ್ದಾರೆ.. ಇದು ರಾಜಹುಲಿ ಖ್ಯಾತಿಯ ನಿರ್ದೇಶಕ ಗುರುದೇಶ್ ಪಾಂಡೆ ಪ್ರೋಡಕ್ಷನ್ ಸಿನಿಮಾ.. ಐದು ಜನ ಡೈರೆಕ್ಟರ್ ಈ ಸಿನಿಮಾವನ್ನ ಡೈರೆಕ್ಷನ್ ಮಾಡಿದ್ದಾರೆ.. ಗಣಪತಿ ಹಬ್ಬದ ಪ್ರಯುಕ್ತ ಪೆಂಟಗನ್ ಸಿನಿಮಾದ ಬ್ಯೂಟಿಫುಲ್ ಹಾಡೊಂದು ಹೊರಬಂದಿದೆ.. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪೆಂಟಗನ್ ಸಿನಿಮಾದ ‘‘ಕಾಯೋ ಶಿವ, ಕಾಪಾಡೋ ಶಿವ’’ ಹಾಡನ್ನ ಬಿಡುಗಡೆ ಮಾಡಿದ್ದಾರೆ.

blank

ಪಿ.ರವಿಶಂಕರ್ , ಪ್ರಿತಿಕಾ ದೇಶಪಾಂಡೆ , ವಂಶಿ ಕೃಷ್ಣ , ಅನುಷಾ ರೈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.. ಕದ್ರಿ ಮಂಜುನಾಥ್ ಸಂಗೀತ ಸಂಯೋಜನೆಯಲ್ಲಿ ಧನಂಜಯ್ ದಿಡಿಗ ಸಾಹಿತ್ಯದಲ್ಲಿ ಸಂಗೀತ ಕಟ್ಟಿ ಗಾಯನದಲ್ಲಿ ಹಾಡು ಮೂಡಿಬಂದಿದೆ.ಕೆಲ ಹಾಡುಗಳು ಒಂದು ಬಾರಿ ಕೇಳಿದ್ರೆ ಥಟ್ಟಂಥ ಇಷ್ಟವಾಗೋದಿಲ್ಲ.. ಆದ್ರೆ ಪೆಂಟಗನ್ ಸಿನಿಮಾ ಈ ‘‘ಕಾಯೋ ಶಿವ, ಕಾಪಾಡೋ ಶಿವ’’ ಕೇಳಿದ ಕೂಡಲೇ ಇಷ್ಟವಾಗುತ್ತೆ.. ಭಕ್ತಿಯ ಸೆಲೆ, ಸಂಗೀತದ ಆಕರ್ಶಣೆಯ ಕಲೆ ಈ ಹಾಡಿನಲ್ಲಿ ಮೊಳಗಿದೆ.. ಪೆಂಟಗನ್ ಸಿನಿಮಾ ರಿಲೀಸ್​​​​ಗೆ ಸಿದ್ಧವಾಗುತ್ತಿದ್ದು ಥಿಯೇಟರ್​ಗಳಿಗೆ ಒಳ್ಳೆಕಾಲ ಬಂದಾಗ ಪ್ರೇಕ್ಷಕರ ಮುಂದೆ ಬರಲಿದೆ..

Source: newsfirstlive.com Source link