ಕೆಲಸ ಮಾಡೋ ಯೋಗ್ಯತೆ ಇಲ್ಲದಿದ್ರೆ ರಾಜೀನಾಮೆ ಕೊಟ್ಟು ಹೋಗು- ಅಧಿಕಾರಿಗೆ ಸಂಸದರ ತರಾಟೆ

ಕೆಲಸ ಮಾಡೋ ಯೋಗ್ಯತೆ ಇಲ್ಲದಿದ್ರೆ ರಾಜೀನಾಮೆ ಕೊಟ್ಟು ಹೋಗು- ಅಧಿಕಾರಿಗೆ ಸಂಸದರ ತರಾಟೆ

ಚಿಕ್ಕಬಳ್ಳಾಪುರ: ನಿನ್ನೆಯಿಂದ ಏನು ಮಾಡುತ್ತಾ ಇದ್ಯಪ್ಪಾ..? 8 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈಗ ಬರ್ತಾ ಇದ್ದೀಯಾ ನಾಚಿಕೆ ಆಗಲ್ವ ನಿನಗೆ, ವರ್ಷದ ಹಿಂದೆ ಹನ್ನೊಂದು ಮಂದಿ ಹೀಗೆ ಅಪಘಾತದಲ್ಲಿ ಮೃತಪಟ್ಟಿದ್ದರು.. ನಾನು ಕರೆದ ನಂತರ ಆಸ್ಪತ್ರೆ ಬಳಿ ಬರ್ತಾ ಇದಿಯಲ್ಲಾ.. ಕೆಲಸ ಮಾಡುವ ಯೋಗ್ಯತೆ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲಿಯೇ ಆರಾಮಾಗಿ ಇರು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್. ಮುನಿಸ್ವಾಮಿ ಅಧಿಕಾರಿಗೆ ಆವಾಜ್ ಹಾಕಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಭೀಕರ ಅಪಘಾತ; ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆ

ನಿನ್ನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಚಿಂತಾಮಣಿ-ಮದನಪಲ್ಲಿ ಮಾರ್ಗದ ಮರಿನಾಯಕನಹಳ್ಳಿ ಬಳಿ ಲಾರಿ ಮತ್ತು ಜೀಪ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, 8 ಜನ ಮೃತಪಟ್ಟಿದ್ದರು ಈ ದಿನ ನಗರದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಆರ್ ಟಿ ಓ ಅಧಿಕಾರಿಯಾದ ಮಂಜುನಾಥ್ ಮತ್ತು ಚಿಂತಾಮಣಿ ಎ ಆರ್ ಟಿ ಓ ಅಧಿಕಾರಿಯಾದ ಕುಮಾರಸ್ವಾಮಿಗಳಿಗೆ ಸಂಸದ ಮುನಿಸ್ವಾಮಿ ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.

ಬಸ್ಸುಗಳಲ್ಲಿ, ಆಟೊ ರಿಕ್ಷಾಗಳಲ್ಲಿ ,ಇತರೆ ವಾಹನಗಳಲ್ಲಿ ಜನರನ್ನು ಕುರಿಗಳಂತೆ ತುಂಬಿ ಕೊಂಡು ಹೋಗುತ್ತಿದ್ದರೂ ನೀವು ಯಾಕೆ ಸುಮ್ಮನಿದ್ದೀರಿ..? ನಾಚಿಕೆಯಾಗಲ್ವ ನಿಮಗೆ ಎಂದು ಆವಾಜ್ ಹಾಕಿದ್ದಾರೆ. ಅಲ್ಲದೇ ನಿಮ್ಮ ಮನೆಗಳವರಿಗೆ ಈ ರೀತಿ ಘಟನೆಗಳು ನಡೆದಿದ್ದರೆ ನೀವು ಸುಮ್ಮನೆ ಇರ್ತಾ ಇದ್ರಾ ಎಂದು ಆರ್ ಟಿ ಓ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.

ನಿನ್ನೆಯಿಂದ ಅಧಿಕಾರಿಗಳು ಬಂದು ಪರಿಶೀಲನೆ ಮಾಡಬೇಕು, ಅಪಘಾತದ ಬಗ್ಗೆ ವರದಿ ನೀಡಬೇಕು ಅನ್ನೋ ಕಾಮನ್ ಸೆನ್ಸ್ ಕೂಡ ಇಲ್ವಾ ನಿಮಗೆ ಎಂದು ಸಂಸದರು ಆರ್.ಟಿ.ಓ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Source: newsfirstlive.com Source link