#EXCLUSIVE ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ಕನಸುಗಾರ?

#EXCLUSIVE ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ಕನಸುಗಾರ?

ಕನಸುಗಾರ ರವಿಚಂದ್ರನ್ ಇಂದಿನ ಜಮಾನದ ಹೀರೋಸ್​ಗಳಾದ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಮುಂತಾದವರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.. ಆದ್ರೆ ಫಾರ್ ಫಸ್ಟ್ ಟೈಮ್​​ ನಟರಾಕ್ಷಸ ಡಾಲಿ ಧನಂಜಯ್ ಸಿನಿಮಾದಲ್ಲಿ ಪವರ್​ಫುಲ್​ ಪಾತ್ರದ ಮೂಲಕ ಕ್ರೇಜಿಸ್ಟಾರ್ ಕಾಣಿಸಿಕೊಳ್ತಿದ್ದಾರೆ.. ಹಾಗಾದ್ರೆ ಯಾವುದು ಆ ಸಿನಿಮಾ ? ಯಾವುದು ಆ ಪಾತ್ರ ಅನ್ನೋದ್ರ ಫಸ್ಟ್​​​ ಎಕ್ಸ್​​ಕ್ಲೂಸಿವ್ ಸಮಾಚಾರ ಚಿತ್ರಪ್ರೇಮಿಗಳಿಗಾಗಿ.

ಸದ್ಯಕ್ಕಂತೂ ಅರ್ಧ ಡಜನ್ ಸಿನಿಮಾಗಳಲ್ಲಿ ಡಾಲಿ ಧನಂಜಯ್ ಬ್ಯುಸಿ ಇದ್ದಾರೆ.. ಆದ್ರೆ ಡಾಲಿ ಅವರ ಆ ಒಂದು ಸಿನಿಮಾದಲ್ಲಿ ಕನಸುಗಾರ ರವಿಚಂದ್ರನ್ ಫಸ್ಟ್ ಟೈಮ್ ಕಾಣಿಸಿಕೊಳ್ಳಲಿದ್ದಾರೆ. ‘ಸಲಗ’ , ‘ತೋತಾಪುರಿ’ , ‘ಪುಷ್ಪ’ , ‘ರತ್ನನ್ ಪ್ರಪಂಚ’ , ‘ಡಾಲಿ’, ‘ಬಡವ ರಾಸ್ಕಲ್’ ಸಿನಿಮಾಗಳು ರಿಲೀಸ್​​ಗೆ ಸಿದ್ಧ ಇವೆ ಮತ್ತು ಸಿದ್ಧವಾಗುತ್ತಿವೆ.. ಜೊತೆಗೆ ‘ಹೆಡ್ ಬುಷ್’ , ‘ಮಾನ್ಸುನ್ ರಾಗ’ ಮುಂತಾದ ಸಿನಿಮಾಗಳ ಶೂಟಿಂಗ್ ಕಾರ್ಯಗಳು ಆಗಾಗ ನಡೆಯುತ್ತಿವೆ.. ಡಾಲಿ ಅವರ ಈ ಶೂಟಿಂಗ್ ಆಗುತ್ತಿರೋ ಆ ಒಂದು ಸಿನಿಮಾದಲ್ಲಿ ಕನುಸುಗಾರ ಕಂಗೊಳಿಸಿದ್ದಾರೆ.. ಹಾಗಾದ್ರೆ ಯಾವುದು ಆ ಸಿನಿಮಾ..?

ಫಸ್ಟ್ ಟೈಮ್ ಡಾಲಿ ಜೊತೆ ಪ್ರೇಮ ಲೋಕದ ಕಲಿ..!
ಪವರ್ ಫುಲ್ ಪಾತ್ರದಲ್ಲಿ ರವಿಚಂದ್ರನ್ ಮಿಂಚು

ನೈಜ ಕಥೆಯ ಸಿನಿಮಾವೊಂದರಲ್ಲಿ ಡಾಲಿ ಜೊತೆ ಧನಂಜಯ್ ರವಿಚಂದ್ರನ್​​​​​​​ ನಟಿಸುತ್ತಿದ್ದಾರೆ.. ಡಾಲಿ ನಟಿಸುತ್ತಿರೋ ನೈಜ ಕಥೆ ಯಾವುದು ಅನ್ನೋದನ್ನ ನೋಡಿದಾಗ ನಮಗೆ ಥಟ್ ಅಂತ ಕಣ್ಣಮುಂದೆ ಬರೋದು ಹೆಡ್ ಬುಷ್​..

blank

ಹೌದು.. ಹೆಡ್​ ಬುಷ್​​.. ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ.. ರಿಯಲ್ ಕಥೆಯನ್ನ ರಿಯಲಿಸ್ಟಿಕ್​ ಆಗಿ ಹೇಳಲು ಹೊರಟಿದೆ ಹೆಡ್ ಬುಷ್ ಸಿನಿಮಾ ತಂಡ.. ಡಾಲಿ ಧನಂಜಯ್ ಭೂಗತ ದೊರೆಯಾಗಿದ್ದ ಜಯರಾಜ್ ಪಾತ್ರದಲ್ಲಿ ಘರ್ಜಿಸಲಿದ್ದಾರೆ..ಈ ಚಿತ್ರತಂಡಕ್ಕೆ ಈಗಾಗಲೇ ಅನೇಕ ಪ್ರತಿಭಾವಂತರ ದಂಡು ಸೇರ್ಪಡೆಯಾಗಿದೆ.. ವಸಿಷ್ಠ ಸಿಂಹ , ಶೃತಿ ಹರಿಹರನ್ , ರಘುಮುಖರ್ಜಿ , ಲೂಸ್ ಮಾದ ಯೋಗಿ ಹೇಗಿ ಹೇಳ್ತಾ ಹೋದ್ರೆ ಇದೊಂದು ಮಲ್ಟಿಸ್ಟಾರ್​ ಸಿನಿಮಾ ಅಂದ್ರೆ ತಪ್ಪಾಗಲಾರದು.. ಇಂಥ ಮಲ್ಟಿಸ್ಟಾರ್ ಕಾಸ್ಟ್ ಕಹಾನಿ ಪಿಕ್ಚರ್​ಗೆ ಈಗ ಸ್ಯಾಂಡಲ್​​ವುಡ್ ಪ್ರೇಮ ಲೋಕದ ರಣಧೀರ ಮಾಸ್ಟರ್ ಆಫ್​ ಸ್ಯಾಂಡಲ್​​ವುಡ್ ಸಿನಿಮಾ ಇಂಡಸ್ಟ್ರಿ ಡಾ.ವಿ.ರವಿಚಂದ್ರನ್ ಸೇರ್ಪಡೆಯಾಗುತ್ತಿದ್ದಾರೆ.

blank

ರವಿಚಂದ್ರನ್ ಅವ್ರ ಜಮಾನದಲ್ಲಿ ಅನೇಕ ಬೇರೆ ಬೇರೆ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ರು.. ಈಗೀನ ಜಮಾನದ ಸ್ಟಾರ್ ಕಲಾವಿದರಾದ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೂ ರವಿಚಂದ್ರನ್ ತೆರೆ ಹಂಚಿಕೊಂಡಿದ್ದಾರೆ.. ಈಗ ಫರ್​ದಿ ಫಸ್ಟ್ ಟೈಮ್ ಡಾಲಿ ಧನಂಜಯ್ ಅವರ ಸಿನಿಮಾದಲ್ಲಿ ರವಿಚಂದ್ರನ್ ಆಗಮನವಾಗುತ್ತಿದೆ.. ಈ ಬಗ್ಗೆ ಇನೇನು ಕೆಲವೇ ದಿನಗಳಲ್ಲಿ ಶೂನ್ಯ ನಿರ್ದೇಶನದ ಹೆಡ್ ಬುಷ್ ಸಿನಿಮಾ ತಂಡ ಘೋಷಣೆ ಮಾಡೋ ಸಾಧ್ಯತೆ ಇದೆ..

ಬೆಂಗಳೂರಿನ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಅದ್ಧೂರಿಯಾದ ಹತ್ತಹತ್ರಾ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸೆಟ್​​​ ಅನ್ನ ನಿರ್ಮಾಣ ಮಾಡಿಕೊಂಡು ಶೂಟಿಂಗ್ ಅಡ್ಡಕ್ಕೆ ಇಳಿದಿದೆ ಹೆಡ್ ಬುಷ್ ಸಿನಿಮಾ ತಂಡ.. ಆರ್ಟ್ ಡೈರೆಕ್ಟರ್ ಬಾದಲ್ ನಂಜುಡಸ್ವಾಮಿ ಕಲ್ಪನೆಯಲ್ಲಿ 80- 90ರ ದಶಕದ ಬೆಂಗಳೂರು ನಗರದ ಸೆಟ್​​​​​ಗಳನ್ನ ನಿರ್ಮಿಸಲಾಗಿದೆ.. ಮುಂದಿನ ದಿನಗಳಲ್ಲಿ ಡಾಲಿ ಧನಂಜಯ್ ಅವರ ಹೆಡ್ ಬುಷ್ ಸಿನಿಮಾ ಮತ್ತಷ್ಟು ಸೌಂಡ್ ಮಾಡೋದು ಗ್ಯಾರಂಟಿ..

Source: newsfirstlive.com Source link