1 ವರ್ಷದ ಮಗು ಹಿಡಿದುಕೊಂಡು ಬಾವಿಗೆ ಹಾರಿದ ತಾಯಿ.. ಹೆರಿಗೆಗೆಂದು ಬಂದ ಮಹಿಳೆ ಹೀಗೆ ಮಾಡಿದ್ದೇಕೆ..?

1 ವರ್ಷದ ಮಗು ಹಿಡಿದುಕೊಂಡು ಬಾವಿಗೆ ಹಾರಿದ ತಾಯಿ.. ಹೆರಿಗೆಗೆಂದು ಬಂದ ಮಹಿಳೆ ಹೀಗೆ ಮಾಡಿದ್ದೇಕೆ..?

ಬಾಗಲಕೋಟೆ: ಒಂದು ವರ್ಷದ ಮಗುವಿನೊಂದಿಗೆ ತಾಯಿ ಬಾವಿಗೆ ಹಾರಿದ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ರಾಘಾಪುರದಲ್ಲಿ ನಡೆದಿದೆ. ಮಗಳು ಶಿವಾನಿಯ ಮೃತದೇಹವನ್ನ ಅಗ್ನಿ ಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ತಾಯಿ ಫಕೀರವ್ವಳಿಗಾಗಿ ಶೋಧಕಾರ್ಯ ಮುಂದುವರೆದಿದೆ.

ರಾಘಾಪುರ ಗ್ರಾಮದ ಜಮೀನಿನಲ್ಲಿ ಇರುವ ಬಾವಿಗೆ ಮಗುವಿನ ಜೊತೆ ತಾಯಿ ಬಿದ್ದಿದ್ದಾಳೆ. ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ಫಕೀರವ್ವ(26) ಹಾಗೂ ಒಂದು ವರ್ಷದ ಮಗಳು ಶಿವಾನಿ ಬಾವಿಗೆ ಹಾರಿದವರು.

ಇದನ್ನೂ ಓದಿ: ‘ಸಿಎಂ ಬೊಮ್ಮಾಯಿ ಗೊತ್ತಿದ್ದೂ ಸುಳ್ಳು ಹೇಳ್ತಿದ್ದಾರೆ’-ಹೀಗ್ಯಾಕಂದ್ರು ಸಿದ್ದರಾಮಯ್ಯ

ಫಕೀರವ್ವ ಹೆರಿಗೆಗಾಗಿ ಅಜ್ಜಿಯ ಊರು ರಾಘಾಪುರಕ್ಕೆ ಬಂದಿದ್ದರು. ಹೆರಿಗೆ ಬಳಿಕ ಇಂದು ಗಂಡನ ಮನೆಯವರು ಕರೆದುಕೊಂಡು ಹೋಗಲು ಬಂದಿದ್ದಾರೆ. ಆದ್ರೆ, ಫಕೀರವ್ವ ದಿಢೀರನೇ ಅಜ್ಜಿ ಜಮೀನಿನಲ್ಲಿ ಇರುವ ಬಾವಿಗೆ ಹಾರಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು ತಾಯಿಯ ಶೋಧ ಕಾರ್ಯ ಮುಂದುವರೆದಿದೆ. ಗುಳೇದಗುಡ್ಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Source: newsfirstlive.com Source link