ಸಂಪ್​ನಲ್ಲಿದ್ದ ನೀರು ತನಗೆ ತಾನೇ ಬಿಸಿಯಾಗ್ತಿದೆ.. ಭೂವಿಜ್ಞಾನಿಗಳಿಗೂ ತಲೆಕೆಡಿಸಿದ ನಿಗೂಢ ರಹಸ್ಯ

ಸಂಪ್​ನಲ್ಲಿದ್ದ ನೀರು ತನಗೆ ತಾನೇ ಬಿಸಿಯಾಗ್ತಿದೆ.. ಭೂವಿಜ್ಞಾನಿಗಳಿಗೂ ತಲೆಕೆಡಿಸಿದ ನಿಗೂಢ ರಹಸ್ಯ

ಕೋಲಾರ: ಜಿಲ್ಲೆಯ ಗ್ರಾಮವೊಂದರಲ್ಲಿ ಸಂಪ್​ ನಲ್ಲಿದ್ದ ನೀರು ಬಿಸಿಯಾಗುತ್ತಿರುವುದು ಗ್ರಾಮಸ್ಥರ ಅತಂಕಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಅಂತರ್ಜಲ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ. ಅಷ್ಟಕ್ಕೂ ಅಲ್ಲಿ ಏನಾಗ್ತಿದೆ..?

ಸಂಪ್​ನಲ್ಲಿನ ನೀರನ್ನು ಪರಿಶೀಲನೆ ನಡೆಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅಂತರ್ಜಲ ಇಲಾಖೆಯ ಅಧಿಕಾಗಿಳ ತಂಡ, ಸಂಪ್​ ಒಳಗೆ ಇಳಿದು ಕೂಲಂಕುಶವಾಗಿ ಪರಿಶೀಲನೆ ನಡೆಸುತ್ತಿರುವ ಸಿಬ್ಬಂದಿ, ಇನ್ನೊಂದೆಡೆ ವಿದ್ಯುತ್​ ಕಂಬದಲ್ಲಿ ವಿದ್ಯುತ್​ ಚೆಕ್​ ಮಾಡುತ್ತಿರುವ ಬೆಸ್ಕಾಂ ಸಿಬ್ಬಂದಿ ಇದೆಲ್ಲ ಕೋಲಾರ ತಾಲ್ಲೂಕು ಅಣ್ಣೇನಹಳ್ಳಿ ಗ್ರಾಮದ ದೃಶ್ಯಾವಳಿಗಳು.

blank

 

ಹೌದು ಇದೇ ಅಣ್ಣೇನಹಳ್ಳಿ ಗ್ರಾಮದ ಕೃಷ್ಣರೆಡ್ಡಿ ಎಂಬುವರ ಮನೆಯ ಸಂಪ್​ನಲ್ಲಿನ ನೀರು ಕಳೆದ ಇಪ್ಪತ್ತು ದಿನಗಳಿಂದ ಏಕಾಏಕಿ ಬಿಸಿಯಾಗುತ್ತಿದೆ ಎನ್ನುವುದರ ಕುರಿತು ವರದಿಯನ್ನು ನ್ಯೂಸ್ ಫಸ್ಟ್ ಪ್ರಸಾರ ಮಾಡಿತ್ತು. ಈ ಕುರಿತು ಇಂದು ಸ್ಥಳಕ್ಕೆ ಬಂದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅಂತರ್ಜಲ ಅಧಿಕಾರಿಗಳ ತಂಡ ಕೂಲಂಕುಶವಾಗಿ ಪರಿಶೀಲನೆ ನಡೆಸಿದರು. ಅಲ್ಲದೆ ನೀರು ಬಿಸಿಯಾಗೋದಕ್ಕೆ ಕಾರಣ ಏನು ಅನ್ನೊದನ್ನ ಇಂಚಿಂಚು ತನಿಖೆ ನಡೆಸಿದರು. ಇನ್ನು ಮನೆಯ ಸುತ್ತ ಹಾಗೂ ಸಂಪ್​ ಇರುವ ಪ್ರದೇಶದಲ್ಲಿ ಇಂಥಾದೊಂದು ನೀರು ಬಿಸಿಯಾಗೋದಕ್ಕೆ ಕಾರಣವಾಗಬಹುದಾದ ಎಲ್ಲಾ ಅಂಶಗಳನ್ನು ಗಮನಿಸಿದರು.

blank

ಈ ವೇಳೆ ಅಂತರ್ಜಲ ಇಲಾಖೆ ಹಿರಿಯ ಭೂ ವಿಜ್ಞಾನಿಗಳ ಪ್ರಕಾರ ಇಲ್ಲಿ ಭೂಗರ್ಭದಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗಿರುವ ಸಾಧ್ಯತೆ ಕಡಿಮೆ ಇಲ್ಲಿ ಮೇಲ್ನೋಟಕ್ಕೆ ಸಂಪ್​ ಪಕ್ಕದಲ್ಲಿರುವ ವಿದ್ಯುತ್​ ಕಂಬಕ್ಕೆ ಗ್ರೌಂಡಿಂಗ್​ ಇಲ್ಲದ ಕಾರಣ ಇದರಿಂದ ವಿದ್ಯುತ್​ ಸೋರಿಕೆಯಾಗಿ ಈರೀತಿ ಸಮಸ್ಯೆ ಆಗಿರಬಹುದು ಅನ್ನೋದು ಮೇಲ್ನೋಟಕ್ಕೆ ಅನುಮಾನ ವ್ಯಕ್ತಪಡಿಸಿದರು. ಇನ್ನು ಭೂಮಿಯ ಒಳಗಡೆ ಏನಾದರೂ ರಾಸಾಯನಿಕ ಪ್ರಕ್ರಿಯೆ ನಡೆದಿದ್ದರೆ ಅಂದರೆ ಸುಣ್ಣದ ಕಲ್ಲು ಇದ್ದಲ್ಲಿ ಕೆಲವೊಮ್ಮೆ ನೀರು ಬಿಸಿಯಾಗುವ ಸಾಧ್ಯತೆ ಇರುತ್ತದೆ. ಇಲ್ಲಿ ಆ ರೀತಿಯ ಸಾಧ್ಯತೆ ಇಲ್ಲ ಎಂದ್ರು.

blank

ಇನ್ನು ಅಂತರ್ಜಲ ಇಲಾಖೆ ಅಧಿಕಾರಿಗಳ ಅನುಮಾನದ ಮೇರೆಗೆ ಸ್ಥಳಕ್ಕೆ ಬಂದ ಬೆಸ್ಕಾಂ ಸಿಬ್ಬಂದಿ ವಿದ್ಯುತ್​ ಕಂಬವನ್ನು ಪರಿಶೀಲನೆ ನಡೆಸಿದರು. ವಿದ್ಯುತ್​ ಕಂಬದಲ್ಲಿ ಗ್ರೌಂಡಿಂಗ್​ ಇಲ್ಲದ ಕಾರಣ ಏನಾದ್ರು ಸಮಸ್ಯೆಯಾಗುತ್ತಿದೆಯಾ, ವಿದ್ಯುತ್​ ಸೋರಿಕೆಯಾಗುತ್ತಿದೆಯಾ ಅನ್ನೋದನ್ನು ಪರಿಶೀಲಿಸಿದರು. ನೀರಿನ ಒಳಗೆ ಹಾಗೂ ಕಂಬದ ಸುತ್ತ ಮುತ್ತ ಟೆಸ್ಟರ್ ಇಟ್ಟು ಪರಿಶೀಲನೆ ನಡೆಸಿದರು. ಆದರೆ ವಿದ್ಯುತ್ರ ಸೋರಿಕೆ ಅಥವಾ ಇದರಿಂದ ಸಂಪ್​ ನಲ್ಲಿನ ನೀರು ಬಿಸಿಯಾಗುತ್ತಿದೆ ಎಂದು ಹೇಳೋದಕ್ಕೆ ಯಾವುದೇ ಪುರಾವೆ ಸಿಗಲಿಲ್ಲ. ಆಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೊದಲು ಒಂದು ದಿನ ಈ ಕಂಬಕ್ಕೆ ವಿದ್ಯುತ್​ ಸಂಪರ್ಕ ಕಡಿತ ಗೊಳಿಸಿ, ನಂತರ ಸಂಪ್​ನಲ್ಲಿರುವ ನೀರನ್ನು ಸಂಪೂರ್ಣ ಹೊರತೆಗೆದು ಅದಕ್ಕೆ ಬೇರೆ ನೀರು ತುಂಬಿಸಿ ನೋಡಿ. ನಂತರ ಭೌಗೋಳಿಕ ಸಮಸ್ಯೆ ಇದ್ದರೆ ತಿಳಿಯುತ್ತದೆ ಎಂದರು. ಇನ್ನು ಭೂಕಂಪ ರೀತಿಯ ಯಾವುದೇ ಅವಕಾಶಗಳು ತುಂಬಾ ಕಡಿಮೆ. ಅದರಲ್ಲೂ ಕರ್ನಾಟಕದಲ್ಲಿ ಈ ರೀತಿಯ ಸಾಧ್ಯತೆ ತುಂಬಾ ಕಡಿಮೆ ಅನ್ನೋದು ಅವರ ಅಭಿಪ್ರಾಯ.

ಒಟ್ಟಾರೆ ಸಂಪ್​ನಲ್ಲಿನ ನೀರಿ ಬಿಸಿಯಾಗುವ ಮೂಲಕ ಸದ್ಯ ಅಣ್ಣೇನಹಳ್ಳಿ ಗ್ರಾಮದ ಜನರು ಹಾಗೂ ಕೋಲಾರ ಜಿಲ್ಲೆಯ ಅಧಿಕಾರಿಗಳ ತಲೆ ಬಿಸಿ ಮಾಡುತ್ತಿದೆ. ಇನ್ನು ಇದಕ್ಕೆ ನಿಖರ ಕಾರಣ ಏನು ಅನ್ನೋದು ಇನ್ನೂ ನಿಗೂಢವಾಗಿದ್ದು ಅಧಿಕಾರಿಗಳ ಹಂತ ಹಂತದ ಪರಿಶೀಲನೆ ನಂತರವಷ್ಟೇ ನೀರು ಬಿಸಿಯಾಗಿದ್ದೇಕೆ ಅನ್ನೋದು ತಿಳಿಯಬೇಕಿದೆ.

Source: newsfirstlive.com Source link