ಮೊಬೈಲ್​ ಕೊಡಲಿಲ್ಲ ಎಂದು ಯುವಕನನ್ನೇ ಕೊಂದ ​ಕಳ್ಳರು

ಮೊಬೈಲ್​ ಕೊಡಲಿಲ್ಲ ಎಂದು ಯುವಕನನ್ನೇ ಕೊಂದ ​ಕಳ್ಳರು

ರಾಮನಗರ: ಮೊಬೈಲ್ ಕಸಿದುಕೊಳ್ಳುವ ವೇಳೆ ಜಗಳವಾಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣದ, ಮಾಗಡಿ – ಬೆಂಗಳೂರು ರಸ್ತೆಯಲ್ಲಿ ನಡೆದಿದೆ. ಮನಿಷ್ ಮೃತ ವ್ಯಕ್ತಿ.

ಪೈಪ್ ಕಂಪನಿಯಲ್ಲಿ ಕೆಲಸಗಾರನಾಗಿದ್ದ ಅಸ್ಸಾಂ ಮೂಲದ ಮನೀಷ್ ಹಾಗೂ ಸ್ನೇಹಿತ ಅಂಕೂರ್ ಇಬ್ಬರು ಕಳೆದ ರಾತ್ರಿ ಕೆಲಸ ಮುಗಿಸಿ ಹೊರಗೆ ಕುಳಿತಿರುತ್ತಾರೆ. ಈ ಸಂದರ್ಭದಲ್ಲಿ ಬೆಂಗಳೂರು ಕಡೆಯಿಂದ 2 ಬೈಕ್ ನಲ್ಲಿ 5 ಜನ ಪುಂಡರು ಬಂದು ಏಕಾಏಕಿ ಮನೀಷ್ ನ ಮೊಬೈಲ್ ಕಿತ್ತುಕೊಂಡು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

blank

ಈ ವೇಳೆ ಮೊಬೈಲ್ ಕೊಡಲು ಮನಿಷ್​ ನಿರಾಕರಣೆ ಮಾಡಿದಾಗ ಅಜಿತ್ ಎಂಬಾತ ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ ಎನ್ನಲಾಗಿದೆ. ಆಗ ಅಲ್ಲೇ ಇದ್ದ ಜನರು ಇಬ್ಬರನ್ನ ಹಿಡಿದಿದ್ದು, ಉಳಿದ ಮೂರು ಜನರು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರ ಜೊತೆಗೆ ಮೂರು ಜನರನ್ನ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಅಜಿತ್, ಕಿರಣ್, ಕಿಶೋರ್, ಸುನೀಲ್ ಕುಮಾರ್, ನೀಲಕಂಠ ಬಂಧಿತ ಆರೋಪಿಗಳಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಆರೋಪಿಗಳು ಮೊಬೈಲ್ ಕಳ್ಳರು ಎಂದು ಹೇಳಲಾಗ್ತಿದೆ.

ಇದನ್ನೂ ಓದಿ:‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ‘ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ ದಾವಣಗೆರೆ ತಹಶೀಲ್ದಾರ್​

Source: newsfirstlive.com Source link