ನಾಯಿಗಳನ್ನ ಜೀವಂತ ಸಮಾಧಿ ಮಾಡಿದ ದುಷ್ಟರು.. 60 ಶ್ವಾನಗಳ ಶವ ಪತ್ತೆ.. 9 ಜನರ ವಿರುದ್ಧ ಕೇಸ್

ನಾಯಿಗಳನ್ನ ಜೀವಂತ ಸಮಾಧಿ ಮಾಡಿದ ದುಷ್ಟರು.. 60 ಶ್ವಾನಗಳ ಶವ ಪತ್ತೆ.. 9 ಜನರ ವಿರುದ್ಧ ಕೇಸ್

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಬೀದಿ ನಾಯಿಗಳನ್ನು ಜೀವಂತವಾಗಿ ಸಮಾಧಿ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಈ ಸಂಬಂಧ ಕಂಬದಾಳ ಹೊಸೂಗು ಗ್ರಾಮದ ಪಂಚಾಯಿತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಇಬ್ಬರು ಪಂಚಾಯಿತಿ ಸದಸ್ಯರು ಹಾಗೂ ಬಿಲ್​ ಕಲೆಕ್ಟರ್ ಲೆಥಲ್​ ಇಂಜೆಕ್ಷನ್​ ನೀಡಿದ ಸಿಬ್ಬಂದಿ​ ಸೇರಿದಂತೆ 12 ಜನರ ವಿರುದ್ಧ ಎಫ್​ಐಆರ್ ದಾಖಲಿಸಿ ಎಲ್ಲಾ ಆರೋಪಿಗಳನ್ನ ಬಂಧಿಸಲಾಗಿದೆ.

ಇನ್ನು ಶ್ವಾನಗಳ ಶವಗಳನ್ನು ಹೊರಕ್ಕೆ ತೆಗೆದು ಅವುಗಳ ಅಂಗಾಂಗವನ್ನು ಎಫ್​ಎಸ್​ಎಲ್​ ಗೆ ಕಳಿಸಿಕೊಡಲಾಗಿದೆ, ತನಿಖೆಯನ್ನು ಮುಂದುವರಿಸಲಾಗಿದೆ.

ಈ ಸಂಬಂಧ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಪ್ರಾಣಿಪ್ರಿಯ ನಾಯಿಗಳನ್ನ ಜೀವಂತವಾಗಿ ಹುಗಿದು ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಪ್ರಾಣಿ ಹಕ್ಕುಗಳಿಗೆ ಸಂಬಂಧಿಸಿದಂತೆ ಹೋರಾಟ ಮಾಡುವವರು ನೀಡಿದ ದೂರಿನ ಮೇರೆಗೆ 12 ಜನರ ಮೇಲೆ ಕೇಸ್​ ದಾಖಲಾಗಿದೆ. ಅಲ್ಲದೆ, ಗ್ರಾಮ ಪಂಚಾಯಿತಿಯ ಮೌಖಿಕ ಆದೇಶದ ಮೇರೆಗೆ ನಾಯಿಗಳನ್ನು ಜೀವಂತವಾಗಿ ಹುಗಿಯಲಾಗಿತ್ತು ಅನ್ನುವ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ಶಿವಮೊಗ್ಗ ಎಸ್​ಪಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Source: newsfirstlive.com Source link