ವಿಧಾನಸಭೆ ಮೊದಲ ಸಾಲಿನಿಂದ ಲಾಸ್ಟ್ ಸೀಟ್​ಗೆ ಶಿಫ್ಟ್ ಆದ BSY; ಮರುಕಳಿಸುತ್ತಾ ಇತಿಹಾಸ?

ವಿಧಾನಸಭೆ ಮೊದಲ ಸಾಲಿನಿಂದ ಲಾಸ್ಟ್ ಸೀಟ್​ಗೆ ಶಿಫ್ಟ್ ಆದ BSY; ಮರುಕಳಿಸುತ್ತಾ ಇತಿಹಾಸ?

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರೋ ಬಿ.ಎಸ್. ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಕೊನೆಯ ಬೆಂಚಿನ ಕೊನೆಯ ಸೀಟ್ ಅಲಂಕರಿಸಿದ್ದಾರೆ.

ವಿಧಾನಸಭೆಯ ಮೊಟ್ಟಮೊದಲ ಸಾಲಿನ ಮೊದಲ ಸೀಟ್ ಮುಖ್ಯಮಂತ್ರಿಗಳಿಗೆ ಮೀಸಲು ಆದರೆ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಅಂತ ಯಾವ ಸ್ಥಾನವೂ ಇಲ್ಲ. ಶಾಸಕರಾಗಿ ಗೆದ್ದಿರುವ ಹಿರಿತನದ ಆಧಾರದ ಮೇಲೆ ಮೂರನೇ ಸಾಲಿನಲ್ಲಿ ಯಾವುದಾದರೊಂದು ಸೀಟ್ ನೀಡುವುದು ಪದ್ಧತಿ ಆದರೆ ಯಡಿಯೂರಪ್ಪ ಮೂರನೇ ಸಾಲಿನ ಸೀಟಲ್ಲಿ ಕೂರೋದಿಲ್ಲ!

ಯಡಿಯೂರಪ್ಪಗೆ ವಿಧಾನಸಭೆಯ ಕಟ್ಟಕಡೆಯ ಸಾಲಿನ ಕಡೆ ಸೀಟ್.. ಈ ಲಾಸ್ಟ್ ಬೆಂಚ್ ಯಡಿಯೂರಪ್ಪನವರೇ ಕೇಳಿ ಪಡೆದಿದ್ದಂತೆ.
ಕಳೆದ ಬಾರಿ ನಡೆದ ಅಧಿವೇಶನದಲ್ಲಿ ಮೊಟ್ಟ ಮೊದಲ ಸಾಲಿನ ಮೊದಲ ಸೀಟ್ ನಲ್ಲಿ ಯಡಿಯೂರಪ್ಪ ಕುಳಿತಿದ್ದರು, ಮೊದಲ ಸಾಲಿನ ಮೊದಲ‌ ಸೀಟ್ ನಿಂದ ಕೊನೆಯ ಸಾಲಿನ ಕೊನೆಯ ಸೀಟ್ ಗೆ BSY ಜಂಪ್ ಆಗಿದ್ದಾರೆ. ಸೀನಿಯಾರಿಟಿ ಆಧಾರದಲ್ಲಿ ಮುಂದಿನ‌‌ ಸಾಲುಗಳ ಬೇರಾವುದೇ ಸೀಟ್ ಕೊಟ್ಟರೂ ಬೇಡ, ಅದೇ ಕೊನೆ ಸೀಟ್ ಬೇಕು ಅಂತ ಯಡಿಯೂರಪ್ಪ ಕೇಳಿ ತಗೊಂಡಿದ್ದಾರಂತೆ. ಈ ಕೊನೆಯ ಸಾಲಿನ ಕೊನೆ ಸೀಟ್ ಅಲಂಕರಿಸುವುದರ ಹಿಂದೆಯೂ ಯಡಿಯೂರಪ್ಪನವರದೇ ಇತಿಹಾಸ ಇದೆ.

blank

2011ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗಲೂ ಇದೇ ಸೀಟ್ ಬೇಕು ಅಂತ ಯಡಿಯೂರಪ್ಪ ಕೇಳಿ ಪಡೆದಿದ್ದರಂತೆ. 2011 ರಿಂದ 2013ರವರೆಗೆ ಕೇವಲ ಶಾಸಕರಾಗಿದ್ದಾಗ ಕೊನೆಯ ಸಾಲಿನಲ್ಲಿ ಕುಳಿತು ಇಡೀ ಸದನವನ್ನ ಅಬ್ಸರ್ವ್ ಮಾಡ್ತಿದ್ದರು ಎನ್ನಲಾಗಿದೆ.

ವಿಧಾನಸಭೆಯಲ್ಲಿ ತಮ್ಮ ತಮ್ಮ ಪಕ್ಷದ ಶಾಸಕರ ನಿಯಂತ್ರಿಸುವ ಮುಖ್ಯ ಸಚೇತಕರ ಪಕ್ಕದ ಸೀಟಲ್ಲಿ ಕುಳಿತು ಅನಿವಾರ್ಯ ಸಂದರ್ಭಗಳಲ್ಲಿ ಸ್ವತಃ ಶಾಸಕರನ್ನ ಯಡಿಯೂರಪ್ಪ ಕಂಟ್ರೋಲ್ ಮಾಡುತ್ತಿದ್ದರಂತೆ. ಈ ಬಾರಿ ಮತ್ತೆ ಇತಿಹಾಸ ಮರುಕಳಿಸುತ್ತಾ..?! ಅಥವಾ ಕೊನೆ ಸೀಟಲ್ಲಿ ಅನ್ಯಮನಸ್ಕರಾಗಿ ಯಡಿಯೂರಪ್ಪ ಕುಳಿತುಕೊಳ್ತಾರಾ .. ಕಟ್ಟಕಡೆಯ ಸಾಲಿನ ಕೊನೆ ಸಾಲಲ್ಲಿ ಕುಳಿತು ಕಡೇ ಆಟ ಹೇಗಾಡ್ತಾರೆ ಯಡಿಯೂರಪ್ಪ..? ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

Source: newsfirstlive.com Source link