ರಾಷ್ಟ್ರಮಟ್ಟದ ಸಿಎ ಪರೀಕ್ಷೆ; ದೇಶದಲ್ಲೇ ಫಸ್ಟ್​ ಱಂಕ್​​ ಪಡೆದ ಕನ್ನಡತಿ ಅಭೂತಪೂರ್ವ ಸಾಧನೆ

ರಾಷ್ಟ್ರಮಟ್ಟದ ಸಿಎ ಪರೀಕ್ಷೆ; ದೇಶದಲ್ಲೇ ಫಸ್ಟ್​ ಱಂಕ್​​ ಪಡೆದ ಕನ್ನಡತಿ ಅಭೂತಪೂರ್ವ ಸಾಧನೆ

ದಕ್ಷಿಣ ಕನ್ನಡ: ಮಂಗಳೂರು ಯುವತಿಯೊಬ್ಬರು ವಿಶಿಷ್ಟ ಸಾಧನೆ ಮಾಡಿದ್ದಾರೆ. ರಾಷ್ಟ್ರಮಟ್ಟದ ಸಿಎ ಪರೀಕ್ಷೆಯಲ್ಲಿ ಮೊದಲ ಱಂಕ್ ಪಡೆಯುವ ಮೂಲಕ ರೂತ್ ಕ್ಲಾರಾ ಡಿಸಿಲ್ವಾ ದೇಶಕ್ಕೆ ಟಾಪರ್ ಆಗಿದ್ದಾರೆ.

ಭಾರತೀಯ ಚಾರ್ಟರ್ಡ್​​ ಅಕೌಂಟೆಂಟ್ಸ್​ ಇನ್​​ಸ್ಟಿಟ್ಯೂಟ್​ನಿಂದ​ 2021ರ ಸಾಲಿನ ಸಿಎ ಅಂತಿಮ ಪರೀಕ್ಷೆ ನಡೆಸಲಾಗಿತ್ತು. ಪದವಿ ಶಿಕ್ಷಣದ ಜೊತೆಯಲ್ಲೇ ಸಿಎ ವ್ಯಾಸಂಗ ನಡೆಸಿದ್ದ ರೂತ್, ಗ್ರೂಪ್ 1 ಹಾಗೂ ಗ್ರೂಪ್ 2 ಹೆಸರಿನ ಎರಡು ಪರೀಕ್ಷೆಗಳನ್ನೂ ಏಕಕಾಲದಲ್ಲಿ ಬರೆದು ಪಾಸ್​​ ಮಾಡಿದಳು.

ಮೊದಲ ಪ್ರಯತ್ನದಲ್ಲೇ ಸಿಎಂ ಪಾಸ್​​ ಮಾಡಿದ ರೂತ್ ಈಗ ದೇಶದಲ್ಲೇ ಮೊದಲ ಸ್ಥಾನ ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಮೌಲ್ಯ ಮಾಪನ ತಡ: ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ವಿವಿ ಆಡಳಿತ ಕಚೇರಿಗೆ ಮುತ್ತಿಗೆ ಯತ್ನ

Source: newsfirstlive.com Source link