ಯಾರೂ ನಿರೀಕ್ಷಿಸಿದ ಭೂಪೇಂದ್ರಗೆ ಗುಜರಾತ್ ಸಿಎಂ ಸ್ಥಾನ; ಶಾಸಕಾಂಗ ಸಭೆಯಲ್ಲಿ ಅಂದು ಆಗಿದ್ದೇನು?

ಯಾರೂ ನಿರೀಕ್ಷಿಸಿದ ಭೂಪೇಂದ್ರಗೆ ಗುಜರಾತ್ ಸಿಎಂ ಸ್ಥಾನ; ಶಾಸಕಾಂಗ ಸಭೆಯಲ್ಲಿ ಅಂದು ಆಗಿದ್ದೇನು?

ಅಚ್ಚರಿ ಅಭ್ಯರ್ಥಿ ಎಂಬಂತೆ ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಹೈಕಮಾಂಡ್​ ಭೂಪೇಂದ್ರ ಪಟೇಲ್‌ ಅವರನ್ನ ಆಯ್ಕೆ ಮಾಡಿತ್ತು. ಇವತ್ತು ಅವರು ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಹಾಗಾದ್ರೆ, ಗುಜರಾತ್‌ನಲ್ಲಿ ದಿಢೀರ್‌ ಅಂತ ಮುಖ್ಯಮಂತ್ರಿ ಸ್ಥಾನ ಬದಲಿಸಿದ್ದು ಯಾಕೆ? ಯಾರೂ ನಿರೀಕ್ಷಿಸದ ಭೂಪೇಂದ್ರ ಪಟೇಲ್‌ ಸಿಎಂ ಸ್ಥಾನಕ್ಕೇರಿದ್ದು ಹೇಗೆ? ಶಾ, ಮೋದಿ ಚಾಣಾಕ್ಷ ನಡೆ ಏನು?

ಭೂಪೇಂದ್ರ ರಜನಿಕಾಂತ್‌ ಪಟೇಲ್‌ ಆಗಿರುವ ನಾನು, ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀರಸುತ್ತಿದ್ದೇನೆ. ಭಾರತೀಯ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತೆಯನ್ನು, ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು, ಗುಜರಾತ್‌ ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯವನ್ನು ಶ್ರದ್ಧಾ ಪೂರಕವಾಗಿ, ಅಂತಕರ್ಣ ಪೂರಕವಾಗಿ ನಿರ್ವಹಿಸುತ್ತೇನೆಂದು, ಭಯ ಅಥವಾ ಪಕ್ಷಪಾತವಿಲ್ಲದೇ, ರಾಗ, ದ್ವೇಷವಿಲ್ಲದೇ ಕೆಲಸ ಮಾಡುತ್ತೇನೆ ಎಂದು ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ.
                                                                      -ಭೂಪೇಂದ್ರ ಪಟೇಲ್‌, ಗುಜರಾತ್‌ ಮುಖ್ಯಮಂತ್ರಿ

ಇಂತಹ ಕ್ಷಣವನ್ನು ಎದುರಿಸುತ್ತೇನೆ ಅಂತ ಸ್ವತಃ ಭೂಪೇಂದ್ರ ಪಟೇಲ್‌ ಅವರು ಕೂಡ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಆದ್ರೆ, ಅಂತಹವೊಂದು ಸುವರ್ಣ ಗಳಿಗೆ ಅವರ ಪಾಲಿಕೆ ಸೋಮವಾರವೇ ಬಂದಿತ್ತು. ಯಾವುದೇ ಸದ್ದು ಗದ್ದಲ ಇಲ್ಲದೇ ಗದ್ದುಗೆ ಏರಿದ್ದಾರೆ. 2022 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯವರೆಗೂ ಇವರೇ ಮುಖ್ಯಮಂತ್ರಿ.

ಯಾರೂ ನಿರೀಕ್ಷಿಸಿದ ಭೂಪೇಂದ್ರಗೆ ಸಿಎಂ ಸ್ಥಾನ
ಒಂದೇ ಒಂದು ಚಿಕ್ಕ ಸುಳಿವನ್ನು ನೀಡದ ಬಿಜೆಪಿ

ಕಳೆದ ಎರಡು ದಿನದ ಹಿಂದೆ ಅಂದ್ರೆ, ಸೆಪ್ಟೆಂಬರ್‌ 11 ರಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವಿಜಯ್‌ ರೂಪಾನಿ ದಿಢೀರ್‌ ರಾಜೀನಾಮೆ ಘೋಷಣೆ ಮಾಡುತ್ತಾರೆ. ಜೈನ ಸಮುದಾಯದವರಾಗಿದ್ದ ವಿಜಯ್‌ ರೂಪಾನಿ ಆಗಸ್ಟ್‌ 7, 2016 ರಂದು ಮೊದಲಬಾರಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು, ಅನಂತರ 2017 ರಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿಯೂ ಬಿಜೆಪಿ ಬಹುಮತ ಪಡೆದಿತ್ತು. ಈ ಹಿನ್ನೆಲೆಯಲ್ಲಿ ವಿಜಯ್‌ ರೂಪಾನಿ ಅವರೇ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದ್ರೆ, ಸೆಪ್ಟೆಂಬರ್‌ 11 ರಂದು ದಿಢೀರ್‌ ಅಂತ ರಾಜೀನಾಮೆ ಪ್ರಕಟಿಸುತ್ತಾರೆ. ಅದರ ಹಿಂದಿನ ದಿನದವರೆಗೂ ಅಂದ್ರೆ, ಸೆಪ್ಟೆಂಬರ್‌ 10ರ ವರೆಗೂ ವಿಜಯ ರೂಪಾನಿ ಲವಲವಿಕೆಯಲ್ಲಿಯೇ ಇದ್ರು. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ ಅನ್ನೋ ಸ್ವಲ್ಪ ಸುಳಿವು ಕೂಡ ಯಾರಿಗೂ ಇರಲಿಲ್ಲ. ಹಾಗಾದ್ರೆ, ಆಗಿದ್ದು ಏನು?

blank

ಅನಿರೀಕ್ಷಿತ ಬೆಳವಣಿಗೆಯಲ್ಲಿ ವಿಜಯ್‌ ರೂಪಾನಿ ರಾಜೀನಾಮೆ ನೀಡುತ್ತಲೇ ಆಕಾಂಕ್ಷಿಗಳ ಪಟ್ಟಿ ಬೆಳೆದಿತ್ತು. ಅದರಲ್ಲಿಯೂ ನಿತೀನ್‌ ಪಟೇಲ್, ಮನಸುಖ್‌ ಮಾಂಡವೀಯ, ಪುರುಷೋತಮ್‌ ರೂಪಾಲ ಹೆಸರು ಮುಂಚೂಣಿಯಲ್ಲಿ ಬಂದಿತ್ತು. ಅಂದ್ರೆ, ಕರ್ನಾಟದಲ್ಲಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅರವಿಂದ್‌ ಬೆಲ್ಲದ್‌, ಸಂತೋಷ್‌ ಜೀ, ಸಿ.ಟಿ.ರವಿ, ಪ್ರಹ್ಲಾದ್‌ ಜೋಶಿ, ವಿಶ್ವೇಶ್ವರ ಹೆಗಡೆ, ನಿರಾಣಿ, ಆರ್‌.ಅಶೋಕ್‌ ಹೆಸರು ಹೇಗೆ ಬಂದಿತ್ತೋ ಅದೇ ರೀತಿಯಲ್ಲಿ ನಿತೀನ್‌, ಮನಸುಖ್‌, ಪುರುಷೋತಮ್‌ ಹೆಸರು ಬಂದಿತ್ತು. ಆದ್ರೆ, ಆಗಿದ್ದೇ ಬೇರೆ, ಯಾರೂ ನಿರೀಕ್ಷಿಸದ ಭೂಪೇಂದ್ರ ಪಟೇಲ್‌ ಮುಖ್ಯಮಂತ್ರಿಯಾಗಿ ಆಯ್ಕೆಯಾದ್ರು. ಈ ಮೂಲಕ ಬಿಜೆಪಿ ಗುಜರಾತಿಗರಿಗೆ ತಮ್ಮ ಆಯ್ಕೆ ಮೂಲಕ ಆಶ್ಚರ್ಯ ಉಂಟು ಮಾಡಿದ್ರು.

ಶಾಸಕಾಂಗ ಸಭೆಯಲ್ಲಿ ಏನಾಯ್ತು ಗೊತ್ತಾ?
ವೀಕ್ಷಕರಾಗಿದ್ದ ಪ್ರಹ್ಲಾದ್‌ ಜೋಶಿ, ನರೇಂದ್ರ ಸಿಂಗ್‌ ತೋಮರ್‌

ಶನಿವಾರ ವಿಜಯ ರೂಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುತ್ತಾರೆ. ಹಾಗೇ ಭಾನುವಾರ ಗುಜರಾತ್‌ಗೆ ಕೇಂದ್ರದ ವೀಕ್ಷಕರಾಗಿ ಕೇಂದ್ರ ಸಚಿವರಾಗಿದ್ದ ಪ್ರಹ್ಲಾದ್‌ ಜೋಷಿ, ನರೇಂದ್ರ ಸಿಂಗ್‌ ತೋಮರ್‌ ಹೋಗುತ್ತಾರೆ. ಭಾನುವಾರ ಮಧ್ಯಾಹ್ನ ಗುಜರಾತ್‌ ಬಿಜೆಪಿ ಪಕ್ಷದ ಶಾಸಕಾಂಗ ಸಭೆ ಆಯೋಜನೆ ಮಾಡಲಾಗಿರುತ್ತದೆ. ಬಹುತೇಕ ಎಲ್ಲಾ ಬಿಜೆಪಿ ಶಾಸಕರು ಪಾಲ್ಗೊಂಡಿರುತ್ತಾರೆ. ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದು ಅಲ್ಲಿಯ ಶಾಸಕರಿಗೂ ಗೊತ್ತಿರುವುದಿಲ್ಲ. ಭೂಪೇಂದ್ರ ಪಟೇಲ್‌ ಕೂಡ ಸಭೆಯಲ್ಲಿ ಪಾಲ್ಗೊಂಡಿರುತ್ತಾರೆ. ಎಲ್ಲರೂ ವೀಕ್ಷಕರ ಮುಖವನ್ನೇ ನೋಡುತ್ತಾ ಇರುತ್ತಾರೆ. ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದೇ ಅವರಿಗೆ ಬಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಬಿಡುತ್ತದೆ. ಅಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಮುಂದಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅಂತ ಘೋಷಣೆ ಮಾಡುತ್ತಾರೆ. ಇಡೀ ಶಾಸಕಾಂಗ ಸಭೆಯೇ ದಂಗಾಗಿ ಹೋಗುತ್ತದೆ. ಎಲ್ಲರೂ ಅಚ್ಚರಿಯಿಂದ ಭೂಪೇಂದ್ರ ಪಟೇಲ್‌ ಅವರನ್ನು ನೋಡುತ್ತಾರೆ.

ಭೂಪೇಂದ್ರ ಪಟೇಲ್‌ ಸಿಎಂ ಸ್ಥಾನಕ್ಕೆ ಆಯ್ಕೆ ಆಗಿದ್ದು ಯಾಕೆ?
182 ಕ್ಷೇತ್ರಗಳ ಪೈಕಿ 80 ಕ್ಷೇತ್ರಕ್ಕೆ ಪಟೇಲ್‌ ಸಮುದಾಯದವರೇ ನಿರ್ಣಾಯಕ

2014 ರಲ್ಲಿ ನಡೆದ ಲೋಕಸಭಾ ಚುನಾವಣೆ ಬಳಿಕ ಗುಜರಾತ್‌ ಮುಖ್ಯಮಂತ್ರಿ ಸ್ಥಾನಕ್ಕೆ ನರೇಂದ್ರ ಮೋದಿ ಅವರು ರಾಜೀನಾಮೆ ನೀಡುತ್ತಾರೆ. ಇತ್ತ ದೆಹಲಿಗೆ ಬಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದ್ರೆ, ನರೇಂದ್ರ ಮೋದಿ ಅವರಿಂದ ತೆರವಾದ ಸ್ಥಾನಕ್ಕೆ ಆನಂದಿ ಬೆನ್‌ ಪಟೇಲ್‌ ಅವರನ್ನು ಆಯ್ಕೆ ಮಾಡಲಾಗುತ್ತೆ. ಆನಂದಿಬೇನ್‌ ಅವರು ಪಟೇಲ್‌ ಸಮುದಾಯದವರಾಗಿರುತ್ತಾರೆ. ಆದ್ರೆ, ಅಂತರವಾದ ಅನಿರೀಕ್ಷಿತ ಬೆಳವಣಿಗೆಯಲ್ಲಿ 2016 ರಲ್ಲಿ ಅನಂದಿಬೆನ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಇಂದಿನ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆತ್ಮೀಯ ಹಾಗೂ ಜೈನ ಸಮುದಾಯದವರಾದ ವಿಜಯ್‌ ರೂಪಾನಿ ಅವರನ್ನು ಸಿಎಂ ಸ್ಥಾನಕ್ಕೆ ತಂದು ಕೂರಿಸಲಾಗಿರುತ್ತೆ. ಇದು ಇತಿಹಾಸ, ಹಾಗಾದ್ರೆ ಈಗ ಮತ್ತೆ ಪಟೇಲ್‌ ಸಮುದಾಯಕ್ಕೆ ಬಿಜೆಪಿ ಮಣೆ ಹಾಕಿದ್ದು ಯಾಕೆ?

ಮುಖ್ಯಮಂತ್ರಿಯಾಗಿ ವಿಜಯ್‌ ರೂಪಾನಿ ಮಾಸ್‌ ಲೀಡರ್‌ ಆಗಿ ಬೆಳೆಯಲೇ ಇಲ್ಲ. ಈ ನಡುವೆ ಕೊರೊನಾ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಅನ್ನೋ ಅಸಮಾಧಾನ ಇತ್ತು. ಇಷ್ಟೇ ಅಲ್ಲ, ಗುಜರಾತ್‌ನ ಪ್ರಬಲ ಸಮುದಾಯ ಅಂದ್ರೆ ಅದು ಪಟೇಲ್‌ ಸಮುದಾಯ. 182 ವಿಧಾನಸಭೆ ಕ್ಷೇತ್ರಗಳಲ್ಲಿ ಸುಮಾರು 80 ಕ್ಷೇತ್ರಗಳಲ್ಲಿ ಪಟೇಲ್‌ ಜನಾಂಗದವರು ನಿರ್ಣಾಯಕರು. ಅದರಲ್ಲಿಯೂ ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಪಟೇಲ್‌ ಜನಾಂಗದವರು ಆಪ್‌ ಪಕ್ಷದ ಕಡೆವಾಲಿರುವುದು ಬಿಜೆಪಿ ಹೈಕಮಾಂಡ್‌ ಗಮನಕ್ಕೆ ಬಂದಿತ್ತು. ಪಟೇಲ್‌ ಸಮುದಾಯ ಬಿಜೆಪಿಯ ಫಿಕ್ಸ್‌ ಮತ, ಆ ಮತಗಳೇ ಆಪ್‌ ಕಡೆ ಹೋದ್ರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರಕ್ಕೇರಲು ಹಾದಿ ಸುಲಭವಾಗಿ ಬಿಡುತ್ತದೆ. ಇದನ್ನು ಮನಗಂಡೇ ಬಿಜೆಪಿ ಪಟೇಲ್‌ ಸಮುದಾಯದ ಭೂಪೇಂದ್ರ ಪಟೇಲ್‌ಗೆ ಮಣೆಹಾಕಿದೆ.

2022 ವಿಧಾನಸಭೆ ಟಾರ್ಗೆಟ್‌ ಮಾಡಿದ ಬಿಜೆಪಿ

2014 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಬಿಜೆಪಿ ಹೈಕಮಾಂಡ್‌ ಕೆಲವು ಪ್ರಯೋಗಗಳನ್ನು ಮಾಡಿತ್ತು. ಅದೇನಂದ್ರೆ, ಬಿಜೆಪಿ ಗೆಲುವು ಸಾಧಿಸಿದ್ದ ರಾಜ್ಯದಲ್ಲಿ ಸಣ್ಣ ಪ್ರಮಾಣದ ಜನಸಂಖ್ಯೆ ಇರೋರನ್ನು ಸಿಎಂ ಸ್ಥಾನಕ್ಕೆ ತಂದು ಕೂರಿಸಲಾಗುತ್ತಿತ್ತು. ಉದಾಹರಣೆಗೆ ಮಾರಾಠರ ಪ್ರಭಾವ ಇರೋ ಮಾಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನಿವಿಸ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಹಾಗೇ ಗುಜರಾತ್‌ನಲ್ಲಿ ಸಣ್ಣ ಸಮುದಾಯವಾದ ಜೈನ ಜನಾಂಗದ ವಿಜಯ್‌ ರೂಪಾನಿಗೆ ಅವಕಾಶ ನೀಡಲಾಗಿತ್ತು.

ಆದ್ರೆ, ಈಗ ಬಿಜೆಪಿಯ ಪರಿಸ್ಥಿತಿ ಅಂದುಕೊಂಡಂತೆ ಇಲ್ಲ. ಅದರಲ್ಲಿಯೂ ಗುಜರಾತ್‌ನಲ್ಲಿ ಬಿಜೆಪಿ ಪ್ರಭಾವ ಕುಗ್ಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿಯೇ ಪಟೇಲ್‌ ಸಮುದಾಯದ ಭೂಪೇಂದ್ರ ಪಟೇಲ್‌ ಅವರನ್ನು ಸಿಎಂ ಸ್ಥಾನಕ್ಕೆ ತಂದು ಕೂರಿಸಲಾಗಿದೆ. ಈಗಾಗಲೇ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 182ರಲ್ಲಿ ಕೇವಲ 99 ಸ್ಥಾನ ಮಾತ್ರ ಗೆಲುವು ಸಾಧಿಸಿತ್ತು. ಅದರಲ್ಲಿಯೂ ಕೊನೆಯ ಕ್ಷಣದಲ್ಲಿ ನರೇಂದ್ರ ಮೋದಿ ಹೆಚ್ಚಿನ ಸಭೆ ಮಾಡಿದ್ದರಿಂದಲೇ ಬಿಜೆಪಿ ಗೆಲುವು ಸಾಧಿಸಿತ್ತು. ಒಮ್ಮೆ ನರೇಂದ್ರ ಮೋದಿ ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ಸಭೆ ನಡೆಸದಿದ್ದರೇ ಬಿಜೆಪಿ ಸೋಲು ಅನುಭವಿಸುವುದು ಪಕ್ಕಾ ಆಗಿತ್ತು ಅನ್ನೋದನ್ನು ರಾಜಕೀಯ ವಿಶ್ಲೇಷಕರ ಮಾತು.

ಇನ್ನು ಹೀಗೆ ಬಿಟ್ರೆ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಗುತ್ತೆ ಅನ್ನೋದು ಬಿಜೆಪಿಗೆ ಅರ್ಥವಾಗಿತ್ತು. ಕೇವಲ ನರೇಂದ್ರ ಮೋದಿ ಅವರ ಪ್ರಭಾವದಿಂದಲೇ ಚುನಾವಣೆ ಗೆಲ್ಲೋದು ಕಷ್ಟವಾಗುತ್ತದೆ. ಅದರಲ್ಲಿಯೂ ಪಟೇಲ್‌ ಜನಾಂಗದ ಮತ ಆಪ್‌ ಪಕ್ಷದ ಕಡೆ ವಾಲುತ್ತಿದೆ. ಇದನ್ನೆಲ್ಲಾ ಲೆಕ್ಕಾಚಾರ ಹಾಕಿಯೇ ಬಿಜೆಪಿ ಸಿಎಂ ಸ್ಥಾನವನ್ನು ಬದಲಿಸಿದೆ.

Source: newsfirstlive.com Source link