ಹಿಂದಿ ದಿವಸ್​​ ವಿರುದ್ಧ ಸಿಡಿದೆದ್ದ JDS; ಕನ್ನಡಿಗರ ಹಿತ ಕಾಯಲು ಸದಾ ಸಿದ್ಧ ಎಂದ HDK

ಹಿಂದಿ ದಿವಸ್​​ ವಿರುದ್ಧ ಸಿಡಿದೆದ್ದ JDS; ಕನ್ನಡಿಗರ ಹಿತ ಕಾಯಲು ಸದಾ ಸಿದ್ಧ ಎಂದ HDK

ಬೆಂಗಳೂರು: ಪ್ರತಿವರ್ಷ ಸೆಪ್ಟೆಂಬರ್​​​ 14ನೇ ತಾರೀಕಿನಂದು ದೇಶಾದ್ಯಂತ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದೆ. ಹಿಂದಿ ದಿವಸ್ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ರಾಜ್ಯದ ಹಲವೆಡೆ ಆಕ್ರೋಶ ವ್ಯಕ್ತವಾಗುತ್ತದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದಲ್ಲೂ ಸಾಕಷ್ಟು ಜನರು ಮತ್ತು ಕನ್ನಡ ಸಂಘಟನೆಗಳು ಹಿಂದಿ ಹೇರಿಕೆ ವಿರೋಧಕ್ಕೆ ಧ್ವನಿಗೂಡಿಸಿದ್ದಾರೆ. ಈಗ ಜೆಡಿಎಸ್​​​ ಕೂಡ ಹಿಂದಿ ದಿವಸ್​​​​​ಗೆ ವಿರೋಧ ವ್ಯಕ್ತಪಡಿಸುತ್ತಿದೆ.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಸದಾ ಮಾತೃ ಭಾಷೆ ರಕ್ಷಣೆಗೆ ಬದ್ದ. ಹಿಂದಿ ಹೇರಿಕೆಯನ್ನ ಕನ್ನಡಿಗರು ಒಪ್ಪಲ್ಲ. ಕನ್ನಡ ನಮ್ಮ ಪಾಲಿನ ಮಾತೃಸ್ವರೂಪಿಣಿ. ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಇಂದು ಪಕ್ಷದ ಕಛೇರಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ ಟ್ವೀಟ್​​ ಮಾಡಿದ್ದಾರೆ.

ಕರ್ನಾಟಕದ ನೆಲ, ಜಲದ ವಿಚಾರ ಬಂದಾಗ ರಾಜಿ ಮಾಡಿಕೊಂಡು ಇರಲ್ಲ. ಕನ್ನಡಿಗರ ರಕ್ಷಣೆ, ಹಿತ ಕಾಯಲು JDS ಸದಾ ಸಿದ್ದ. ಮೇಯರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಆಗೆಂದ ಮಾತ್ರಕ್ಕೆ ಸರ್ಕಾರದ ಎಲ್ಲಾ ಧೋರಣೆಗಳನ್ನು ಒಪ್ಪಲಾಗದು. ರಾಜ್ಯ ರಕ್ಷಣೆ ವಿಚಾರದ ಹೋರಾಟ ಬೇರೆ, ಮೈತ್ರಿ ರಾಜಕಾರಣ, ಮಾತುಕತೆ ಬೇರೆ ಎಂದಿದ್ದಾರೆ ಎಚ್​ಡಿಕೆ.

ಇದನ್ನೂ ಓದಿ: ರಾಷ್ಟ್ರಮಟ್ಟದ ಸಿಎ ಪರೀಕ್ಷೆ; ದೇಶದಲ್ಲೇ ಫಸ್ಟ್​ ಱಂಕ್​​ ಪಡೆದ ಕನ್ನಡತಿ ಅಭೂತಪೂರ್ವ ಸಾಧನೆ

ಸ್ದಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡ ಮಾತ್ರಕ್ಕೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ಧೋರಣೆಯನ್ನ ಎಂದೂ JDS ಒಪ್ಪಲ್ಲ. BJP ಜೊತೆ ಮೈತ್ರಿಗೆ ಸಮ್ಮತಿ, ರಾಜ್ಯ ವಿರೋಧಿ ಧೋರಣೆಗಳಿಗೆ ಅಸಮ್ಮತಿ ಎಂಬ ಸಂದೇಶವನ್ನು ಎಚ್​ಡಿಕೆ ಸಾರಿದ್ದಾರೆ.

Source: newsfirstlive.com Source link