ಏಷ್ಯಾದ ಯಾವುದೇ ದೇಶವನ್ನ ತಲುಪುತ್ತೆ, ಶತ್ರುಗಳನ್ನ ಚಿಂದಿ ಉಡಾಯಿಸುತ್ತೆ ಈ ಪವರ್​​ಫುಲ್ ಅಗ್ನಿ..!

ಏಷ್ಯಾದ ಯಾವುದೇ ದೇಶವನ್ನ ತಲುಪುತ್ತೆ, ಶತ್ರುಗಳನ್ನ ಚಿಂದಿ ಉಡಾಯಿಸುತ್ತೆ ಈ ಪವರ್​​ಫುಲ್ ಅಗ್ನಿ..!

ಭುವನೇಶ್ವರ: ಅಣ್ವಸ್ತ್ರ ಸಾಮರ್ಥ್ಯದ ಖಂಡಾಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ) ಅಗ್ನಿ-ವಿ ಯ ಮೊದಲ ಪ್ರಯೋಗವನ್ನು ಮಾಡಲು ಭಾರತ ಮುಂದಾಗಿದ್ದು ಶೀಘ್ರವೇ ಅಗ್ನಿ-ವಿ ಸಶಸ್ತ್ರ ಪಡೆ ಸೇರಲಿದೆ.

ಭಾರತೀಯ ಸೇನೆಯ ಸ್ಟ್ರಾಟಜಿಕ್ ಫೋರ್ಸ್ ಒಡಿಸ್ಸಾದ ಕರಾವಳಿ ಪ್ರದೇಶದಲ್ಲಿ ಈ ಮಿಸೈಲ್​ನ ಪ್ರಯೋಗ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸೆಪ್ಟೆಂಬರ್ 23 ರಂದು ಅಗ್ನಿ-ವಿಯ ಪರೀಕ್ಷಾರ್ಥ ಪ್ರಯೋಗ ನಡೆಯಲಿದ್ದು ಈ ಮಿಸೈಲ್ ಬರೋಬ್ಬರಿ 5,000 ಕಿ.ಮೀ ರೇಂಜ್ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

2018 ರಲ್ಲೇ ಹ್ಯಾಟ್ರಿಕ್ ಪ್ರಯೋಗಗಳನ್ನು ನಡೆಸಲು ಸಿದ್ಧತೆ ನಡೆದಿತ್ತಾದ್ರೂ ಸಾಲು ಸಾಲು ಕೊರೊನಾ ಅಲೆಗಳ ಹೊಡೆತದಿಂದಾಗಿ ಪ್ರಯೋಗಕ್ಕೆ ಅಡ್ಡಿಯುಂಟಾಗಿತ್ತು. ಅಗ್ನಿ-ವಿ ಕ್ಷಿಪಣಿಯ ಮುಂದಿನ ಪ್ರಯೋಗ ಮಹತ್ವದ್ದೆನ್ನಿಸಿಕೊಂಡಿದೆ.. ಯಾಕಂದ್ರೆ ಇದು ಅನೇಕ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಎಂಐಆರ್‌ವಿ ಟೆಕ್ನಾಲಜಿಯನ್ನ ಹೊಂದಿದೆ. ಇನ್ನು MIRV ಸಾಮರ್ಥ್ಯವನ್ನು ಈವರೆಗೆ ರಹಸ್ಯವಾಗಿ ಪರೀಕ್ಷಿಸಲಾಗಿದ್ದರೂ, ಇಲ್ಲಿಯವರೆಗೆ ನೇರ ಪ್ರಯೋಗಕ್ಕೆ ಒಳಪಡಿಸಲಾಗಿಲ್ಲ.

ಅಗ್ನಿ-ವಿ ಯ ಎಂಐಆರ್ವಿ ಸಾಮರ್ಥ್ಯವು ಭಾರತಕ್ಕೆ ಅಗತ್ಯವಾಗಿ ಬೇಕಿದ್ದ ಪ್ರತಿರೋಧವನ್ನು ನೀಡುತ್ತದೆ ಎಂದು ಸೇನಾ ಮೂಲಗಳು ಹೇಳಿವೆ.

ಇನ್ನು ಅಗ್ನಿ-ವಿ ವಿಶೇಷತೆಯನ್ನು ನೋಡೋದಾದ್ರೆ..

  • ಸಾಮಾನ್ಯವಾಗಿ ಸಿಂಗಲ್ ವಾರ್ ಹೆಡ್​ ಕ್ಷಿಪಣಿಗಳನ್ನು ಸಾಮಾನ್ಯವಾಗಿ ಒಂದು ಗುರಿಯ ವಿರುದ್ಧ ಉಡಾಯಿಸಲಾಗುತ್ತದೆ, ಆದರೆ MIRVed ಕ್ಷಿಪಣಿಗಳನ್ನು ಏಕಕಾಲದಲ್ಲಿ ಹಲವು ಗುರಿಗಳ ವಿರುದ್ಧ ಸಿಡಿತಲೆಗಳನ್ನು ವಿತರಿಸುತ್ತದೆ. ಈ ಸಾಮರ್ಥ್ಯಯವನ್ನು ಅಗ್ನಿ-ವಿ ಹೊಂದಿರಲಿದೆ.
  • ಅಗ್ನಿ-ವಿ ನಲ್ಲಿರುವ ತಂತ್ರಜ್ಞಾನದಿಂದ ಕಡಿಮೆ ಕ್ಷಿಪಣಿಗಳ ಮೂಲಕವೇ ಹೆಚ್ಚು ವೈರಿಗಳನ್ನು ಏಕಕಾಲದಲ್ಲಿ ಸದೆಬಡಿಯಬಹುದಾಗಿದೆ.
  • ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ಏಷ್ಯಾದ ಎಲ್ಲ ದೇಶಗಳು ಮತ್ತು ಆಫ್ರಿಕಾ ಮತ್ತು ಯುರೋಪ್‌ನ ಕೆಲವು ಭಾಗಗಳ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿದೆ.
  • ಸುಮಾರು ಏಳು ಕಿಮೀ ವೈರಿಂಗ್‌ನೊಂದಿಗೆ, 17 ಮೀಟರ್ ಉದ್ದ, 2 ಮೀಟರ್ ಅಗಲ, ಮೂರು ಹಂತದ ಈ ಘನ ಇಂಧನ ಕ್ಷಿಪಣಿ 1.5 ಟನ್ ಪೇಲೋಡ್ ಮತ್ತು ಸುಮಾರು 50 ಟನ್‌ಗಳಷ್ಟು ಭಾರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನ ಹೊಂದಿದೆ.

ಯುಎಸ್, ಯುಕೆ, ರಷ್ಯಾ, ಚೀನಾ, ಫ್ರಾನ್ಸ್, ಇಸ್ರೇಲ್ ಮತ್ತು ಉತ್ತರ ಕೊರಿಯಾದ ನಂತರ ಖಂಡಾಂತರ ಕ್ಷಿಪಣಿಗಳನ್ನು ಹೊಂದಿರುವ ಎಂಟನೇ ದೇಶ ಭಾರತ ಎಂಬ ಹೆಗ್ಗಳಿಕೆ ಹೊಂದಿದೆ.

Source: newsfirstlive.com Source link