‘ಮೂರನೇ ಅಲೆಯಿಂದ ಮಕ್ಕಳಿಗೆ ಭಾರೀ ಡೇಂಜರ್’- ​​​IISC ತಜ್ಞರ ವರದಿಯಲ್ಲಿ ಶಾಕಿಂಗ್​ ಸತ್ಯ​​

‘ಮೂರನೇ ಅಲೆಯಿಂದ ಮಕ್ಕಳಿಗೆ ಭಾರೀ ಡೇಂಜರ್’- ​​​IISC ತಜ್ಞರ ವರದಿಯಲ್ಲಿ ಶಾಕಿಂಗ್​ ಸತ್ಯ​​

ಬೆಂಗಳೂರು: ಕೊರೋನಾ ಮೂರನೇ ಅಲೆ ಶುರುವಾಗುತ್ತಿದ್ದಂತೆಯೇ ಮಕ್ಕಳಿಗೆ ಭಾರೀ ಅಪಾಯ ಎದುರಾಗಲಿದೆ. ಹೀಗೊಂದು ಶಾಕಿಂಗ್​​​​ ನ್ಯೂಸ್​​​ IISC ತಜ್ಞರ ಅಧ್ಯಯನ ವರದಿಯಲ್ಲಿ ಬಯಲಿಗೆ ಬಂದಿದೆ. ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಮಕ್ಕಳಲ್ಲಿ‌ ಹೆಚ್ಚು ಸೋಂಕು ಆಗಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮೊದಲನೇ ಅಲೆಗಿಂತ ಎರಡನೇ ಅಲೆ ವೇಳೆ ಎರಡೂವರೆ ಪಟ್ಟು ಸೋಂಕು ಮಕ್ಕಳಿಗೆ ಹೆಚ್ಚಳವಾಗಿದೆ. 1-19 ವರ್ಷದೊಳಗಿನ ಮಕ್ಕಳಲ್ಲಿ 2.5 ಪಟ್ಟು ಸೋಂಕು ಹೆಚ್ಚಳವಾಗಿದೆ. ಮೂರನೇ ಅಲೆ ಬಂದರೆ ಮಕ್ಕಳಲ್ಲಿ 7 ಪಟ್ಟು ಸೋಂಕು ಹೆಚ್ಚಳ ಆಗಲಿದೆ ಎಂದು IISC ತಜ್ಞರು ಹೇಳಿದ್ದಾರೆ.

ವ್ಯಾಕ್ಸಿನ್ ಇಲ್ಲದೇ ಇರೋದ್ರಿಂದ ಮಕ್ಕಳು ಟಾರ್ಗೆಟ್ ಗ್ರೂಪ್ ಆಗಿರ್ತಾರೆ. ಹೀಗಾಗಿ ಮೂರನೇ ಅಲೆ ಬಂದರೆ ಹೆಚ್ಚು ಸೋಂಕಿಗೆ ಒಳಗಾಗುತ್ತಾರೆ. ಇದುವರೆಗೂ ಮೊದಲ ಅಲೆಯಲ್ಲಿ 1-19 ಒಳಗಿನ 27,674‌ ಮಕ್ಕಳಿಗೆ ಸೋಂಕು ಪತ್ತೆಯಾಗಿದೆ. ಎರಡನೇ ಅಲೆಯಲ್ಲಿ 64,637 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿ: ಹಿಂದಿ ದಿವಸ್​​ ವಿರುದ್ಧ ಸಿಡಿದೆದ್ದ JDS; ಕನ್ನಡಿಗರ ಹಿತ ಕಾಯಲು ಸದಾ ಸಿದ್ಧ ಎಂದ HDK

ಹಾಗೆಯೇ ಮೊದಲನೇ ಅಲೆಯಲ್ಲಿ 10-19 ವಯಸ್ಸಿನ 64,806 ಮಕ್ಕಳಿಗೆ ಮತ್ತು ಎರಡನೇ ಅಲೆಯಲ್ಲಿ 1,63,566 ಮಕ್ಕಳಿಗೆ ಸೋಂಕು ಪತ್ತೆಯಾಗಿದೆ.

Source: newsfirstlive.com Source link