ಕಾಂಗ್ರೆಸ್​ ನಾಯಕನ ಹೆಸರಲ್ಲಿ ನಕಲಿ ಫೇಸ್​​ಬುಕ್​​ ಖಾತೆ ತೆರೆದು ಹಣ ಕೀಳುತ್ತಿರುವ ವಂಚಕರು

ಕಾಂಗ್ರೆಸ್​ ನಾಯಕನ ಹೆಸರಲ್ಲಿ ನಕಲಿ ಫೇಸ್​​ಬುಕ್​​ ಖಾತೆ ತೆರೆದು ಹಣ ಕೀಳುತ್ತಿರುವ ವಂಚಕರು

ಬೆಂಗಳೂರು: ಇತ್ತೀಚೆಗೆ ಫೇಸ್ಬುಕ್ ವಂಚಕರು ರಾಜಕಾರಣಿಗಳನ್ನೇ ಟಾರ್ಗೆಟ್​​​​ ಮಾಡಲು ಶುರು ಮಾಡಿದ್ದಾರೆ. ಇಷ್ಟು ದಿನ ಅಧಿಕಾರಿಗಳ ಹೆಸರಲ್ಲಿ ನಕಲಿ ಅಕೌಂಟ್ ಓಪನ್ ಆಗ್ತಿತ್ತು. ಈಗ ರಾಜಕಾರಣಿಗಳ ಹೆಸರಲ್ಲಿ ನಕಲಿ ಅಕೌಂಟ್ ಓಪನ್ ಮಾಡ್ತಿದ್ದಾರೆ. ಕಾಂಗ್ರೆಸ್​ ಮುಖಂಡ ಪಿ.ಎನ್ ಕೃಷ್ಣಮೂರ್ತಿ ಹೆಸರಿನಲ್ಲಿ ಫೇಕ್ ಅಕೌಂಟ್ ತೆರೆಯಲಾಗಿದೆ. ಎರಡು ಬಾರಿ ಎಂಎಲ್ಎ ಎಲೆಕ್ಷನ್​​ನಲ್ಲಿ ನಿಂತು ಸೋತಿದ್ದ ಕೃಷ್ಣಮೂರ್ತಿ ಹೆಸರಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿ ಹಣ ಕೇಳುತ್ತಿದ್ದಾರೆ.

ಪಿಎನ್. ಕೃಷ್ಣಮೂರ್ತಿ ಹೆಸರಿನಲ್ಲಿ ಹಣಕ್ಕಾಗಿ ಮೇಸಜ್ ಮಾಡಲಾಗಿದೆ. ಕೃಷ್ಣಮೂರ್ತಿ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಈ ಬಗ್ಗೆ ಸದ್ಯ ಕೃಷ್ಣಮೂರ್ತಿ ಬೆಂಗಳೂರು ಉತ್ತರ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೃಷ್ಣಮೂರ್ತಿ ತನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ಕೇಳಿದ ವ್ಯಕ್ತಿ ವಿರುದ್ದ ದೂರು ನೀಡಿದ್ದಾರೆ. ಅಲ್ಲದೇ ಯಾರೂ ಸಹ ಹಣ ನೀಡಬೇಡಿ ಎಂದು ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹಿಂದಿ ದಿವಸ್​​ ವಿರುದ್ಧ ಸಿಡಿದೆದ್ದ JDS; ಕನ್ನಡಿಗರ ಹಿತ ಕಾಯಲು ಸದಾ ಸಿದ್ಧ ಎಂದ HDK

Source: newsfirstlive.com Source link