ಹೆತ್ತ ಮಗನ ಕೊಲೆ ಆಗಿದ್ರು ಸುಮ್ಮನಾಗಿದ್ದ ತಾಯಿ; ಬಾಲಕನ ಕೊಲೆ ಕೇಸ್​ ಪತ್ತೆ ಆಗಿದ್ದೇ ರೋಚಕ

ಹೆತ್ತ ಮಗನ ಕೊಲೆ ಆಗಿದ್ರು ಸುಮ್ಮನಾಗಿದ್ದ ತಾಯಿ; ಬಾಲಕನ ಕೊಲೆ ಕೇಸ್​ ಪತ್ತೆ ಆಗಿದ್ದೇ ರೋಚಕ

ಅದೊಂದು ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದ ತಮಿಳುನಾಡು ಪೊಲೀಸರು 6 ತಿಂಗಳಿಂದ ತನಿಖೆ ನಡೆಸುತ್ತಿದ್ದರು. ಮೃತ ಪಟ್ಟಿದ್ದ ಬಾಲಕ ಯಾರು ಅನ್ನೋ ಹುಡುಕಾಟದಲ್ಲೇ ಇದ್ದ ಪೊಲೀಸರಿಗೆ, ಬಾಲಕ ಯಾರು ಅನ್ನೋದು ಪತ್ತೆ ಹಚ್ಚೋದಕ್ಕೆ ಆಗಿರಲಿಲ್ಲ. ಹಾಗಾಗಿ ಇನ್ನೆನು ಫೈಲ್​ ಕ್ಲೋಸ್​ ಮಾಡಿಬಿಡೋಣಾ ಅನ್ನೋ ಹಂತಕ್ಕೆ ಬಂದು ತಲುಪಿದ್ದರು. ಆಗಲೇ ನೋಡಿ ಅಲ್ಲಿಗೆ ಕರ್ನಾಟಕ ಪೊಲೀಸರು ಎಂಟ್ರಿ ಕೊಟ್ಟಿದ್ದು, ಬಾಲಕ ಯಾರು ಅಂತಾ ಅವರ ಮುಂದೆ ಫೈಲ್ ಅನ್ನ ಇಟ್ಟಿದ್ದು. ಮುಂದೇನಾಯ್ತು ಅನ್ನೋದೆ ರೋಚಕ..

ತಾಯಿ ನೀನೆ ಸರ್ವಸ್ವ ಅಂದುಕೊಂಡಿದ್ದವನು ಆತ. ಹೆತ್ತ ತಂದೆ ಜೊತೆಯಲ್ಲಿ ಇಲ್ಲದಿದ್ದರು ತಾಯಿ ಪ್ರೀತಿ ಮಾತ್ರ ಸಿಗುತ್ತಿತ್ತು. ಆದರೆ ಆತ ಬೆಳೆಯುತ್ತಾ ತಾಯಿ ಪ್ರೀತಿ ಕೂಡ ಕಡಿಮೆ ಆಗಿತ್ತು. ಹೀಗಿದ್ದ ಬಾಲಕ ಒಂದು ದಿನ ಕೊಲೆ ಆಗೋಗುತ್ತಾನೆ. ಬಾಲಕನ ಕೊಲೆಗೆ ಕಾರಣವಾಗಿದ್ದೇ ಆತನ ತಾಯಿ.. ಹೌದು.. ನೀವು ನಂಬಲು ಸಾಧ್ಯವಾಗದಿದ್ದರೂ ಇದುವೇ ಸತ್ಯ.. ಹಾಗಾದ್ರೆ ಆ ಬಾಲಕ ಯಾರು? ಆ ಬಾಲಕನನ್ನ ಕೊಲೆ ಮಾಡಿದ್ದು ಯಾರು? ಕಾರಣವೇನು?

ಇದೇ ವರ್ಷದ ಫೆಬ್ರವರಿ 7 ರಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಒಂದು ಬಾಲಕನ ಶವ ಪತ್ತೆ ಆಗಿತ್ತು.. ಅದನ್ನ ಸ್ಥಳೀಯರೊಬ್ಬರು ಗಮನಿಸಿ ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ತಮಿಳುನಾಡು ಪೊಲೀಸರು ದೌಡಾಯಿಸಿ ಬಾಲಕನ ಮೃತದೇಹವನ್ನ ಕಂಡು ಒಂದು ಫೋಟೋ ತೆಗೆದುಕೊಂಡು ನಂತರ ಮೃತ ದೇಹವನ್ನ ಶಿಫ್ಟ್ ಮಾಡಿ ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದರು. ಆಮೇಲೆ ಇನ್ನಿಲ್ಲದಂತೆ ಸತತವಾಗಿ 6 ತಿಂಗಳ ಕಾಲ ತನಿಖೆ ನಡೆಸಿದ್ದರು. ಆದ್ರೆ ಮೃತ ಪಟ್ಟಿದ್ದ ಬಾಲಕ ಯಾರು ಅನ್ನೋದು ಮಾತ್ರ ತಿಳಿದು ಬಂದಿರಲಿಲ್ಲ.

ಕೇವಲ 10 ವರ್ಷದ ಆಸು ಪಾಸಿನ ಬಾಲಕ ಅನ್ನೋದು ಮಾತ್ರ ತಿಳಿದುಬಂದಿತ್ತು. ಆಮೇಲೆ 6 ತಿಂಗಳಾದ್ರು ಕೂಡ ಪ್ರಕರಣ ಪತ್ತೆ ಆಗದ ಹಿನ್ನಲೆ ಕ್ಲೋಸ್ ಮಾಡಿಬಿಡೋಣಾ ಅನ್ನೋ ಹಂತಕ್ಕೆ ಬಂದು ತಲುಪಿದ್ದರು.. ಆಗಲೇ ನೋಡಿ ಬೆಂಗಳೂರು ಪೊಲೀಸರು ಎಂಟ್ರಿ ಕೊಡೋ ಮೂಲಕ ಅವರಿಗೆ ಒಂದು ಬಿಗ್ ಶಾಕ್ ಎದುರಾಗುವಂತೆ ಮಾಡಿದ್ದು.

ಕೊಲೆಯಾಗಿದ್ದ ಬಾಲಕನ ಬಗ್ಗೆ ಹೇಳಿದ್ದ ಪೊಲೀಸರು
ತಮಿಳುನಾಡಿಗೆ ತೆರಳಿದ್ದ ಬೆಂಗಳೂರಿನ ಮೈಕೋ ಲೇಔಟ್​ ಪೊಲೀಸರು, ಕೊಲೆಯಾಗಿದ್ದ ಬಾಲಕ ಬೆಂಗಳೂರಿನ ಮೂಲದವನು ಎಂಬ ಮಾಹಿತಿಯನ್ನ ಅಲ್ಲಿನ ಪೊಲೀಸರಿಗೆ ತಿಳಿಸಿದ್ದರು. ಅಲ್ಲದೇ ಬೆಂಗಳೂರಿನಲ್ಲಿ ಕೊಲೆ ಮಾಡಿ ಬಾಲಕನ ಮೃತ ದೇಹವನ್ನ ತಂದು ನಿಮ್ಮ ವ್ಯಾಪ್ತಿಯಲ್ಲಿ ಬಿಸಾಡಿ ಹೋಗಿದ್ದರು ಎಂದು ಹೇಳಿ ಅಲ್ಲಿ ಅಂತ್ಯವಾಗ್ತಿದ್ದ ಪ್ರಕರಣದ ತನಿಖೆಗೆ ಮತ್ತೆ ನಾಂದಿ ಹಾಡಿದ್ದರು.. ಹಾಗಾದ್ರೆ ಕೊಲೆಯಾದ ಬಾಲಕ ಯಾರು, ಕೊಲೆ ಮಾಡಿದ್ದು ಯಾರು ಅನ್ನೋ ಕ್ಯೂರಿಯಾಸಿಟಿ ತಮಿಳುನಾಡು ಪೊಲೀಸರಲ್ಲಿ ಮೂಡಿತ್ತು. ಆಗಲೇ ನೋಡಿ ಮೈಕೋ ಲೇಔಟ್ ಪೊಲೀಸರು ಎಲ್ಲಾ ವಿಚಾರವನ್ನ ಅಲ್ಲಿ ಬಹಿರಂಗ ಪಡಿಸಿದ್ದು.

10 ವರ್ಷದ ಬಾಲಕನನ್ನ ಕೊಲೆ ಮಾಡಿದ್ದು ತಾಯಿಯ ಸ್ನೇಹಿತ
ಅವತ್ತು ಫೆಬ್ರವರಿ 7 ರಂದು 10 ವರ್ಷದ ಬಾಲಕನನ್ನ ಕೊಲೆ ಮಾಡಿದ್ದು ಬೇರೆ ಯಾರು ಅಲ್ಲಾ, ಆತನೇ ಸುನೀಲ್ ಅನ್ನೋ ಆರೋಪಿ.. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸುನೀಲ್ ತನ್ನ ಮನೆಯಲ್ಲಿ ಸ್ನೇಹಿತೆಯ ಮಗನನ್ನ ಸಾಕಿ ಸಲಹುತ್ತಿದ್ದ.. ಆದ್ರೆ ಹಲವು ದಿನಗಳಿಂದ ಬಾಲಕನ ವಿರುದ್ದ ದ್ವೇಷ ಸಾಧಿಸುತ್ತಿದ್ದ ಸುನೀಲ್ ಅವತ್ತಿನ ದಿನ ಬಾಲಕನ ಮುಖಕ್ಕೆ ಪ್ಲಾಸ್ಟಿಕ್ ಕವರ್​​​ನಿಂದ ಉಸಿರು ಗಟ್ಟಿಸಿ, ನಂತರ ಕೈನಿಂದ ಹಲ್ಲೆ ಮಾಡಿದ್ದಲ್ಲದೆ, ರಾಡ್​ನಿಂದಲೂ ಬಲವಾಗಿ ಹೊಡೆದು ಕೊಲೆ ಮಾಡಿಬಿಡುತ್ತಾನೆ. ನಂತರ ಮೃತ ದೇಹವನ್ನ ಬಾರಿಗೆ ಕಾರೊಂದನ್ನ ಮಾಡಿಕೊಂಡು ಹೋಗಿ ತಮಿಳುನಾಡಿನ ಬರಗೂರ್ ಸಮೀಪದ ನಿರ್ಜನ ಪ್ರದೇಶಲ್ಲಿ ಶವವನ್ನ ಎಸೆದು ಬಂದಿದ್ದರು..
ಕೊಲೆ ಮಾಡಲು ಕಾರಣವೇ ಅಚ್ಚರಿ ಮೂಡಿಸಿತ್ತು

ಇನ್ನು ಪ್ರಕರಣವನ್ನ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪಿ ಸುನೀಲ್​ ನನ್ನ ಬಂಧಿಸಿ ನಂತರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ತಾನೇ ಕೊಲೆ ಮಾಡಿದ್ದಾಗಿ ಹೇಳಿ, ತನ್ನ ತಪ್ಪನ್ನ ಒಪ್ಪಿಕೊಂಡಿದ್ದ. ಅಲ್ಲದೇ ಹೇಗೆಲ್ಲಾ ಕೊಲೆ ಮಾಡಿದ್ದ ಅನ್ನೋದನ್ನ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದ. ಹಾಗು ತನಗೆ ಯಾರೆಲ್ಲಾ ಸಾತ್ ನೀಡಿದ್ದರು ಅನ್ನೋದರ ಬಗ್ಗೆ ಮಾಹಿತಿಯನ್ನ ಸಹ ಪೊಲೀಸರ ಮುಂದೆ ಹಂಚಿಕೊಂಡಿದ್ದ. ಸುನೀಲ್ ಬಾಯಿ ಬಿಡುತ್ತಿದ್ದಂತೆ ಅದನ್ನ ಕೇಳಿದ್ದ ಪೊಲೀಸರಿಗೆ ಒಂದು ಕ್ಷಣ ಶಾಕ್ ಆಗಿತ್ತು. ಹಾಗಾದ್ರೆ ಆರೋಪಿ ಸುನೀಲ್​​​​ಗೆ ಸಾತ್ ನಿಡಿದ್ದವರು ಯಾರು ಗೊತ್ತಾ?

ಹತ್ಯೆ ಬಳಿಕ ಸಾಥ್ ಕೊಟ್ಟಿದ್ದು ಯಾರು?
ಸುನೀಲ್ ಬಾಲಕನನ್ನ ಕೊಲೆ ಮಾಡುತ್ತಿದ್ದಂತೆ ಮೊದಲು ಕರೆ ಮಾಡಿದ್ದೇ, ತನ್ನ ಸ್ನೇಹಿತೆಗೆ. ಆ ನಂತರ ಬಾಲಕನ ತಾಯಿಗೆ.. ಹೌದು.. ತಾನು ವಾಸವಿದ್ದ ಬಾಡಿಗೆ ಮನೆಗೆ ತಕ್ಷಣವೇ ಬರುವಂತೆ ಬಾಲಕನ ತಾಯಿಗೆ ಸುನೀಲ್ ಫೋನ್ ಮಾಡಿ ಹೇಳಿದ್ದ. ತಕ್ಷಣ ಅಲ್ಲಿಗೆ ಬಂದ ಬಾಲಕನ ತಾಯಿ, ತನ್ನ ಮಗ ಕೊಲೆಯಾಗಿರೋದನ್ನ ನೋಡಿ ಒಂದು ಕ್ಷಣ ಗಾಬರಿಗೊಂಡಿದ್ದಳು. ಆ ನಂತರ ಸುನೀಲ್ ಪ್ರೇಯಸಿ ಸಿಂಧು ಇಬ್ಬರು ಪ್ಲಾನ್ ಮಾಡಿಕೊಂಡು ತಾಯಿಯ ಮನವೊಲಿಸಿ ನಂತರ ಪರಿಚಯಸ್ಥರ ಕಾರನ್ನ ಬಾಡಿಗೆಗೆಂದು ಪಡೆದುಕೊಂಡು ಅದರಲ್ಲಿ ಮೃತದೇಗಹವನ್ನ ಹಾಕಿಕೊಂಡು ತಗೊಂಡ್​ ಹೋಗಿ ಪಕ್ಕದ ರಾಜ್ಯದ ತಮಿಳುನಾಡಿನಲ್ಲಿ ಎಸೆದು ಬಂದಿದ್ದರು

ಮಗ ಕಣ್ಣೆದ್ರು ಶವವಾಗಿ ಮಲಗಿದ್ದರು ತಾಯಿ ಮೌನ
ಹೌದು. ತನ್ನ ಮಗನ ಕೊಲೆ ಆಗಿದ್ದರು ಕೂಡ ಆ ತಾಯಿ ಸುಮ್ಮನಾಗಿದ್ದಳು ಅನ್ನೋದೆ ಇಲ್ಲಿ ಬೇಸರದ ಸಂಗತಿ.. ಹೆತ್ತ ಮಗನೇ ಸತ್ತು ಕಣ್ಣ ಮುಂದೆ ಶವವಾಗಿ ಮಲಗಿದ್ದರು ಕೂಡ ಆಕೆ ಸುಮ್ಮನಾಗಿದ್ದಳು. ಅಷ್ಟೇ ಅಲ್ಲದೆ ಹೆತ್ತ ತಾಯಿನೇ ಕೊಲೆ ಮಾಡಿದ್ದ ಸುನೀಲ್​​ಗೆ ಸಾತ್ ನೀಡಿದ್ದಳು ಅಲ್ಲದೇ ತಾನೇ ಖದ್ದು ಸುನೀಲ್ ಜೊತೆಯಲ್ಲಿ ತಮಿಳುನಾಡಿಗೆ ತೆರಳಿ ಮಗನ ಮೃತ ದೇಹವನ್ನ ಎಸೆದು ಬಂದಿದ್ದಳು. ಅಲ್ಲದೇ ಸುನೀಲ್​​ ಪ್ರೇಯಸಿ ಸಿಂಧು ಕೂಡ ಇಬ್ಬರಿಗೂ ಸಾತ್ ನೀಡಿದ್ದಳು ಅನ್ನೋದು ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿತ್ತು.
ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ

6 ತಿಂಗಳಾದ್ರು ಪತ್ತೆಯಾಗದ ಹತ್ಯೆಯಾದವರ ಮಾಹಿತಿ
ಮೈಕೋ ಲೇಔಟ್ ಪೊಲೀಸರಿಗೆ ಸಿಕ್ಕಿತ್ತು ಇನ್​ಫರ್ಮೇಶನ್

ಇನ್ನು 6 ತಿಂಗಳಾದ್ರು ಕೂಡ ತಮಿಳುನಾಡು ಪೊಲೀಸರಿಗೆ ಶವವಾಗಿ ಪತ್ತೆ ಆಗಿದ್ದ ಬಾಲಕ ಯಾರು ಅನ್ನೋದು ಗೊತ್ತಾಗಿರಲಿಲ್ಲ. ಆದ್ರೆ ಆತ ಯಾರು ಅನ್ನೋದು ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರಿಗೆ ಗೊತ್ತಾಗಿದ್ದು ಸಹ ಒಂದು ಕೂತಹಲಕಾರಿ ಸನ್ನಿವೇಷದಿಂದಾಗಿ.

ದೂರು ನೀಡಿ ಸಿಕ್ಕಿ ಬಿದ್ದ ಬಾಲಕನ ತಾಯಿ
ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ವಾಸ
ಬಾಲಕನ ತಾಯಿ ಮೂಲತಹ ತಮಿಳುನಾಡಿನವರಾದ್ರು ಬೆಂಗಳೂರಿಗೆ ಬಂದು ನೆಲೆಸಿ ಬಹಳ ವರ್ಷಗಳಾಗಿತ್ತು. ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದ ಬಾಲಕನ ತಾಯಿ ನಂತರ ಗಂಡನನ್ನ ಬಿಟ್ಟು ತಾನೊಬ್ಬಳೆ ತನ್ನ ಮಗನನ್ನ ನೋಡಿಕೊಂಡು ಜೀವನ ಸಾಗಿಸುತ್ತಿದ್ದಳು. ಆ ಸಂದರ್ಭದಲ್ಲಿ ಆಕೆಗೆ ಸುನೀಲ್ ಪರಿಚಯ ಆಗಿತ್ತು. ಪರಿಚಯ ತುಂಬಾನೆ ಸಲಹೆಯನ್ನ ಸಹ ಬೆಳೆಸಿಕೊಂಡಿದ್ದಳಂತೆ. ತನ್ನ ತಾಯಿ ಜೊತೆ ಸುನೀಲ್ ಸಲಹೆಯಿಂದ ನಡೆದುಕೊಳ್ಳುತ್ತಿದ್ದದ್ದನ್ನ ಗಮನಿಸಿದ್ದ ಬಾಲಕ ಹಲವು ಬಾರು ಸೂನೀಲ್​​ಗೆ ತಾಯಿ ಜೊತೆ ಸಲುಗೆಯಿಂದ ಇರಬೇಡಾ ಅಂತಾ ಹೇಳಿದ್ದನಂತೆ. ಇದೇ ಕಾರಣಕ್ಕಾಗಿ ಸುನೀಲ್​ ಬಾಲಕನಿಗೆ ಚಿತ್ರ ಹಿಂಸೆ ನೀಡುತ್ತಿದ್ದನಂತೆ. ಆದ್ರೆ ಇದೆಲ್ಲಾ ತಿಳಿದಿದ್ದ ತಾಯಿ ಮಾತ್ರ ಸುಮ್ಮನೆ ಇರುತ್ತಿದ್ದಳಂತೆ.

ಇನ್ನು ಕೊಲೆಯಾದ ಬಳಿಕ ಬಾಲಕನ ಅಜ್ಜಿ ತಾಯಿ ಬಳಿ ಪದೇ ಪದೇ ಕೇಳಿಕೊಳ್ಳುತ್ತಿದ್ದಳು. ಎಲ್ಲಿ ಬಾಲಕ ಎಲ್ಲ ಬಾಲಕ ಅಂತಾ. ಎಷ್ಟೇ ಕೇಳಿದ್ರು ಕೂಡ ತಾಯಿ ಒಂದೊಂದು ಬಾರಿಯೂ ಒಂದೊಂದು ಸಬೂಬ್​​ ಅನ್ನ ಹೇಳಿಕೊಂಡು ಬರುತ್ತಿದ್ದಳಂತೆ. ಆದ್ರೆ ಆಗಸ್ಟ್​​ ತಿಂಗಳಲ್ಲಿ ಅಜ್ಜಿ ಚೆನ್ನಾಗಿ ತಾಯಿಗೆ ಬೈದಿದ್ದರಂತೆ. ಆದ್ದರಿಂದ ತಾಯಿ ಇನ್ನಿಲ್ಲದ ಮನಸ್ಸಿನಿಂದಲೇ ಆಗಸ್ಟ್​ 25 ರಂದು ಸೀದಾ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರನ್ನ ಮಗ ನಾಪತ್ತೆ ಆಗಿದ್ದ ಎಂದು ಮಿಸ್ಸಿಂಗ್ ಕಂಪ್ಲೆಂಟ್​ ದಾಖಲಿಸಿ ಬಂದಿದ್ದಳಂತೆ.

ಮಿಸ್ಸಿಂಗ್ ಕಂಪ್ಲೆಂಟ್​ ದಾಖಲಿಸಿಕೊಂಡ ಮೈಕೋ ಲೇಔಟ್ ಠಾಣೆಯ ಇನ್​ಸ್ಪೆಕ್ಟರ್​​ ಆರ್ ಎಸ್​ ಚೌದರಿ, ತಾಯಿಯನ್ನ ಅಲ್ಲೆ ಒಂದು ಪ್ರಶ್ನೆಯನ್ನ ಮಾಡ್ತಾರೆ. ಅದು 6 ತಿಂಗಳ ಬಳಿಕ ನೀವು ಯಾಕೆ ಬಂದು ಈಗ ದೂರನ್ನ ಕೊಡುತ್ತಿದ್ದೀರಾ ಎಂದು. ಆಗಲೇ ನೋಡಿ ತಾಯಿ ಮುಖದಲ್ಲಿ ಬೆವರು ನೀರು ಬರೋದನ್ನ ಗಮನಿಸಿದ್ದ ಇನ್​​​​ಸ್ಪೆಕ್ಟರ್​ಗೆ ಅನುಮಾನ ಮೂಡೋದಕ್ಕೆ ಶುರು ಆಗಿದ್ದು. ತಕ್ಷಣ ಪೊಲೀಸರು, ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾಯಿ ಎಲ್ಲವನ್ನ ಬಾಯಿ ಬಿಟ್ಟಿದ್ದಳು. ತಕ್ಷಣ ಪೊಲೀಸರು ಸುನೀಲ್ ಅನ್ನ ಕೂಡ ಕರೆದುಕೊಂಡು ಬಂದು ವಿಚಾರಣೆ ನಡೆಸಿ ಬಂಧಿಸಿದ್ರು..

ಸುನೀಲ್​ಗೆ ಆಕೆಯ ಪರಿಚಯವಾಗಿದ್ದೇಗೆ?
ಗಂಡನನ್ನ ಬಿಟ್ಟು ಬಂದಿದ್ದ ಸಿಂಧು ಜೊತೆ ಸುತ್ತಾಟ
ಇನ್ನು ಸುನೀಲ್ ಒಬ್ಬ ಅಪರಾಧ ಹಿನ್ನಲೆಯುಳ್ಳವನು ಅನ್ನೋದು ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ತಿಳಿದು ಬಂದಿತ್ತು. 33 ವರ್ಷದ ಸುನೀಲ್​​​ಗೆ ಇನ್ನು ಮದುವೆ ಕೂಡ ಆಗಿರಲಿಲ್ಲ. ಪ್ರೇಯಸಿ ಎಂದು ಸುನೀಲ್ ಜೊತೆ ತಿರುಗಾಡುತ್ತಿದ್ದ ಸಿಂಧು ಕೂಡ ಗಂಡನನ್ನ ಬಿಟ್ಟು ದೂರ ಆಗಿದ್ದಳು. ನಂತರದ ದಿನಗಳಲ್ಲಿ ಸುನೀಲ್ ಜೊತೆಯಲ್ಲಿ ಸಿಂಧು ಕೂಡ ವಾಸ ಮಾಡಿಕೊಂಡಿದ್ದಳು. ಹೀಗಿದ್ದ ಸುನೀಲ್ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ ಬಾಲಕ ಮತ್ತು ಬಾಲಕನ ತಾಯಿ ಪರಿಚಯ ಆಗಿ ಮುಂದೆ ಬಾಲಕನ ತಾಯಿ ಜೊತೆ ಸಲುಗೆಯನ್ನ ಬೆಳೆಸಿಕೊಂಡಿದ್ದ. ಅದೇ ಸಲುಗೆ ಅಂದು ಮಗನ್ನ ಕೊಲೆ ಮಾಡುವ ಹಂತಕ್ಕೆ ತಲುಪಿತ್ತು ಅನ್ನೋದು ಪೊಲೀಸ್ ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿದೆ.

ಒಟ್ಟಿನಲ್ಲಿ ಮೂವರನ್ನ ಬಂಧಿಸಿರೋ ಮೈಕೋ ಲೇಔಟ್ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಅಲ್ಲದೇ ತಮಿಳಿನಾಡು ಪೊಲೀಸರು ದಾಖಲು ಮಾಡಿಕೊಂಡಿದ್ದ ಪ್ರಕರಣದ ಫೈಲ್ ಅನ್ನ ಪಡೆದುಕೊಂಡು ತನಿಖೆಯನ್ನ ಮುಂದುವರೆಸಲು ಪ್ಲಾನಿಂಗ್ ಅನ್ನ ಸಹ ಮಾಡಿಕೊಂಡಿದ್ದಾರೆ.

ಮುದ್ದಾದ ಬಾಲಕನ ಭವಿಷ್ಯದಲ್ಲಿ ಆಸರೆ ಆಗಬೇಕಿದ್ದ ತಾಯಿಯೇ ಪ್ರಾಣ ಹೋದ್ರು ಪೊಲೀಸರಿಗೆ ಮಾಹಿತಿ ನೀಡದೆ ಬಂಧಿತಳಾಗಿ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ. ಏನೆ ಆಗಲಿ ಹೆತ್ತ ತಾಯಿಯೇ ಹೀಗೆ ಕ್ರೂರಿ ಆಗೋದ್ರೆ ಮಕ್ಕಳ ಗತಿ ಅದೋಗತಿ ಆಗುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Source: newsfirstlive.com Source link