ಬೆಂಗಳೂರಿನಲ್ಲಿ ಹಾಡಹಗಲೇ ಯುವತಿಯ ಅಂಗಾಂಗ ಮುಟ್ಟಿ ಹಲ್ಲೆ

ಬೆಂಗಳೂರು: ಕಾಮುಕನೊಬ್ಬ ಯುವತಿಯ ಅಂಗಾಂಗವನ್ನು ಮುಟ್ಟಿ, ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಲ್ಯಾಂಗ್ ಪೋರ್ಡ್ ರಸ್ತೆಯಲ್ಲಿ ನಡೆದಿದೆ.

ಜಯನಗರದ ಸೌತ್ ಎಂಡ್ ಸರ್ಕಲ್‍ನಲ್ಲಿರುವ ಬ್ಯಾಂಕಿನಲ್ಲಿ ಬಿಪಿಓ ಆಗಿ ಯುವತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ 354(ಮಾನಭಂಗ ಮಾಡುವ ಉದ್ದೇಶದಿಂದ ಮಹಿಳೆ ಮೇಲೆ ಹಲ್ಲೆ) ಅಡಿ ಅಶೋಕ್‍ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ:ಎರಡೂವರೆ ತಿಂಗಳಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ- ಆರೋಪಿ ಬಂಧನ

ಸೆ.12 ಭಾನುವಾರ ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಲ್ಯಾಂಡ್ ಪೋರ್ಡ್ ರಸ್ತೆಯ ಕಡೆ ತೆರಳುತ್ತಿದ್ದ ವೇಳೆಯಲ್ಲಿ ಅಕ್ಕಿತಿಮ್ಮನಹಳ್ಳಿಯ ಗಣೇಶ ಮಂದಿರದ ಬಳಿ ಅಪರಿಚಿತ ವ್ಯಕ್ತಿಯೊರ್ವ ಹಿಂಭಾಗದಿಂದ ತಬ್ಬಿಕೊಂಡು ಹಲ್ಲೆ ನಡೆಸಿದ್ದಾನೆ.ಇದನ್ನೂ ಓದಿ:ಬೆಂಗಳೂರಿನ ಹೋಟೆಲ್‍ನಲ್ಲಿ ಅಗ್ನಿ ಅವಘಡ – 7 ಜನ ಪಾರು, ತಪ್ಪಿತು ಭಾರೀ ಅನಾಹುತ

ಈ ವೇಳೆಯಲ್ಲಿ ಸ್ಥಳೀಯರು ನನ್ನ ನೆರವಿಗೆ ಧಾವಿಸಿ ಸಹಾಯ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ:10 ದಿನದಲ್ಲಿ 13 ಹಾರರ್ ಸಿನಿಮಾ ನೋಡಿದ್ರೆ ಸಿಗುತ್ತೆ 95 ಸಾವಿರ ರೂ.

Source: publictv.in Source link