ಬಟ್ಟೆ ಬದಲಿಸುವ ವಿಡಿಯೋ ಮಾಡಿ ಅಪ್ರಾಪ್ತೆ ಮೇಲೆ ಅತ್ಯಚಾರ ಎಸಗಿದ ಆರೋಪ; ಇಬ್ಬರು ಅರೆಸ್ಟ್​

ಬಟ್ಟೆ ಬದಲಿಸುವ ವಿಡಿಯೋ ಮಾಡಿ ಅಪ್ರಾಪ್ತೆ ಮೇಲೆ ಅತ್ಯಚಾರ ಎಸಗಿದ ಆರೋಪ; ಇಬ್ಬರು ಅರೆಸ್ಟ್​

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿ ಮೇಲೆ ಕಿಡಿಗೇಡಿ ಯುವಕರ ಗುಂಪೊಂದು ಅತ್ಯಾಚಾರ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಬಟ್ಟೆ ಬದಲಿಸುವ ವಿಡಿಯೋ ಮಾಡಿ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ ಎಂದು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎರಡು ತಿಂಗಳಿನಿಂದ ಬಾಲಕಿಯ ಮೇಲೆ ಕಿಡಿಗೇಡಿಗಳ ಗುಂಪು ಅತ್ಯಾಚಾರ ಎಸಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

​ಕರೆದಾಗ ಬರದಿದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುವ ಬೆದರಿಕೆ ಹಾಕಿ ಅತ್ಯಾಚಾರ ಎಸಗಲಾಗಿದೆ. ಆರೋಪಿ ಹೀನ ಕೃತ್ಯಕ್ಕೆ ಅದೇ ಗ್ರಾಮದ ಮತ್ತೊಬ್ಬ ಸಪೋರ್ಟ್ ಮಾಡಿದ್ದಾರೆ. ವಿಡಿಯೋ ನೋಡಿ ಇನ್ನಿಬ್ಬರು ಬಾಲಕಿಗೆ ರಸ್ತೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಗಣಪತಿ ವಿಸರ್ಜನೆ ವೇಳೆ ವಿಡಿಯೋ ಬಗ್ಗೆ ಯುವಕರು ಚರ್ಚೆ ನಡೆಸಿದ್ದಾರೆ ಎಂದು ಅಪ್ರಾಪ್ತೆ ದೂರು ನೀಡಿದ್ದಾರೆ.

ಇದನ್ನೂ ಓದಿ: ‘ಮೂರನೇ ಅಲೆಯಿಂದ ಮಕ್ಕಳಿಗೆ ಭಾರೀ ಡೇಂಜರ್’- ​​​IISC ತಜ್ಞರ ವರದಿಯಲ್ಲಿ ಶಾಕಿಂಗ್​ ಸತ್ಯ​​

ಇನ್ನು, ಅಪ್ರಾಪ್ತ ಬಾಲಕಿ ದೂರು ನೀಡುತ್ತಿದ್ದಂತೆಯೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಾಲ್ವರ ಮೇಲೆ ಕೇಸ್ ದಾಖಲಿಸಿರುವ ಪೊಲೀಸರು, ಇಬ್ಬರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

Source: newsfirstlive.com Source link