5 ಲಕ್ಷ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ

5 ಲಕ್ಷ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ

ಶಿವಮೊಗ್ಗ: ಆಟೋದಲ್ಲಿ ಬಿಟ್ಟು ಹೋಗಿದ್ದ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಾರಸುದಾರರಿಗೆ ವಾಪಸ್ ನೀಡಿ ಆಟೋ ಚಾಲಕ ಪ್ರಮಾಣಿಕತೆ ಮೆರೆದಿರುವ ಘಟನೆ ನಗರದಲ್ಲಿ ಜರುಗಿದೆ.

ಬಿ.ಎಚ್. ರಸ್ತೆಯ ಕರ್ನಾಟಕ ಸಂಘದ ಆಟೋ ನಿಲ್ದಾಣದ ಚಾಲಕ ಮಜೀದ್ ಎಂಬುವರ ಆಟೋದಲ್ಲಿ ಪ್ರಯಾಣಿಕರೊಬ್ಬರು 5 ಲಕ್ಷದ ಚಿನ್ನಾಭರಣವಿದ್ದ ಬ್ಯಾಗ್​​ ಬಿಟ್ಟು ಹೋಗಿದ್ದರು. ಇದನ್ನು ಕಂಡ ಅಟೋ ಚಾಲಕ ತಕ್ಷಣ ಬ್ಯಾಗ್​​ ಅನ್ನು ಕೋಟೆ ಪೊಲೀಸ್​ ಠಾಣೆಗೆ ನೀಡಿದ್ದ. ಅದೇ ಸಮಯಕ್ಕೆ ಬ್ಯಾಗ್​ ಕಳೆದುಕೊಂಡಿದ್ದ ವ್ಯಕ್ತಿ ದೂರು ನೀಡಲು ಬರುತ್ತಿದ್ದರು. ಈ ವೇಳೆ ಪೊಲೀಸರು ಆಟೋ ಚಾಲಕನ ಮೂಲಕವೇ ವಾರಸುದಾರನಿಗೆ ಬ್ಯಾಗ್​​ ತಲುಪಿಸಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Source: newsfirstlive.com Source link