ಹಿಂದಿ ದಿವಸ್​​ ವಿರುದ್ಧ ಬೀದಿಗಿಳಿದ ಕನ್ನಡಪರ ಸಂಘಟನೆಗಳಿಗೆ ನೋಟಿಸ್​​ ನೀಡಿದ ಪೊಲೀಸರು

ಹಿಂದಿ ದಿವಸ್​​ ವಿರುದ್ಧ ಬೀದಿಗಿಳಿದ ಕನ್ನಡಪರ ಸಂಘಟನೆಗಳಿಗೆ ನೋಟಿಸ್​​ ನೀಡಿದ ಪೊಲೀಸರು

ಬೆಂಗಳೂರು: ರಾಜ್ಯದಲ್ಲಿ ಒತ್ತಾಯಪೂರ್ವಕವಾಗಿ ಹಿಂದಿ ದಿವಸ್​ ಕಾರ್ಯಕ್ರಮ ನಡೆಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ. ವಿವಿಧ ಕನ್ನಡ ಪರ ಸಂಘಟನೆಗಳು ನಗರದಲ್ಲಿಂದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಕನ್ನಡಪರ ಸಂಘಟನೆ ಹೋರಾಟಗಾರರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.

ವಂದೇಮಾತರಂ ಸೇವಾ ಸಂಸ್ಥೆ, ಸರ್ವ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಇತರೆ ಸಂಘಟನೆಗಳ ಮುಖಂಡರಿಗೆ ಪೊಲೀಸ್ ನೋಟಿಸ್ ನೋಟಿಸ್​ ನೀಡಿದೆ. ಜೊತೆಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಕೇಂದ್ರ ಸರ್ಕಾರದ ಸಂಸ್ಥೆಗಳ ಬಳಿ ಪ್ರತಿಭಟಿಸಬಾರದು.ಸರ್ಕಾರಿ ಕಚೇರಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ಕಚೇರಿಯ ನಾಮಫಲಕಗಳಿಗೆ ಮಸಿ ಬಳಿಯಬಾರದು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಬಾರದು. ಹೀಗೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದೆಂದು ಕನ್ನಡಪರ ಹೋರಾಟಗಾರರು ವಾಸವಾಗಿರುವ ಆಯಾ ಠಾಣೆ ಇನ್ಸ್​ಪೆಕ್ಟ್​​ರ್​ಗಳಿಂದ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ಸಂಪ್​ನಲ್ಲಿದ್ದ ನೀರು ತನಗೆ ತಾನೇ ಬಿಸಿಯಾಗ್ತಿದೆ.. ಭೂವಿಜ್ಞಾನಿಗಳಿಗೂ ತಲೆಕೆಡಿಸಿದ ನಿಗೂಢ ರಹಸ್ಯ

blank

Source: newsfirstlive.com Source link