ನಟಿ ಸಮಂತಾಗೆ ನಾಗಚೈತನ್ಯ ಥ್ಯಾಂಕ್ಸ್​ ಹೇಳಿದ್ಯಾಕೆ?

ನಟಿ ಸಮಂತಾಗೆ ನಾಗಚೈತನ್ಯ ಥ್ಯಾಂಕ್ಸ್​ ಹೇಳಿದ್ಯಾಕೆ?

ಕಳೆದ ಕೆಲವು ದಿನಗಳಿಂದ ಟಾಲಿವುಡ್​ ಸ್ಟಾರ್​ ದಂಪತಿಗಳಾದ ಸಮಂತಾ ಮತ್ತು ನಾಗಚೈತನ್ಯ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಮಾತು ಕೇಳಿಬರುತ್ತಿತ್ತು. ಇನ್ನು ಅದಕ್ಕೆ ಸಾಕ್ಷಿ ಎಂಬಂತೆ ಸಮಂತಾ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಸಮಂತಾ ಅಕ್ಕಿನೇನಿ ಎಂದು ಇದ್ದ ಹೆಸರನ್ನು ಬರಿ ಎಸ್ ಅಂತಾ ಮಾಡಿಕೊಂಡಿದ್ದು.

ಮೊನ್ನೆ ನಾಗಾರ್ಜುನ ಬರ್ತ್​ಡೇ ಸೆಲೆಬ್ರೇಶನ್​ ಟೈಮ್​ನಲ್ಲೂ ಸಮಂತಾ ಅಕ್ಕಿನೇನಿ ಫ್ಯಾಮಿಲಿ ಪೋಟೋದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೀಗ ನಾಗಚೈತನ್ಯ ಸಮಂತಾರಿಗೆ ತಮ್ಮ ಟ್ವಿಟರ್​ನಲ್ಲಿ ಥ್ಯಾಂಕ್ಸ್​ ಎಂದು ಹೇಳಿದ್ದಾರೆ.

ಹೌದು ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಇದೇ ಸೆಪ್ಟೆಂಬರ್​ 24 ನೇ ತಾರೀಕ್​ ರಿಲೀಸ್​ ಆಗಲಿದೆ. ಸದ್ಯ ಚಿತ್ರದ ಟ್ರೈಲರ್​ ಬಿಡಗಡೆಯಾಗಿದೆ. ಸಮಂತಾ ‘ಲವ್​ ಸ್ಟೋರಿ’ ಸಿನಿಮಾದ ಟ್ರೈಲರ್​ ಅನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದು ಚಿತ್ರಕೆ ಶುಭಾಶಯಗಳನ್ನು ಕೋರಿದ್ದಾರೆ. ಇನ್ನು ಸಮಂತಾರ ಈ ವಿಶ್​ಗೆ ನಾಗಾಚೈತನ್ಯ ಥ್ಯಾಂಕ್ಸ್​ ಸ್ಯಾಮ್​ ಅಂತಾ ರಿಪ್ಲೈ ಮಾಡಿದ್ದಾರೆ.

ಇದನ್ನೂ ಓದಿ: ದೂರಾಗ್ತಾರಾ ಸಮಂತಾ- ನಾಗಚೈತನ್ಯ ಜೋಡಿ? ಡಿವೋರ್ಸ್ ಬಗ್ಗೆ ಸಮಂತಾ ಹೇಳೋದೇನು?

Source: newsfirstlive.com Source link