‘ಹಳ್ಳಿಯಿಂದ ದಿಲ್ಲಿಗೆ ಹೋಗಿ ಮೆರೆದ ಆಸ್ಕರ್​ ಫರ್ನಾಂಡಿಸ್​’- ​ಕೋಟ ಶ್ರೀನಿವಾಸ ಪೂಜಾರಿ ಹೀಗಂದಿದ್ಯಾಕೆ?

‘ಹಳ್ಳಿಯಿಂದ ದಿಲ್ಲಿಗೆ ಹೋಗಿ ಮೆರೆದ ಆಸ್ಕರ್​ ಫರ್ನಾಂಡಿಸ್​’- ​ಕೋಟ ಶ್ರೀನಿವಾಸ ಪೂಜಾರಿ ಹೀಗಂದಿದ್ಯಾಕೆ?

ಉಡುಪಿ: ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ಸೂಚಿಸಿದ್ದಾರೆ

ಆಸ್ಕರ್ ಫರ್ನಾಂಡಿಸ್ ಅವರು ಪಕ್ಷಾತೀತವಾಗಿ ಗೌರವ ಗಳಿಸಿದವರು, ಉಡುಪಿಯಂತಹ ಸಣ್ಣ ಊರಿನಿಂದ ರಾಜಕೀಯ ಆರಂಭಿಸಿ ದಿಲ್ಲಿಯಲ್ಲಿ ತಮ್ಮದೆ ಆದ ಪ್ರಭಾವದಿಂದ ಮೆರೆದವರು. ಟಿಎಂಎ ಪೈ, ವಿ.ಎಸ್. ಆಚಾರ್ಯ ಮೊದಲಾದ ಹಿರಿಯರ ಜೊತೆ ಅವರಿಗೆ ಒಡನಾಟವಿತ್ತು ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

ಇನ್ನು ಆಸ್ಕರ್ ಫರ್ನಾಂಡಿಸ್ ಅವರಿಗೆ ಸದನದಲ್ಲಿ ವಿಶೇಷ ಗೌರವ ಸಲ್ಲಿಸಲು ಸಭಾಪತಿಗಳು ಸೂಚಿಸಿದ್ದು, ಸಕಲ ಸರಕಾರಿ ಗೌರವಗಳೊಂದಿಗೆ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿದೆ ಎಂದು ಸಚಿವ ಪೂಜಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೂರಾಗ್ತಾರಾ ಸಮಂತಾ- ನಾಗಚೈತನ್ಯ ಜೋಡಿ? ಡಿವೋರ್ಸ್ ಬಗ್ಗೆ ಸಮಂತಾ ಹೇಳೋದೇನು?

 

Source: newsfirstlive.com Source link