ಮಹದೇವಮ್ಮ ದೇಗುಲ ನೆಲಸಮ; ಬಿಜೆಪಿ ಸರ್ಕಾರದ ವಿರುದ್ಧ ಹೈಕಮಾಂಡ್​​ಗೆ ದೂರು ನೀಡಲು ಮುಂದಾದ RSS

ಮಹದೇವಮ್ಮ ದೇಗುಲ ನೆಲಸಮ; ಬಿಜೆಪಿ ಸರ್ಕಾರದ ವಿರುದ್ಧ ಹೈಕಮಾಂಡ್​​ಗೆ ದೂರು ನೀಡಲು ಮುಂದಾದ RSS

ಮೈಸೂರು: ಮಹದೇವಮ್ಮ ದೇಗುಲ ತೆರವು ವಿವಾದ ತಾರಕಕ್ಕೇರಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ದೇವಾಲಯ ತೆರವುಗೊಳಿಸಿ ಕೆಂಗಣ್ಣಿಗೆ ಗುರಿಯಾದ ರಾಜ್ಯ ಸರ್ಕಾರದ ವಿರುದ್ಧ ಹೈಕಮಾಂಡ್​ಗೆ ದೂರು ನೀಡಲು ಆರ್‌ಎಸ್‌ಎಸ್ ನಾಯಕರು ಮುಂದಾಗಿದ್ದಾರೆ.

ದೇಗುಲ ತೆರವಿನಲ್ಲಿ ಮೈಸೂರು ಬಿಜೆಪಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದ ಈಗ ಬೀಸೋ ದೊಣ್ಣೆಯಿಂದ ಪಾರಾಗಲು ಪ್ಲಾನ್​​ ಮಾಡಿರುವ ರಾಜ್ಯ ಸರ್ಕಾರ, ಘಟನೆಯ ಹೊಣೆಯನ್ನ ಅಧಿಕಾರಿಗಳ ತಲೆಗೆ ಕಟ್ಟಲು ಯತ್ನಿಸುತ್ತಿದೆ.

ಮೂವರು ಶಾಸಕರು, ಇಬ್ಬರು ಸಂಸದರು, ಪಾಲಿಕೆ ಮೇಯರ್ ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿ ಪಕ್ಷದವರೇ ಇದ್ದಾರೆ. ದೇಗುಲ ತೆರವಿನಲ್ಲಿ ಬಿಜೆಪಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ನೆಲಸಮಗೊಂಡ ದೇವಸ್ಥಾನದ ಬಳಿಯೇ ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದ ಗ್ರಾಮಸ್ಥರು

Source: newsfirstlive.com Source link