‘ದೇವಾಲಯಗಳ ಒಡೆಯುತ್ತಿರುವ ಬಿಜೆಪಿ ಸರ್ಕಾರ’- HDK ಆಕ್ರೋಶ

‘ದೇವಾಲಯಗಳ ಒಡೆಯುತ್ತಿರುವ ಬಿಜೆಪಿ ಸರ್ಕಾರ’- HDK ಆಕ್ರೋಶ

ಬೆಂಗಳೂರು: ಬಿಜೆಪಿ ಸರ್ಕಾರದಿಂದಲೇ ದೇವಾಲಯ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತಾಡಿದ ಎಚ್​​ಡಿಕೆ, ದೇಗುಲ ಒಡೆಯುತ್ತಿರೋದಕ್ಕೆ ಬಿಜೆಪಿ ಕಾರಣ. ಬಿಜೆಪಿ ಸರ್ಕಾರದಿಂದಲೇ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದರು.

ರಾಜ್ಯದಲ್ಲಿ ಹಲವು ಹಿಂದೂ ದೇವಸ್ಥಾನ ತೆರವು ಮಾಡಿದ್ದಾರೆ. ಮೈಸೂರಿನಲ್ಲಿ ಆಗಿರುವಂತಹ ಘಟನೆಗಳನ್ನ ಗಮನಿಸಿದ್ದೇನೆ. ದೇಗುಲ ತೆರವು ಮಾಡಿರೋದರ ಬಗ್ಗೆ ಧರಣಿ ನಡೆಯುತ್ತಿದೆ ಎಂದು ಹೇಳಿದರು.

ಇನ್ನು, ಹಿಂದೂ ಜಾಗರಣ ಸಮಿತಿ ಅನ್ನೋದು ಬಿಜೆಪಿಯ ಅಂಗ. ಜನರನ್ನ ದಾರಿ ತಪ್ಪಿಸೋ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಎಸಗಿದರು.

ಇದನ್ನೂ ಓದಿ: ಮಹದೇವಮ್ಮ ದೇಗುಲ ನೆಲಸಮ; ಬಿಜೆಪಿ ಸರ್ಕಾರದ ವಿರುದ್ಧ ಹೈಕಮಾಂಡ್​​ಗೆ ದೂರು ನೀಡಲು ಮುಂದಾದ RSS

Source: newsfirstlive.com Source link