‘ಕೋರ್ಟ್​ ಹೆಸರಲ್ಲಿ ದೇಗಲು ಕೆಡವಿದ ಬಿಜೆಪಿ ಸರ್ಕಾರ’- ಮಾಜಿ ಸಚಿವ ಎಚ್​.ಡಿ ರೇವಣ್ಣ

‘ಕೋರ್ಟ್​ ಹೆಸರಲ್ಲಿ ದೇಗಲು ಕೆಡವಿದ ಬಿಜೆಪಿ ಸರ್ಕಾರ’- ಮಾಜಿ ಸಚಿವ ಎಚ್​.ಡಿ ರೇವಣ್ಣ

ಬೆಂಗಳೂರು: ಮೈಸೂರು ದೇಗುಲ ನೆಲಸಮ ವಿಚಾರ ಕುರಿತು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ದೇವಾಲಯ ಕೆಡವುದಕ್ಕೂ ಮೊದಲು ಎಲ್ಲರ ಜೊತೆ ಚರ್ಚೆ ನಡೆಸಿ, ಸ್ಥಳೀಯವಾಗಿ ಎಲ್ಲಾ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸಬೇಕು ಎಂದಿದ್ದಾರೆ.

ಇಂದು ವಿಧಾನಸೌಧದ ಲಾಂಜ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೇಗುಲ ನೆಲಸಮ ಮಾಡಿರುವುದನ್ನು ನಾನು ವಿರೋಧಿಸುತ್ತೆನೆ. ಸುಪ್ರೀಂ ಆದೇಶ ಪಾಲಿಸಬೇಕು ಕಂಡಿತ ನಿಜ. ಆದರೆ ಆ ಭರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದ ಹಾಗೇ ಸಂಬಧಿಸಿದ ಸ್ಥಳೀಯ ನಾಯಕರು, ಅಥವಾ ಆ ದೇವಸ್ಥಾನಗಳ ಕಮೀಟಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಈ ರೀತಿ ಏಕಾಏಕಿ ದಾಳಿ ನಡೆಸಿ ದೇಗುಲ ನೆಲಸಮ ಮಾಡುವುದು ಸರಿಯಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದೆ ಆದರೆ, ಪ್ರತಾಪ್ ಸಿಂಹ ಪ್ರತಿಭಟನೆ ಮಾಡುತ್ತೇನೆ ಅಂತಿದ್ದಾರೆ. ಅವರದ್ದೆ ಪಕ್ಷ ಇದ್ದರೂ ಕೂಡ ಅವರು ಯಾಕೆ ಈ ರೀತಿ ಹೇಳ್ತಿದ್ದಾರೋ ಗೊತ್ತಿಲ್ಲ. ಸುಪ್ರೀಂ ಕೋರ್ಟ್​ ಹೆಸರಲ್ಲಿ ಬಿಜೆಪಿ ಸರ್ಕಾರ ದೇವಸ್ಥಾನಗಳನ್ನು ಕೆಡುವುತ್ತಿದೆ ಎಂದು ರೇವಣ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ:‘ದೇವಾಲಯಗಳ ಒಡೆಯುತ್ತಿರುವ ಬಿಜೆಪಿ ಸರ್ಕಾರ’- HDK ಆಕ್ರೋಶ

Source: newsfirstlive.com Source link