ಸ್ಯಾಂಡಲ್​​ವುಡ್​​​ ಪ್ರತಿಭಾವಂತ ಸಂಭಾಷಣೆ ಬರಹಗಾರ ಕಶ್ಯಪ್​ ನಿಧನ

ಸ್ಯಾಂಡಲ್​​ವುಡ್​​​ ಪ್ರತಿಭಾವಂತ ಸಂಭಾಷಣೆ ಬರಹಗಾರ ಕಶ್ಯಪ್​ ನಿಧನ

ಸ್ಯಾಂಡಲ್​ವುಡ್​ನ ಖ್ಯಾತ ಪ್ರತಿಭಾವಂತ ಸಂಭಾಷಣೆ ಬರಹಗಾರ ಗುರು ಕಶ್ಯಪ್​ (45) ಹೃದಯಘಾತದಿಂದ ನಿಧನರಾಗಿದ್ದಾರೆ. ಕಳೆದ ರಾತ್ರಿ ಗುರು ಕಶ್ಯಪ್ ಅವರಿಗೆ ಹೃದಯಘಾತ ಸಂಭವಿಸಿದ ಕಾರಣ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದರೆ, ಹೋಗುವ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ.

ಕೆಲ ಚಿತ್ರದಲ್ಲಿ ಸಹ-ನಿರ್ದೇಶಕರಾಗಿಯು ಗುರು ಕಶ್ಯಪ್ ಕೆಲಸ ಮಾಡಿದ್ದಾರೆ. ರಮೇಶ್​ ಅರವಿಂದ್​ ನಟನೆಯ ನಟನೆಯ ‘ಪುಷ್ಪಕ ವಿಮಾನ’, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸುಂದರಾಂಗ ಜಾಣ’, ಪ್ರಜ್ವಲ್ ದೇವರಾಜ್ ನಟನೆಯ ‘ಇನ್​ಸ್ಪೆಕ್ಟರ್ ವಿಕ್ರಮ್ ‘ ಚಿತ್ರಕ್ಕೆ ಗುರು ಕಶ್ಯಪ್ ಡೈಲಾಗ್ ಬರೆದಿದ್ದರು.

ಇನ್ನೂ ಬಿಡುಗಡೆಯಾದ ಸಿನಿಮಾಗಳಾದ ಡಾಲಿ ಧನಂಜಯ್ ನಟನೆಯ ‘ಮಾನ್ಸೂನ್ ರಾಗ’, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘ಬೈರಾಗಿ’, ‘ವೀಲ್ ಚೇರ್ ರೋಮಿಯೋ’ ಮುಂತಾದ ಸಿನಿಮಾಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆಯುತ್ತಿದ್ದರು. ಗುರು ಕಶ್ಯಪ್ ಅವರ ಸಾವಿಗೆ ನಟ ಡಾಲಿ ಧನಂಜಯ್​ , ರಮೇಶ್​ ಅರವಿಂದ್​ ಸೇರಿದಂತೆ ಅನೇಕ ನಟರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ನಟಿ ಸಮಂತಾಗೆ ನಾಗಚೈತನ್ಯ ಥ್ಯಾಂಕ್ಸ್​ ಹೇಳಿದ್ಯಾಕೆ?

Source: newsfirstlive.com Source link