ಚರ್ಚ್​​-ಮಸೀದಿ ಬಿಟ್ಟು ಕೇವಲ ದೇಗುಲ ಮಾತ್ರ ಟಾರ್ಗೆಟ್​ ಯಾಕೆ?- ಶಾಸಕ ರೇಣುಕಾಚಾರ್ಯ ಕಿಡಿ

ಚರ್ಚ್​​-ಮಸೀದಿ ಬಿಟ್ಟು ಕೇವಲ ದೇಗುಲ ಮಾತ್ರ ಟಾರ್ಗೆಟ್​ ಯಾಕೆ?- ಶಾಸಕ ರೇಣುಕಾಚಾರ್ಯ ಕಿಡಿ

ಬೆಂಗಳೂರು: ಮೈಸೂರು ದೇಗುಲ ನೆಲಸಮ ವಿಚಾರ ಕುರಿತು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ಚರ್ಚು, ಮಸೀದಿಗಳನ್ನ ಬಿಟ್ಟು ಕೇವಲ ದೇವಸ್ಥಾನದ ಮೇಲೆ‌ ಅಧಿಕಾರಿಗಳಿಗೆ ಯಾಕೆ ಕಣ್ಣು ಎಂದು ಕಿಡಿ ಕಾರಿದ್ದಾರೆ.

ಇಂದು ವಿಧಾನಸೌಧದ ಲಾಂಜ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 1700 ದೇಗುಲ ನೆಲಸಮ‌ ಮಾಡಲು ಈಗಾಗಲೇ ನೋಟಿಫಿಕೇಷನ್ ಬಂದಿದೆ. ದೇವಸ್ಥಾನಕ್ಕೆ ಏಕಾಏಕಿ ಅಧಿಕಾರಿಗಳು ದಾಳಿ ಮಾಡುವುದು ಸರಿಯಲ್ಲ. ನಮಗೆ ಚರ್ಚ್, ಮಸೀದಿ ಒಂದೇ ಆದರೆ ಕೇವಲ ದೇವಸ್ಥಾನ ‌ಮೇಲೆ‌ ಯಾಕೆ‌ ಟಾರ್ಗೆಟ್ ಎಂದು ಶಸಕ ರೇಣುಕಾಚಾರ್ಯ ಆಕ್ರೋಶ ವವ್ಯಕ್ತಪಡಿಡಿದ್ದಾರೆ.

ಬಿಜೆಪಿ ಪಕ್ಷ ನಮ್ಮ ದೇಶದ ಪರಂಪರೆ. ಹಾಗೂ ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಪಕ್ಷ ಬಿಜೆಪಿ. ಕಾಂಗ್ರೆಸ್ ಹಿಂದೂತ್ವದ ವಿರೋಧಿ ಬಿಜೆಪಿ ಹಿಂದೂ, ಮುಸ್ಲಿಂ , ಕ್ರೈಸ್ತ ಸೇರಿದಂತೆ ಎಲ್ಲಾ ಧರ್ಮಕ್ಕೆ ಗೌರವ ‌ಕೊಡುತ್ತೇವೆ. ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಬರುತ್ತೇವೆ, ದೇವಸ್ಥಾನಗಳ ಮೇಲೆ ನಮಗೆ ಸಾಕಷ್ಟು ಭಕ್ತಿ ಇದೆ ಆದ್ದರಿಂದ ಹಿಂದುಗಳ ಭಾವನೆಗೆ ಧಕ್ಕೆ ಆಗಬಾರದು ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಇದನ್ನೂ ಓದಿ: ನೆಲಸಮಗೊಂಡ ದೇವಸ್ಥಾನದ ಬಳಿಯೇ ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದ ಗ್ರಾಮಸ್ಥರು

Source: newsfirstlive.com Source link