‘ಹಬ್ಬದ ದಿನವೇ ದೇಗುಲ ನೆಲಸಮ ಮಾಡಿದ್ದು ನನಗೆ ಅತೀವ ನೋವು ತಂದಿದೆ’- ಸಿ.ಟಿ ರವಿ

‘ಹಬ್ಬದ ದಿನವೇ ದೇಗುಲ ನೆಲಸಮ ಮಾಡಿದ್ದು ನನಗೆ ಅತೀವ ನೋವು ತಂದಿದೆ’- ಸಿ.ಟಿ ರವಿ

ಮೈಸೂರು: ನಂಜನಗೂಡು ದೇಗುಲ ನೆಲಸಮ ವಿಚಾರ ಕುರಿತು ಶಾಸಕ ಸಿ.ಟಿ.ರವಿ ಮಾತನಾಡಿದ್ದು, ದೇವಸ್ಥಾನ ತೆರವುಗೊಳಿಸಿರುವುದು ಸರಿಯಲ್ಲ. ಈ ಘಟನೆ ಕೋಟ್ಯಾಂತರ ಜನರಿಗೆ ನೋವು ತಂದಿದೆ ಎಂದಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ದೇಗುಲ ತೆರವು ಮಾಡುವುದಕ್ಕು ಒಂದು ಗೌರವಯುತವಾದ ರೀತಿ ನೀತಿ ಇರುತ್ತೆ. ಆದರೆ ಹಬ್ಬದ ದಿನವೇ ದೇಗುಲ ತೆರವುಗೊಳಿಸಿರೋದು ನಮಗೆಲ್ಲ ನೋವು ತಂದಿದೆ.

ನಾನು ಮುಖ್ಯಮಂತ್ರಿಗಳ ಜೊತೆ ಮಾತಾಡ್ತೇನೆ. ಅವರ ಮುಂದೆ ನನ್ನ ಭಾವನೆಗಳನ್ನ ವ್ಯಕ್ತಪಡಿಸ್ತೇನೆ. ಅನುಷ್ಠಾನಗೊಳಿಸಲು ಸಾಧ್ಯವಾಗದ ನ್ಯಾಯಲಾಯದ ಹಲವು ತೀರ್ಪುಗಳ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಹಾಗೆಯೇ ಈ ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಲಾಗುವುದು ಎಂದರು.

ಇದನ್ನೂ ಓದಿ: ‘ಸುಪ್ರೀಂ ಆದೇಶದಂತೆ ದೇಗುಲ ತೆರವುಗೊಳಿಸಿದ ಜಿಲ್ಲಾಡಳಿತ’- ಸಚಿವ ಆರ್​​. ಅಶೋಕ್​​

Source: newsfirstlive.com Source link