‘ದೇಗುಲ ಹಿಂದೂಗಳ ಭಾವನಾತ್ಮಕ ವಿಚಾರ ಮಾತ್ರವಲ್ಲ, ಕರ್ನಾಟಕದ ಪ್ರತಿಬಿಂಬ’- ಸಿಎಂ ಇಬ್ರಾಹಿಂ

‘ದೇಗುಲ ಹಿಂದೂಗಳ ಭಾವನಾತ್ಮಕ ವಿಚಾರ ಮಾತ್ರವಲ್ಲ, ಕರ್ನಾಟಕದ ಪ್ರತಿಬಿಂಬ’- ಸಿಎಂ ಇಬ್ರಾಹಿಂ

ಬೆಂಗಳೂರು: ನಂಜನಗೂಡು ದೇವಾಲಯ ತೆರವು ವಿಚಾರ ತಾರಕಕ್ಕೇರಿದೆ. ಕಾಂಗ್ರೆಸ್​  ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿದ್ದು, ನಂಜನಗೂಡಿನ ಪುರಾತನ ದೇವಾಲಯ ತೆರವು ಮಾಡಿರೋದು ಸರಿಯಲ್ಲ ಎಂದಿದ್ದಾರೆ.

ದೇವಸ್ಥಾನ ಹಿಂದೂಗಳಿಗೆ ಮಾತ್ರ ಭಾವನಾತ್ಮಕ ವಿಚಾರ ಅಲ್ಲ. ದೇವಸ್ಥಾನಗಳು ಕೇವಲ ಹಿಂದೂಗಳ ಸಂಸ್ಕೃತಿಯ ಪ್ರತಿಬಿಂಬವಲ್ಲ. ಅವು ಕರ್ನಾಟಕ ರಾಜ್ಯದ ಪ್ರತಿಬಿಂಬ. ದೇಶದಲ್ಲಿ ಸದ್ಯ ಬಿಜೆಪಿ ಬಾರಾ‌ ಖೂನ್ (12 ಕೊಲೆ ಮಾಡಿದರು ಕ್ಷಮೆ) ಮಾಡಿದ್ರೂ ಮಾಫ್ ಎಂಬ ಪರಿಸ್ಥಿತಿ ಇದೆ ಎಂದರು.

ಪೆಟ್ರೋಲ್ 150 ರೂ ಆದರೂ ಮಾಫ್, ದೇವಾಲಯ ತೆರವುಗೊಳಿಸಿದ್ರು ಮಾಫ್​ ಎನ್ನುವಂತಾಗಿದೆ. ಇನ್ನು ದೇವಾಲಯ ತೆರವುಗೊಳಿಸಿರುವು ಸರಿಯಲ್ಲ. ಹೀಗಾಗಿ ಕೂಡಲೇ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಮಾಡಿ ಆದೇಶ ಹಿಂಪಡೆಯಬೇಕು ಎಂದಿದ್ದಾರೆ.

ಇದನ್ನೂ ಓದಿ:‘ದೇವಾಲಯಗಳ ಒಡೆಯುತ್ತಿರುವ ಬಿಜೆಪಿ ಸರ್ಕಾರ’- HDK ಆಕ್ರೋಶ

ಇದನ್ನೂ ಓದಿ: ‘ಸುಪ್ರೀಂ ಆದೇಶದಂತೆ ದೇಗುಲ ತೆರವುಗೊಳಿಸಿದ ಜಿಲ್ಲಾಡಳಿತ’ ಸಚಿವ ಆರ್​​. ಅಶೋಕ್​​ ಸಮರ್ಥನೆ

Source: newsfirstlive.com Source link