ಹಿಟ್​​ ಮ್ಯಾನ್​​ಗೆ ಟೀಮ್​​ ಇಂಡಿಯಾ ಸಾರಥ್ಯ; ಕ್ಯಾಪ್ಟನ್​​​​ ಆಗಲು ‘ರೋಹಿತ್’​​​ಗಿರುವ ಕ್ವಾಲಿಟಿಗಳೇನು?

ಹಿಟ್​​ ಮ್ಯಾನ್​​ಗೆ ಟೀಮ್​​ ಇಂಡಿಯಾ ಸಾರಥ್ಯ; ಕ್ಯಾಪ್ಟನ್​​​​ ಆಗಲು ‘ರೋಹಿತ್’​​​ಗಿರುವ ಕ್ವಾಲಿಟಿಗಳೇನು?

ಟಿ20 ವಿಶ್ವಕಪ್​ ಬಳಿಕ ಟೀಮ್ ಇಂಡಿಯಾದಲ್ಲಿ ನಾಯಕತ್ವವನ್ನ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಗುತ್ತೆ ಅಂತ ಹೇಳಲಾಗ್ತಿದೆ. ಆದರೆ ಈ ಬಗ್ಗೆ ಬಿಸಿಸಿಐ ಚರ್ಚೆ ನಡೆಸಿಲ್ಲ ಅನ್ನೋದು ಅಧಿಕೃತವಾಗಿ ಹೇಳಿದೆ. ಒಂದು ವೇಳೆ ರೋಹಿತ್​ಗೆ ನಾಯಕತ್ವದ ಜವಾಬ್ದಾರಿ ನೀಡಲೇಬೇಕು ಎಂಬ ಪರಿಸ್ಥಿತಿ ಬಂದರೆ ಯಾವ ಕಾರಣಕ್ಕಾಗಿ ಪಟ್ಟ ಕಟ್ಟಲಾಗುತ್ತೆ. ಇಷ್ಟಕ್ಕೂ ಅವರಲ್ಲಿ ನಾಯಕನಾಗುವ ಕ್ವಾಲಿಟಿಗಳೇನು.? ಎಂಬುದರ ಸುತ್ತ ಒಂದು ನೋಟ.

ಬ್ಯಾಟಿಂಗ್​​ನತ್ತ ಕೊಹ್ಲಿ, ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಮೂರು ಮಾದರಿಯಲ್ಲಿ ನಾಯಕನಾಗಿ ಮುಂದುವರಿಯುವ ಬದಲು, ಟೆಸ್ಟ್ ತಂಡಕ್ಕೆ ಮಾತ್ರ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಹಾಗಾಗಿ IPL​​ನ ಮೋಸ್ಟ್​ ಸಕ್ಸಸ್​ಫುಲ್​​ ಕ್ಯಾಪ್ಟನ್​ ಎನಿಸಿರುವ​ ರೋಹಿತ್​ ಶರ್ಮಾಗೆ, ಏಕದಿನ ಮತ್ತು ಟಿ20 ತಂಡಗಳಿಗೆ ನಾಯಕತ್ವ ನೀಡೋಕೆ ಬಿಸಿಸಿಐ ತೀರ್ಮಾನಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಮುಂಬೈ ಇಂಡಿಯನ್ಸ್​ ತಂಡವನ್ನ 5 ಬಾರಿ ಚಾಂಪಿಯನ್​​ ಪಟ್ಟಕ್ಕೇರಿಸಿದ ಹೆಗ್ಗಳಿಕೆ ರೋಹಿತ್​​ಗಿದೆ. ರೋಹಿತ್​ ನಾಯಕತ್ವದಲ್ಲಿ ಮುಂಬೈ 5 ಬಾರಿ ಚಾಂಪಿಯನ್​ ಆಗೋದ್ರ ಜೊತೆಗೆ, 6 ಬಾರಿ ಪ್ಲೇ ಆಫ್​​ಗೂ ಪ್ರವೇಶ ಪಡೆದಿದೆ. ಇದರ ಜೊತೆಗೆ ಟೀಮ್ ಇಂಡಿಯಾವನ್ನ ಮುನ್ನಡೆಸಿದ ಅನುಭವ ಕೂಡ ರೋಹಿತ್​ಗಿದೆ.

ರೋಹಿತ್​ ನಾಯಕತ್ವದಲ್ಲಿ ಟೀಮ್ ಇಂಡಿಯಾ ನಿದಹಾಸ್​ ಟ್ರೋಫಿ, ಏಷ್ಯಾಕಪ್​ ಟ್ರೋಫಿ ಮತ್ತು ತವರಿನಲ್ಲಿ ವೆಸ್ಟ್​ ಇಂಡೀಸ್​​​ ವಿರುದ್ಧ ಕ್ಲೀನ್​ಸ್ವೀಪ್​ ಸಾಧನೆ ಮಾಡಿದೆ. ಟೀಮ್​ ಇಂಡಿಯಾ ಮತ್ತು ಐಪಿಎಲ್​​ನಲ್ಲಿ ಸಕ್ಸಸ್​ ಕಂಡಿರುವ ರೋಹಿತ್​ರನ್ನ, ವೈಟ್​​ಬಾಲ್​ ಕ್ರಿಕೆಟ್​​​ ತಂಡದ ನಾಯಕನನ್ನಾಗಿ ಮಾಡಬೇಕು ಅನ್ನೋ ಕೂಗು ಜೋರಾಗಿತ್ತು. ಅದರಂತೆ ರೋಹಿತ್​​ಗೆ​ ಜವಾಬ್ದಾರಿ ಸಿಗುವ ಕಾಲ ಹತ್ತಿರಕ್ಕೆ ಬಂದಿದೆ ಎನ್ನಲಾಗಿದೆ.

10 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಾಯಕನಾಗಿದ್ದ ರೋಹಿತ್​, 8ರಲ್ಲಿ ಗೆದ್ದು, 2ರಲ್ಲಿ ಸೋತಿದ್ದಾರೆ. ಇನ್ನ 19 ಟಿ20 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದ ಹಿಟ್​ಮ್ಯಾನ್​, 15ರಲ್ಲಿ ಗೆಲುವು ಮತ್ತು 4 ಟಿ20 ಪಂದ್ಯಗಳಲ್ಲಿ ಸೋತಿದ್ದಾರೆ. ಹಾಗೇ ಐಪಿಎಲ್​​ನಲ್ಲಿ ನಾಯಕನಾಗಿ 123 ಪಂದ್ಯಗಳಲ್ಲಿ 74ರಲ್ಲಿ ಗೆಲುವು ಮತ್ತು 49ರಲ್ಲಿ ಸೋಲು ಕಂಡಿದ್ದಾರೆ.

ಇದನ್ನೂ ಓದಿ: ಟೀಮ್​​ ಇಂಡಿಯಾ ನಾಯಕತ್ವಕ್ಕೆ ಗುಡ್​ಬೈ ಹೇಳಲು ಕೊಹ್ಲಿ ನಿರ್ಧಾರ? ಮುಂದಿನ ಕ್ಯಾಪ್ಟನ್​​ ಯಾರು?

ರೋಹಿತ್​ಗೆ ನಾಯಕತ್ವ ನೀಡಿದ್ರೆ, ಮತ್ತಷ್ಟು ಸಕ್ಸಸ್​ ಕಾಣಬಹುದು ಅನ್ನೋದು ಬಿಸಿಸಿಐ ದೃಷ್ಟಿಯಾಗಿದೆ. ಹಾಗಂತ ವಿರಾಟ್​​ ಕೊಹ್ಲಿ ನಾಯಕತ್ವದಲ್ಲೂ ಭಾರತ ಉತ್ತಮ ಪ್ರದರ್ಶನ ನೀಡಿಲ್ಲವೆಂದೆಲ್ಲ. ಇನ್ನ ಕೆಲವೇ ಪಂದ್ಯಗಳಿಗೆ ರೋಹಿತ್​ ಕ್ಯಾಪ್ಟನ್​ ಆದರೂ, ನಾಯಕತ್ವದ ಶೈಲಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಜೊತೆಗೆ ಮುಂದಿನ 2 ವಿಶ್ವಕಪ್​ದೃಷ್ಟಿಯಲ್ಲಿಟ್ಟುಕೊಂಡು ಮತ್ತು​ ಕೊಹ್ಲಿ-ರೋಹಿತ್​ ನಡುವಿನ ಸ್ನೇಹ ವೃದ್ಧಿಗೆ ಬಿಸಿಸಿಐ ಮಾಸ್ಟರ್​​ ಪ್ಲಾನ್ ಹಾಕಿಕೊಂಡಿದೆ.

ನಾಯಕರಾಗಿ ಇಬ್ಬರಲ್ಲೂ ತುಂಬಾನೇ ವ್ಯತ್ಯಾಸಗಳಿವೆ. ನಾಯಕನಾಗಿ ರೋಹಿತ್​​ಗೆ ಹೆಚ್ಚು ತಾಳ್ಮೆ ಇದೆ. ಹಾಗೇ ಯೋಚನಾ ಲಹರಿ, ಟೆಕ್ನಿಕ್​, ಎದುರಾಳಿ ತಂಡವನ್ನ ಕಟ್ಟಿಹಾಕಲು ಬೇಕಾದ ಮನೋನಿಶ್ಚಯ, ಒತ್ತಡವನ್ನ ಪರಿಪಕ್ವವಾಗಿ ನಿಭಾಯಿಸೋದು, ಕೊಹ್ಲಿಗಿಂತ ಭಿನ್ನವಾಗಿದೆ. ಕೊಹ್ಲಿ ಕೂಡ ಈ ಎಲ್ಲವನ್ನೂ ಹೊಂದಿದ್ದಾರೆ. ಆದರೆ ಒತ್ತಡ ನಿಭಾಯಿಸುವ ಮತ್ತು ಬೌಲಿಂಗ್​​ ವಿಭಾಗವನ್ನ ಸದ್ಭಳಕೆ ಮಾಡಿಕೊಳ್ಳುವ ಸಾಮರ್ಥ್ಯ, ಅವರಲ್ಲಿ ಕಾಡ್ತಿದೆ. ರೋಹಿತ್​ ಕೂಲ್​ ಆ್ಯಂಡ್​ ಕಾಮ್​ ವ್ಯಕ್ತಿತ್ವ ಹೊಂದಿದ್ರೆ, ಕೊಹ್ಲಿ ಸದಾ ಅಗ್ರೆಸ್ಸಿವ್​ ಮೂಡ್​ನಲ್ಲಿರುತ್ತಾರೆ.

ಒಟ್ನಲ್ಲಿ ಕೊಹ್ಲಿ ಕೆಳಗಿತಾರೆ, ರೋಹಿತ್​ ಪಟ್ಟಕ್ಕೇರುತ್ತಾರೆ ಅನ್ನೋ ರೂಮರ್ಸ್​ಗಳು ಎದ್ದಿವೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದನ್ನ ಕಾದುನೋಡಬೇಕಿದೆ.

Source: newsfirstlive.com Source link