‘ಜನಪರ ರಾಜಕಾರಣಿ ಫರ್ನಾಂಡಿಸ್​​​​ ಅಗಲಿಕೆ ನೋವು ತಂದಿದೆ’- ಸಿಎಂ ಬೊಮ್ಮಾಯಿ ಸಂತಾಪ

‘ಜನಪರ ರಾಜಕಾರಣಿ ಫರ್ನಾಂಡಿಸ್​​​​ ಅಗಲಿಕೆ ನೋವು ತಂದಿದೆ’- ಸಿಎಂ ಬೊಮ್ಮಾಯಿ ಸಂತಾಪ

ಬೆಂಗಳೂರು: ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,ಆಸ್ಕರ್ ಫರ್ನಾಂಡೀಸ್ ಅವರು ಅಜಾತ ಶತ್ರು. ಸಜ್ಜನ ಹಾಗೂ ಜನಪರ ರಾಜಕಾರಣಿ‌. ಕರ್ನಾಟಕದ ಬಗ್ಗೆ ತುಂಬಾ ಪ್ರೀತಿ ಇತ್ತು. ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಲೆ‌ ಸಂಗೀತದ ಮೇಲೆ ಆಸಕ್ತಿ ಹೊಂದಿದ್ದ ಫರ್ನಾಂಡಿಸ್ ಬಹಳ ಉತ್ಸಾಯಿಯಾಗಿದ್ದರು. ಇವರ ಅಗಲಿಕೆ ಬಹಳ ದುಃಖ ತರಿಸಿದೆ, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವುಕರಾದರು.

ಇದನ್ನೂ ಓದಿ: ‘ಹಬ್ಬದ ದಿನವೇ ದೇಗುಲ ನೆಲಸಮ ಮಾಡಿದ್ದು ನನಗೆ ಅತೀವ ನೋವು ತಂದಿದೆ’- ಸಿ.ಟಿ ರವಿ

Source: newsfirstlive.com Source link