ಹೊಸಬರ ಎಂಟ್ರಿಯಿಂದ RCBಗೆ ಮತ್ತಷ್ಟು ಬಲ; ಈ ಬಾರಿಯಾದ್ರೂ ಕಪ್​​ ಗೆಲ್ಲುತ್ತಾ ಕೊಹ್ಲಿ ಪಡೆ..!

ಹೊಸಬರ ಎಂಟ್ರಿಯಿಂದ RCBಗೆ ಮತ್ತಷ್ಟು ಬಲ; ಈ ಬಾರಿಯಾದ್ರೂ ಕಪ್​​ ಗೆಲ್ಲುತ್ತಾ ಕೊಹ್ಲಿ ಪಡೆ..!

14 ವರ್ಷಗಳ ಕನಸು, ಇನ್ನೂ ಕನಸಾಗೇ ಇದೆ. ಪ್ರತಿ ವರ್ಷವೂ ಈ ಸಲ ಕಮ್ ನಮ್ದೆ ಅಂತಿದ್ದ ಕ್ರಿಕೆಟ್​​ ಅಭಿಮಾನಿಗಳು, ಈ ಬಾರಿ ತಂಡದ ಮೇಲೆ ಭಾರೀ ನಿರೀಕ್ಷೆ ಇಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕಪ್ ಗೆಲ್ಲಲಿ ಅಂತ, ಕೊಹ್ಲಿ ಬಾಯ್ಸ್​ಗೆ ನಮ್ಮ ಹೆಮ್ಮೆಯ ಕನ್ನಡಿಗರು ಬೆಂಬಲವಾಗಿ ನಿಂತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಫೇಸ್​-2ಗೆ, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಸಿದ್ಧತೆ ನಡೆಸಿಕೊಂಡಿದೆ. ಕಳೆದ ಬಾರಿ ದುಬೈನಲ್ಲಿ ನಡೆದ ಟೂರ್ನಿಯಲ್ಲಿ ಕೊಹ್ಲಿ ಪಡೆ, ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಆದ್ರೆ ಈ ಬಾರಿ ಆರ್​ಸಿಬಿ ಮುಂದೆ, ದೊಡ್ಡ ಸವಾಲೇ ಇದೆ. ಚೊಚ್ಚಲ ಪ್ರಶಸ್ತಿ ಗೆಲ್ಲೋ ಕನಸಿನಲ್ಲಿರುವ ಬೆಂಗಳೂರು ತಂಡ, ಹರಾಜಿನಲ್ಲಿ ಕೆಲ ಆಟಗಾರರನ್ನ ಖರೀದಿಸಿದೆ. ಆ ಮೂಲಕ ತಂಡವನ್ನ, ಮತ್ತಷ್ಟು ಬಲಿಷ್ಟಗೊಳಿಸಿದೆ.

ಗೆಲುವಿನ ಫಾರ್ಮ್​ ಮುಂದುವರಿಸೋದೇ ಚಾಲೆಂಜ್..!

ಕಳೆದ ಬಾರಿ ರದ್ದಾದ ಐಪಿಎಲ್​​ ಟೂರ್ನಿಯಲ್ಲಿ ಆರ್​ಸಿಬಿ, ಸಾಲಿಡ್ ಪರ್ಫಾಮೆನ್ಸ್ ನೀಡ್ತು. ಆಡಿರೋ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ದಾಖಲಿಸಿದ್ದ ಕೊಹ್ಲಿ ಬಾಯ್ಸ್​, ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಆದ್ರೀಗ ಅದೇ ಗೆಲುವಿನ ಫಾರ್ಮ್​ ಮುಂದುವರೆಸೋ ಚಾಲೆಂಜ್​, ಬೆಂಗಳೂರು ತಂಡದ ಮೇಲಿದೆ.

ರಾಯಲ್​​ ಚಾಲೆಂಜರ್ಸ್​ಗೆ ಬಲಿಷ್ಟ ತಂಡಗಳ ಸವಾಲ್..!

ಈ ಬಾರಿ ಆರ್​ಸಿಬಿ ಮುಂದೆ, ದೊಡ್ಡ ಸವಾಲೇ ಇದೆ. ಪ್ಲೇ ಆಫ್​​ಗೆ ಎಂಟ್ರಿ ಕೊಡಬೇಕಾದ್ರೆ ಆರ್​ಸಿಬಿ, ಬಲಿಷ್ಟ ತಂಡಗಳನ್ನ ಮಣಿಸಬೇಕಿದೆ. ಕೊಲ್ಕತ್ತಾ, ಮುಂಬೈ, ಚೆನ್ನೈ, ಪಂಜಾಬ್, ಹೈದ್ರಾಬಾದ್​​, ಡೆಲ್ಲಿ ತಂಡಗಳನ್ನ, ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಎದುರಿಸಬೇಕಿದೆ. ಹೀಗಾಗಿ ಕೊಹ್ಲಿ ಬಾಯ್ಸ್, ಸವಾಲನ್ನ ಮೆಟ್ಟಿ ನಿಲ್ಲಬೇಕಿದೆ.

ಕ್ಯಾಪ್ಟನ್​ ಕೊಹ್ಲಿಗೆ ಐಪಿಎಲ್ ಪ್ರತಿಷ್ಠೆಯ ಟೂರ್ನಿ..!

14 ಸೀಸನ್​ಗಳಿಂದ ಬೆಂಗಳೂರು ತಂಡ, ಒಂದೇ ಒಂದು ಬಾರಿಯೂ ಐಪಿಎಲ್ ಚಾಂಪಿಯನ್ ಆಗಿಲ್ಲ. ಪ್ರತಿ ವರ್ಷವೂ ಆರ್​ಸಿಬಿ ಮೇಲೆ, ಬೆಟ್ಟದಷ್ಟು ನಿರೀಕ್ಷೆ ಇರಲಿದೆ. ಆದ್ರೆ ಈ ಬಾರಿ ಕ್ಯಾಪ್ಟನ್ ಕೊಹ್ಲಿ​, ತಮ್ಮ ಮೇಲಿಟ್ಟಿರುವ ನಂಬಿಕೆಯನ್ನ ಉಳಿಸಿಕೊಳ್ಳಬೇಕಿದೆ. ಹಾಗೇ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿ, ಪ್ರಶಸ್ತಿ ಗೆಲ್ಲಿಸಿಕೊಡಬೇಕಿದೆ.

ಎಬಿಡಿ, ಮ್ಯಾಕ್ಸಿ, ಜೇಮಿಸನ್​​ ಮೇಲಿದೆ ಜವಾಬ್ದಾರಿ..!

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಕೆಲವೇ ಆಟಗಾರರ ಮೇಲೆ ಡಿಪೆಂಡ್ ಆಗಿದೆ. ಬ್ಯಾಟಿಂಗ್​ನಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಗ್ಲೇನ್ ಮ್ಯಾಕ್ಸ್​ವೆಲ್.. ಬೌಲಿಂಗ್​ನಲ್ಲಿ ಕೈಲ್ ಜೇಮಿಸನ್​, ಹೆಚ್ಚು ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ. ಈ ಸೀಸನ್​ನಲ್ಲೂ ಈ ಮ್ಯಾಚ್​ ವಿನ್ನರ್ಸ್​ನಿಂದ ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್​ ನಿರೀಕ್ಷಿಸಲಾಗಿದೆ.

ಹೊಸಬರ ಎಂಟ್ರಿ ತಂಡದ ಬಲ ಮತ್ತಷ್ಟು ಹೆಚ್ಚಿಸುತ್ತಾ..?

ಇದೇ ವರ್ಷ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆರ್​ಸಿಬಿ, ಲಂಕಾದ ವಹಿಂದು ಹಸರಂಗ, ದುಷ್ಶಂತ ಚಾಮಿರ, ಇಂಗ್ಲೆಂಡ್​​ನ ಜಾರ್ಜ್ ಗಾರ್ಟನ್, ಸಿಂಗಾಪೂರ್​ನ ಟಿಮ್ ಡೇವಿಡ್​​ ಆಗಮ, ಬೆಂಗಳೂರು ತಂಡದ ಬಲ ಹೆಚ್ಚಿಸಿದೆ. ಈ ಹೊಸಬರಿಂದಲೂ ದಿ ಬೆಸ್ಟ್ ಪರ್ಫಾಮೆನ್ಸ್​, ನಿರೀಕ್ಷಿಸಲಾಗ್ತಿದೆ.

ಒಟ್ನಲ್ಲಿ.. ಪದೇ ಪದೇ ‘ಈ ಸಲ ಕಪ್ ನಮ್ದೆ’ ಅಂತಿದ್ದ ನಮ್ಮ ಹೆಮ್ಮೆಯ ಕನ್ನಡಿಗರ ಹಲವು ವರ್ಷಗಳ ಕನಸು, ಈ ಬಾರಿಯಾದ್ರೂ ನನಸಾಗ್ಲಿ ಅನ್ನೋದೇ, ನಮ್ಮೆಲ್ಲರ ಆಶಯ.

Source: newsfirstlive.com Source link