ಇಂಗ್ಲೆಂಡ್ ಮಾದರಿಯಲ್ಲಿ ಮಕ್ಕಳಿಗೆ ಲಸಿಕೆ: ಬಲರಾಮ್ ಭಾರ್ಗವ್

ನವದೆಹಲಿ: ಮಕ್ಕಳಿಗೆ ವ್ಯಾಕ್ಸಿನ್ ನೀಡುವ ವಿಚಾರದಲ್ಲಿ ಭಾರತ ಇಂಗ್ಲೆಂಡ್ ಮಾದರಿ ಅನುಸರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.

ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಬಗೆಗಿನ ತಯಾರಿಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಜೈಡಸ್ ಕ್ಯಾಡಿಲಾದ ಜೈಕೋವ್-ಡಿ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ. ಶೀಘ್ರದಲ್ಲೇ ಈ ಲಸಿಕೆ ಬಳಕೆಗೆ ಲಭ್ಯವಾಗಲಿದ್ದು, ಮೊದಲು 12-18 ವರ್ಷದ ಮಕ್ಕಳಿಗ ನೀಡಲು ಸರ್ಕಾರ ಚಿಂತಿಸಿದೆ ಎಂದು ಹೇಳಿದರು. ಭಾರತದಲ್ಲಿ 94 ಕೋಟಿ ಜನರು ವಯಸ್ಕರಿದ್ದಾರೆ. ಈಗಾಗಲೇ 75 ಕೋಟಿ ಜನರಿಗೆ ಮೊದಲ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ವರ್ಷಾಂತ್ಯಕ್ಕೆ ಎಲ್ಲ ವಯಸ್ಕರಿಗೂ ಮೊದಲ ಡೋಸ್ ನೀಡುವ ಗುರಿ ಹೊಂದಲಾಗಿದ್ದು, ಬಳಿಕ ಮಕ್ಕಳಿಗೆ ವೇಗವಾಗಿ ವ್ಯಾಕ್ಸಿನ್ ನೀಡಲಾಗುವುದು ಎಂದು ಅವರು ಹೇಳಿದರು. ಇದನ್ನೂ ಓದಿ: 1-10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು

ಮೊದಲು 17-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವುದು ಬಳಿಕ 16-17 ಹೀಗೆ ಹಂತ ಹಂತವಾಗಿ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬಲರಾಮ್ ಭಾರ್ಗವ್ ಹೇಳಿದ್ದಾರೆ. ಬೂಸ್ಟರ್ ಶಾಟ್ ನೀಡುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪಗಳಿಲ್ಲ ಸಾಧ್ಯವಾದಷ್ಟು ಬೇಗ ಎರಡು ಡೋಸ್‍ಗಳನ್ನು ನೀಡುವುದು ಸರ್ಕಾರ ಗುರಿ ಎಂದು ಅವರು ಹೇಳಿದರು.

Source: publictv.in Source link