ಸಾಂಸ್ಕೃತಿಕ ನಗರಿಗೆ ಆಗಮಿಸಿದ ಗಜಪಡೆ: ಅರಮನೆಯಲ್ಲಿ ಕಳೆಗಟ್ಟಿದ ಸಂಭ್ರಮ

ಸಾಂಸ್ಕೃತಿಕ ನಗರಿಗೆ ಆಗಮಿಸಿದ ಗಜಪಡೆ: ಅರಮನೆಯಲ್ಲಿ ಕಳೆಗಟ್ಟಿದ ಸಂಭ್ರಮ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಗಜಪಡೆ ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದು, ಸಂಭ್ರಮ ಕಳೆಗಟ್ಟಿದೆ.

ನಗರದ ಅರಣ್ಯ ಭವನಕ್ಕೆ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳ ತಂಡ.. ವೀರನಹೊಸಳ್ಳಯಿಂದ ಮೈಸೂರಿಗೆ ಲಾರಿಗಳ ಮೂಲಕ ಆಗಮಿಸಿದೆ. ಮೂರು ದಿನಗಳ ಕಾಲ ಅರಣ್ಯ ಭವನದಲ್ಲೇ ಗಜಪಡೆ ವಾಸ್ತವ್ಯ ಹೂಡಲಿವೆ. ಸೆಪ್ಟೆಂಬರ್​ 16 ರಂದು ಬೆಳಿಗ್ಗೆ ಗಜಪಡೆಗೆ ಅರಮನೆಯ ದ್ವಾರದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ನಂತರ ಅರಮನೆಯ ಆನೆ ಶಿಬಿರದಲ್ಲಿ ಗಜಪಡೆ ವಾಸ್ತವ್ಯ ಹೂಡಲಿವೆ.

ಇದನ್ನೂ ಓದಿ:ನಾಯಿಗಳನ್ನ ಜೀವಂತ ಸಮಾಧಿ ಮಾಡಿದ ದುಷ್ಟರು.. 60 ಶ್ವಾನಗಳ ಶವ ಪತ್ತೆ.. 9 ಜನರ ವಿರುದ್ಧ ಕೇಸ್

Source: newsfirstlive.com Source link