ಹಾಸ್ಯನಟ ರಾಜು ತಾಳಿಕೋಟಿ ಹಣೆಗೆ ಪಿಸ್ತೂಲ್ ಇಟ್ಟು ಹಲ್ಲೆ.. ನಡೆದಿದ್ದೇನು..?

ಹಾಸ್ಯನಟ ರಾಜು ತಾಳಿಕೋಟಿ ಹಣೆಗೆ ಪಿಸ್ತೂಲ್ ಇಟ್ಟು ಹಲ್ಲೆ.. ನಡೆದಿದ್ದೇನು..?

ವಿಜಯಪುರ: ಖ್ಯಾತ ಹಾಸ್ಯ ನಟ ರಾಜು ತಾಳಿಕೋಟಿ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಸಂಬಂಧಿಕರಿಂದಲೇ ಹಲ್ಲೆ ನಡೆದಿದೆ ಎನ್ನಲಾಗಿದ್ದು ವಿಜಯಪುರ ಖಾಸಗಿ ಆಸ್ಪತ್ರೆಗೆ ರಾಜು ತಾಳಿಕೋಟಿ ದಾಖಲಾಗಿದ್ದಾರೆ. ಪಿಸ್ತೂಲು ಹಣೆಗಿಟ್ಟು ಹಲ್ಲೆ ಮಾಡಿದ್ದಾರೆ ಅಂತಾ ಹಾಸ್ಯ ಕಲಾವಿದ ರಾಜು ತಾಳಿಕೋಟಿ ನ್ಯೂಸ್ ಫಸ್ಟ್ ಎದುರು ಅಳಲು ತೋಡಿಕೊಂಡಿದ್ದಾರೆ.

ವಿಜಯಪುರದ ಯೋಗಾಪುರ ಆಶ್ರಯ ಕಾಲೋನಿಯಲ್ಲಿ ನಿನ್ನೆ ಘಟನೆ ನಡೆದಿದ್ದು ಅಳಿಯನ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಕಲಹವಾಗಿದೆ ಎನ್ನಲಾಗಿದೆ. ನಿನ್ನೆ ನಡೆದ ಈ ಘಟನೆಯಲ್ಲಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.. ವಿಜಯಪುರದ ಯೋಗಾಪುರದಲ್ಲಿರೋ ರಾಜು ತಾಳಿಕೋಟಿಯವರ ಮನೆಯ ಬೀಗ ಒಡೆದ ಹಿನ್ನೆಲೆ ಜಗಳವಾಗಿದೆ ಎನ್ನಲಾಗಿದೆ.

Source: newsfirstlive.com Source link