ದೇಗುಲ ನೆಲಸಮ: ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್​ಗೆ ವಿವರಣೆ ಕೇಳಿ ಸರ್ಕಾರದಿಂದ ನೋಟಿಸ್​ ಜಾರಿ

ದೇಗುಲ ನೆಲಸಮ: ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್​ಗೆ ವಿವರಣೆ ಕೇಳಿ ಸರ್ಕಾರದಿಂದ ನೋಟಿಸ್​ ಜಾರಿ

ಮೈಸೂರು: ನಂಜನಗೂಡು ದೇಗುಲ ನೆಲಸಮ ವಿಚಾರ ಕುರಿತು ವಿವರಣೆ ಕೇಳಿ ಸರ್ಕಾರದಿಂದ ನೋಟಿಸ್ ಬಂದಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ವಿವರಣೆ ಕೇಳಿ ಸರ್ಕಾರದಿಂದ ಜಿಲ್ಲಾಡಳಿತ ಮತ್ತು ತಹಸೀಲ್ದಾರ್​ಗೆ ನೋಟಿಸ್ ಬಂದಿದ್ದು, ಅದಕ್ಕೆ‌ ನಾವು ಉತ್ತರವನ್ನು ಕೊಡುತ್ತೇವೆ. ಸದ್ಯ ನೋಟಿಸ್‌ನಲ್ಲಿ ಏನಿದೆ ಎಂಬುದನ್ನು‌ ಹೇಳಲು ಸಾಧ್ಯವಿಲ್ಲ. ಆದರೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದರು.

ಕಾರ್ಯಚರಣೆ ನಿಲ್ಲಿಸುವ ಸಂಬಂಧದ ಪ್ರಶ್ನೆಗೆ ಉತ್ತರಿಸಿದ ಅವರು ಸರ್ಕಾರದ ನಿರ್ದೇಶನಕ್ಕಾಗಿ ನಾವು ಕಾಯುತ್ತಿದ್ದೇವೆ. ಸರ್ಕಾರದ ಉತ್ತರ ಬರುವವರೆಗೂ ಸದ್ಯಕ್ಕೆ ಯಾವುದೇ ಕಾರ್ಯಾಚರಣೆ ಇರುವುದಿಲ್ಲ. ಮುಂದಿನ‌ ನಿರ್ದೇಶನದವರೆಗೂ ಎಲ್ಲವು ಯಥಾಸ್ಥಿತಿಯಲ್ಲಿ ಇರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ನೆಲಸಮಗೊಂಡ ದೇವಸ್ಥಾನದ ಬಳಿಯೇ ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದ ಗ್ರಾಮಸ್ಥರು

Source: newsfirstlive.com Source link