ಕೆಸರು ಗದ್ದೆ ಓಟಕ್ಕೆ ಬಂದ ಉಸೇನ್​ ಬೋಲ್ಟ್!​ ಗ್ರಾಮಸ್ಥರ ವಿಭಿನ್ನ ಪ್ರತಿಭಟನೆ

ಕೆಸರು ಗದ್ದೆ ಓಟಕ್ಕೆ ಬಂದ ಉಸೇನ್​ ಬೋಲ್ಟ್!​ ಗ್ರಾಮಸ್ಥರ ವಿಭಿನ್ನ ಪ್ರತಿಭಟನೆ

ಚಿಕ್ಕಮಗಳೂರು: ಕೆಸರು ಗದ್ದೆ ಓಟಕ್ಕೆ ಹುಸೇನ್ ಬೋಲ್ಟ್ ಹೆಸರು ಇಡಲಾಗಿದೆ. ಈ ಸ್ಪರ್ಧೆಗೆ ಖುದ್ದು ಹುಸೇನ್ ಬೋಲ್ಟ್ ಬಂದಿದ್ದು ಜನ ಅದ್ಧೂರಿಯಿಂದ ಸ್ವಾಗತ ಕೋರಿದ್ದಾರೆ. ಹೌದು ಏನಪ್ಪಾ ವಿಶ್ವದ ಓಡುವ ಚಿರತೆ ಉಸೇನ್​ ಬೋಲ್ಟ್​ ರಾಜ್ಯಕ್ಕೆ ಬಂದ್ರಾ ಎಂದು ನಿಮಗೆ ಶಾಕ್​ ಆದರೆ ಅದು ನಿಮ್ಮ ತಪ್ಪಲ್ಲಾ ಬಿಡಿ. ಯಾಕಂದ್ರೆ ಇದರ ಅಸಲಿ ಕಹಾನಿ ಬೇರೆನೆ ಇದೆ.

blank

ಜಿಲ್ಲೆಯ ಕಳಸ ತಾಲೂಕಿನ ಮುಳ್ಳೋಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹಾಳಗಿದ್ದು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹದಗೆಟ್ಟ ರಸ್ತೆ ಮಧ್ಯೆ ಬೋಲ್ಟ್ ಕಟೌಟ್​ ನಿಲ್ಲಿಸಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

blank

ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಗ್ರಾಮಸ್ಥರು ಸ್ಪರ್ಧೆಗೆ ಶಾಸಕ, ಸಂಸದ, ಸೇರಿದಂತೆ ಇತರೆ ಅಧಿಕಾರಿಗಳು ಬರಬೇಕಿದೆ. ಕ್ರೀಡಾಂಗಣ ನಿರ್ಮಿಸಿಕೊಟ್ಟ ಅಧಿಕಾರಿ-ಜನಪ್ರತಿನಿಧಿಗಳಿಗೆ ಹಳ್ಳಿಯ ಜನರು ಋಣಿಯಾಗಿದ್ದಾರೆ ಎಂದು ವಿಭಿನ್ನವಾಗಿ ಪ್ರತಿಭಟನೆ ಕೈಗೊಂಡಿದ್ದಾರೆ.

40 ವರ್ಷದಿಂದ 8 ಕಿ.ಮೀ. ರಸ್ತೆ ನಿರ್ಮಿಸಿ ಕೊಡದ ಸರ್ಕಾರದ ವಿರುದ್ಧ ಗ್ರಾಮಸ್ಥರು ವಿಭಿನ್ನವಾಗಿ ವ್ಯಂಗ್ಯ ಮಾಡುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ.

Source: newsfirstlive.com Source link