ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

ವಿಜಯಪುರ: ತಮ್ಮ ಅಳಿಯನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವೊಂದು ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಕೇಳಿಬಂದಿದೆ.

ಸನಾ ಕರಜಗಿ ಮೇಲೆ ತಾಳಿಕೋಟೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಬಲವಂತವಾಗಿ ವಿಷ ಕೂಡ ಕುಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಜೂ ತಾಳಿಕೋಟೆ, ಪತ್ನಿ ಪ್ರೇಮಾ ತಾಳಿಕೋಟಿ, ಸನಾ ಪತಿ ಫಯಾಜ್ ಕರಜಗಿ, ಸನಾ ಭಾವ ಪಿಂಟು ಕರಜಗಿ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ.

ಸನಾ ತಾಯಿ ಫಾತಿಮಾ ಶಿರಹಟ್ಟಿ ದೂರು ದಾಖಲು ಮಾಡಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ನನ್ನ ಮೇಲೂ ಹಲ್ಲೆ ಆಗಿದೆ ಎಂದು ತಾಳಿಕೋಟೆ ಆಸ್ಪತ್ರೆ ಸೇರಿದ್ದಾರೆ.

Source: publictv.in Source link