ವಿಧಾನಪರಿಷತ್ ಕಲಾಪದಲ್ಲಿ ಇರುಳಿಗರ ಸಮಸ್ಯೆ ಪ್ರಸ್ತಾಪ; ಸೂಕ್ತ ಕ್ರಮ ತೆಗೆದುಕೊಳ್ತೇವೆಂದ ಸರ್ಕಾರ

ವಿಧಾನಪರಿಷತ್ ಕಲಾಪದಲ್ಲಿ ಇರುಳಿಗರ ಸಮಸ್ಯೆ ಪ್ರಸ್ತಾಪ; ಸೂಕ್ತ ಕ್ರಮ ತೆಗೆದುಕೊಳ್ತೇವೆಂದ ಸರ್ಕಾರ

ಬೆಂಗಳೂರು:  ಈ ಹಿಂದೆ ಅಂದ್ರೆ 21, ಜೂನ್ 2020 ರಂದು ನ್ಯೂಸ್​ ಫಸ್ಟ್​, ರಾಮನಗರ ತಾಲೂಕಿನ ವಡ್ಡರದೊಡ್ಡಿಯ ಇರುಳಿಗರ ಕಾಲೋನಿ ಬುಡಕಟ್ಟು ಜನಾಂಗವನ್ನ ಒಕ್ಕಲೆಬ್ಬಿಸಿದ ಕುರಿತು ಸುದ್ದಿ ಬಿತ್ತರಿಸಿತ್ತು. ಇದೀಗ ಈ ವಿಚಾರವನ್ನ ವಿಧಾನಪರಿಷತ್ ಕಲಾಪದಲ್ಲಿ ನ್ಯೂಸ್ ಫಸ್ಟ್ ಮಾಡಿದ್ದ ವರದಿಯನ್ನ ಬಿಜೆಪಿ ವಿಧಾನಪರಿಷತ್‌ ಸದಸ್ಯ ತುಳಸಿ ಮುನಿರಾಜುಗೌಡ ಪ್ರಸ್ತಾಪಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್‌ಗೆ ತುಳಸಿ ಮುನಿರಾಜುಗೌಡ ಪ್ರಶ್ನೆ ಕೇಳಿದ್ದಾರೆ. 308 ಜನಸಂಖ್ಯೆಯ ಬುಡಕಟ್ಟು ಜನಾಂಗದ ಇರುಳಿಗರ ಕಾಲೋನಿಯ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಆ ಜಮೀನು ಸರ್ಕಾರದ್ದು.. ಇದರ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಆರ್.ಅಶೋಕ್ ಹೇಳಿದ್ದಾರೆ.

Source: newsfirstlive.com Source link