‘ನಮ್ಮ ಬಳಿ ಸಮುದ್ರದ ಸಬ್‌ಮರಿನ್ ಮಷಿನ್ ಇದೆ’-ಹೀಗ್ಯಾಕಂದ್ರು ಹೆಚ್​.ಡಿ.ರೇವಣ್ಣ

‘ನಮ್ಮ ಬಳಿ ಸಮುದ್ರದ ಸಬ್‌ಮರಿನ್ ಮಷಿನ್ ಇದೆ’-ಹೀಗ್ಯಾಕಂದ್ರು ಹೆಚ್​.ಡಿ.ರೇವಣ್ಣ

ಬೆಂಗಳೂರು: ಕಲಬುರಗಿ ಪಾಲಿಕೆಯಲ್ಲಿ ಮೈತ್ರಿ ವಿಚಾರ ಕುರಿತು ದೇವೇಗೌಡರು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಮಾತನಾಡಿದ್ದಾರೆ ಸದ್ಯದಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿಯ ಜೆಡಿಎಸ್ ಮುಳಗುವ ದೋಣಿ ಹೇಳಿಕೆಗೆ ಟಾಂಗ್​ ನೀಡಿದ ರೇವಣ್ಣ ಜೆಡಿಎಸ್ ಮುಗಿಸೋಕೆ ಯಾರಿಗೂ ಆಗೋಲ್ಲ. ಜೆಡಿಎಸ್ ಪಕ್ಷ ಮುಳುಗಲು ಹಡಗಲ್ಲ, ಸಬ್ ಮರಿನ್ ಯಾವಾಗ ಬೇಕಾದ್ರೂ‌ ಮೇಲಕ್ಕೆ ಏಳುತ್ತೆ ಎಂದಿದ್ದಾರೆ.

ಇದನ್ನೂ ಓದಿ:‘ದೇವಾಲಯಗಳ ಒಡೆಯುತ್ತಿರುವ ಬಿಜೆಪಿ ಸರ್ಕಾರ’- HDK ಆಕ್ರೋಶ

ಮುಳಗುವಾಗ ಹೇಗೆ ಮೇಲೆ ಏಳಬೇಕು ಎನ್ನುವುದು ಜೆಡಿಎಸ್​ಗೆ ಗೊತ್ತಿದೆ. ಸಮುದ್ರದ ಸಬ್‌ಮರಿನ್ ಮಷಿನ್ ನಮ್ಮ ಬಳಿ ಇದೆ ಯಾವಾಗ ಮೇಲೆತ್ತಬೇಕು, ಯಾವಾಗ ಮುಳುಗಿಸಬೇಕು ಗೊತ್ತಿದೆ. ಸಬ್‌ಮರಿನ್ ಯಂತ್ರ ರಿಪೇರಿ ಮಾಡಿದ್ದೇವೆ. 2023ಕ್ಕೆ‌ ಜೆಡಿಎಸ್ ಇಲ್ಲದೆ ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದು ರೇವಣ್ಣ ಕಿಡಿಕಾರಿದ್ದಾರೆ.

ಇದನ್ನೂ ಓದಿ:‘ಕೋರ್ಟ್​ ಹೆಸರಲ್ಲಿ ದೇಗುಲ ಕೆಡವಿದ ಬಿಜೆಪಿ ಸರ್ಕಾರ’- ಮಾಜಿ ಸಚಿವ ಎಚ್​.ಡಿ ರೇವಣ್ಣ

Source: newsfirstlive.com Source link