ಶಾಸಕ, ಸಂಸದರ ಕೇಸ್​ ಹಿಂಪಡೆತ -ಸ್ಪಷ್ಟ ನಿಲುವು ಸೂಚಿಸುವಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್​

ಶಾಸಕ, ಸಂಸದರ ಕೇಸ್​ ಹಿಂಪಡೆತ -ಸ್ಪಷ್ಟ ನಿಲುವು ಸೂಚಿಸುವಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್​

ಬೆಂಗಳೂರು: ರಾಜ್ಯದ ಜನಪ್ರತಿನಿಧಿಗಳಿಗೆ ಹೈಕೋರ್ಟ್​ ಶಾಕ್​ ನೀಡಿದೆ. ಶಾಸಕರು ಮತ್ತು ಸಂಸದರ ವಿರುದ್ದದ ಪ್ರಕರಣಗಳ ಹಿಂಪಡೆದ ಹಿನ್ನೆಲೆ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ವಿಭಾಗೀಯ ಪೀಠ ಗರಂ ಆಗಿದೆ.

ಒಂದೂ ಕೇಸ್ ವಾಪಸ್ ಪಡೆದಿಲ್ಲವೆಂಬ ಸರ್ಕಾರದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್. ಜನಪ್ರತಿನಿಧಿಗಳ ಮೇಲಿನ ಕೇಸ್ ಹಿಂಪಡೆದಿರುವ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲು ಸರ್ಕಾರಕ್ಕೆ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.

2020ರ ಸೆಪ್ಟೆಂಬರ್​ 16ರ ನಂತರ ಜನ ಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಕೇಸ್ ಅಮಿಕಸ್ ಕ್ಯೂರಿಯಾದ ಹಿರಿಯ ವಕೀಲ ಆದಿತ್ಯ ಸೋಂಧಿ ಸೆ. 8 ರಂದು ನಾವು ಮೆಮೋ ಸಲ್ಲಿಸಿದ್ದೆವೆ ಕೋರ್ಟ್ ಇದನ್ನ ಪರಿಗಣಿಸಬೇಕು ಎಂದು‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಹಿಂದಿ ದಿವಸ್​​ ವಿರುದ್ಧ ಬೀದಿಗಿಳಿದ ಕನ್ನಡಪರ ಸಂಘಟನೆಗಳಿಗೆ ನೋಟಿಸ್​​ ನೀಡಿದ ಪೊಲೀಸರು

ಈ ವೇಳೆ ಸರ್ಕಾರದ ಮೆಮೋ ಪರಿಶೀಲಿಸಿದ ನ್ಯಾಯಪೀಠ ಸರಕಾರಕ್ಕೆ ಕೇಸುಗಳನ್ನು ವಾಪಸ್ ಪಡೆದಿರುವ ಮಾಹಿತಿಯನ್ನು ಕೇಳಲಾಗಿತ್ತು ಆದರೆ ಸರಕಾರ ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಒಂದು ಕೇಸೂ ವಾಪಸ್ ಪಡೆದಿಲ್ಲ ಎಂದು ಹೇಳಿದೆ.
2020ರ ಸೆಪ್ಟೆಂಬರ್​ 16ಕ್ಕೆ ಮುನ್ನ ಕೇಸು ವಾಪಸ್ ಪಡೆಯುವ ನಿರ್ಧಾರ ಕೈಗೊಂಡು ಆನಂತರ ಜಾರಿಗೊಳಿಸಿರಬಹುದು ಎಂದು ಸರ್ಕಾರ ಮೆಮೋದಲ್ಲಿ ಈ ಈ ಮಾಹಿತಿ ನೀಡಿದೆ. ಸರ್ಕಾರ ಇಂತಹ ಅಸ್ಪಷ್ಟ ನಿಲುವು ತಿಳಿಸಿದರೆ ಒಪ್ಪಲಾಗದು ಎಂದಿರುವ ವಿಭಾಗೀಯ ಪೀಠ ಮೆಮೋ ಮೂಲಕ ಸಲ್ಲಿಸಿರುವ ಮಾಹಿತಿಯ ಬಗ್ಗೆ ಸೆಪ್ಟೆಂಬರ್ 24ರ ಒಳಗೆ ಸ್ಪಷ್ಟನೆ ನೀಡಬೇಕು ಎಂದಿದೆ

ಇದನ್ನೂ ಓದಿ: ಕಾಂಗ್ರೆಸ್​ ನಾಯಕನ ಹೆಸರಲ್ಲಿ ನಕಲಿ ಫೇಸ್​​ಬುಕ್​​ ಖಾತೆ ತೆರೆದು ಹಣ ಕೀಳುತ್ತಿರುವ ವಂಚಕರು

Source: newsfirstlive.com Source link