ಪೆಟ್ರೋಲ್ ಬಂಕ್​ಲ್ಲಿ ಹಫ್ತಾ ವಸೂಲಿ ಕೇಸ್: ಬ್ರೋಕರ್ ಶಿವಕುಮಾರ್ ವಿರುದ್ಧ FIR ದಾಖಲಿಸಿದ ಪೊಲೀಸ್

ಪೆಟ್ರೋಲ್ ಬಂಕ್​ಲ್ಲಿ ಹಫ್ತಾ ವಸೂಲಿ ಕೇಸ್: ಬ್ರೋಕರ್ ಶಿವಕುಮಾರ್ ವಿರುದ್ಧ FIR ದಾಖಲಿಸಿದ ಪೊಲೀಸ್

ಬೆಂಗಳೂರು: ಪೆಟ್ರೋಲ್ ಬಂಕ್​ನಲ್ಲಿ ಹಫ್ತಾ ವಸೂಲಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನ್ಯೂಸ್​ ಫಸ್ಟ್ ವರದಿ ಮಾಡಿತ್ತು. ನ್ಯೂಸ್​ಫಸ್ಟ್ ವರದಿ ಬಳಿಕ ಬ್ರೋಕರ್ ಶಿವಕುಮಾರ್ ವಿರುದ್ಧ ಇದೀಗ FIR ದಾಖಲಾಗಿದೆ. ಕಾನೂನು ಮಾಪಕ ಶಾಸ್ತ್ರ ಇಲಾಖೆಯ ಬ್ರೋಕರ್ ಆಗಿದ್ದ ಶಿವಕುಮಾರ್ ವಿರುದ್ಧ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಗಗನಕ್ಕೇರಿದ ಪೆಟ್ರೋಲ್ ಬೆಲೆ; ಇತ್ತ ಬಂಕ್​ನಲ್ಲಿ ಮೋಸಕ್ಕಾಗಿ ಲಂಚದ ಬೇಡಿಕೆ ಇಟ್ಟ ಅಧಿಕಾರಿ

ಶಿವಕುಮಾರ್ ತಾನು ಇಲಾಖೆಯ ಇನ್ಸಪೆಕ್ಟರ್ ಅಂತಾ ಸುಳ್ಳು ಹೇಳಿಕೊಂಡಿದ್ದ.. ಇಲಾಖೆಯಲ್ಲಿರುವ ನಿಜವಾದ ಇನ್ಸಪೆಕ್ಟರ್ ಹೆಸರು ಹೇಳಿ ಬೂದಿಗೆರೆ ರಸ್ತೆಯ ಲಘುಮಮ್ಮ ಪೆಟ್ರೋಲ್ ಬಂಕ್​ನಲ್ಲಿ ಹಣ ವಸೂಲಿ ಮಾಡಿದ್ದ. ಈ ವೇಳೆ ಮಾತಾನಾಡುವಾಗ ತನ್ನನ್ನ ತಾನು ಇನ್ಸಪೆಕ್ಟರ್ ಎಂದು ಹೇಳಿಕೊಂಡಿದ್ದ. ಸದ್ಯ ನಿಜವಾದ ಇನ್ಪೆಕ್ಟರ್ ಆನಂದ್ ಕುಮಾರ್ ಹೆಚ್. ಕೆ, ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಮೋಸಕ್ಕಾಗಿ ಲಂಚ; ಏನ್ ಮೇಡಂ ಜನ ಪರವಾಗಿ ಇರಬೇಕಿದ್ದ ನೀವೇ ಹೀಗೆ ಮಾಡಿದ್ರೆ ಹೇಗೆ?

ಶಿವಕುಮಾರ್ ತನ್ನ ಜೊತೆ ಎಸಿ ಸೀಮಾ ಮ್ಯಾಗಿ ಅವರನ್ನು ಕರೆದುಕೊಂಡು ಹೋಗಿದ್ದ.. ಈ ಬಗ್ಗೆ ವಿಡಿಯೋ ಸಮೇತ ಆಕ್ವಿವಿಸ್ಟ್ ಪಿಲ್ಲಯ್ಯ ದೂರು ನೀಡಿದ್ದರು. ಈಗಾಗಲೇ ಹಫ್ತಾ ವಸೂಲಿ ಆರೋಪದಲ್ಲಿ ಎಸಿ ಸೀಮಾ ಮ್ಯಾಗಿ ಅಮಾನತಾಗಿದ್ದಾರೆ.

ಇದನ್ನೂ ಓದಿ: Newsfirst Impact: ಡ್ರೈವರ್ ಮೂಲಕ ಲಂಚದ ಹಣ ಪಡೆದಿದ್ದ ಎಸಿ ಸೀಮಾ ಮ್ಯಾಗಿ ತಲೆದಂಡ

ಎಫ್​ಐಆರ್ ದಾಖಲಾದ ಬೆನ್ನಲ್ಲೇ ಬಂಧನದ ಭೀತಿಯಲ್ಲಿ ಬ್ರೋಕರ್ ಶಿವ @ ಶಿವಕುಮಾರ್ ಎಸ್ಕೇಪ್ ಆಗಿದ್ದಾನೆ. ಆತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 419 & 420 ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಇನ್ನು ಈಗಾಗಲೇ ಬ್ರೋಕರ್ ಶಿವು ಒಮ್ಮೆ ಜೈಲಿಗೆ ಹೋಗಿ ಬಂದಿದ್ದಾನೆ. ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಎಳೆದ ಅಡಿಯಲ್ಲಿ ಎಸಿಬಿ ಬಂಧಿಸಿ ಜೈಲಿಗಟ್ಟಿತ್ತು.. ಸದ್ಯ ಆರೋಪಿ ಬಂಧನಕ್ಕೆ ವಿಧಾನಸೌಧ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

 

Source: newsfirstlive.com Source link