ಹಾಸ್ಯನಟ ರಾಜು ತಾಳಿಕೋಟೆಯಿಂದಲೇ ಅಳಿಯನ ಪತ್ನಿ ಮೇಲೆ ಹಲ್ಲೆ ಆರೋಪ

ಹಾಸ್ಯನಟ ರಾಜು ತಾಳಿಕೋಟೆಯಿಂದಲೇ ಅಳಿಯನ ಪತ್ನಿ ಮೇಲೆ ಹಲ್ಲೆ ಆರೋಪ

ವಿಜಯಪುರ: ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು ಇದೀಗ ತಾಳಿಕೋಟೆಯಿಂದ ಅಳಿಯನ ಪತ್ನಿಯ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಹಾಸ್ಯನಟ ರಾಜು ತಾಳಿಕೋಟಿ ಹಣೆಗೆ ಪಿಸ್ತೂಲ್ ಇಟ್ಟು ಹಲ್ಲೆ.. ನಡೆದಿದ್ದೇನು..?

ಕೌಟುಂಬಿಕ ಕಲಹ ಹಿನ್ನೆಲೆ ಅಳಿಯನ ಪತ್ನಿ ಮೇಲೆ ರಾಜು ತಾಳಿಕೋಟೆ ಹಲ್ಲೆ ನಡೆಸಿದ್ದಾರೆಂದು ವಿಜಯಪುರ ಮಹಿಳಾ ಠಾಣೆಯಲ್ಲಿ ರಾಜು ತಾಳಿಕೋಟೆ & ಸಂಬಂಧಿಕರ ಮೇಲೆ ದೂರು ದಾಖಲಾಗಿದೆ. ಅಳಿಯ ಫಯಾಜ್ ಕರಜಗಿಯ ಪರವಾಗಿ ನಿಂತು ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಸನಾ ಕರಜಗಿ ಎಂಬ ಮಹಿಳೆ ಮೇಲೆ ಹಲ್ಲೆಮಾಡಿ, ಬಲವಂತವಾಗಿ ವಿಷ ಕುಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸನಾ ಕರಜಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಐ ಸಿ ಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜು ತಾಳಿಕೋಟೆ, ಅವರ ಪತ್ನಿ ಪ್ರೇಮಾ ತಾಳಿಕೋಟಟೆ ಹಾಗೂ ಸನಾ ಪತಿ ಫಯಾಜ್ ಕರಜಗಿ, ಸನಾ ಭಾವ ಪಿಂಟು ಕರಜಗಿ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ. ಸನಾ ತಾಯಿ ಫಾತಿಮಾ ಶಿರಹಟ್ಟಿ ಅವರು ದೂರು ನೀಡಿದ್ದಾರೆ ಎನ್ನಲಾಗಿದೆ.

Source: newsfirstlive.com Source link