‘ಮುಕುಂದಾ ಮುರಾರಿ’ ಸಿನಿಮಾ ವೇಳೆ ‘ಕೃಷ್ಣ ನಾನಾ ಅಥವಾ ಉಪೇಂದ್ರನಾ ಅಂತ ಗೊತ್ತಾಗ್ತಿರಲಿಲ್ಲ’-ಸುದೀಪ್​

‘ಮುಕುಂದಾ ಮುರಾರಿ’ ಸಿನಿಮಾ ವೇಳೆ ‘ಕೃಷ್ಣ ನಾನಾ ಅಥವಾ ಉಪೇಂದ್ರನಾ ಅಂತ ಗೊತ್ತಾಗ್ತಿರಲಿಲ್ಲ’-ಸುದೀಪ್​

ಸ್ಯಾಂಡಲ್​ವುಡ್​ ನಟಿ ಪ್ರಿಯಂಕಾ ಉಪೇಂದ್ರ ಅಭಿನಯದ ‘1980’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅತಿಥಿಯಾಗಿ ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್ ಮೊದಲಿಗೆ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಈ ವೇದಿಕೆ ಮೇಲೆ ಹತ್ತಿದ ತಕ್ಷಣ ಅವರು ನೆನಪಾಗುತ್ತಾರೆ ಎಂದು ಹೇಳುತ್ತಾರೆ. ಉಪೇಂದ್ರ ರವರು ತುಂಬ ವೇದಾಂತಿ ‘ ಮುಕುಂದಾ ಮುರಾರಿ’ ಸಿನಿಮಾ ಮಾಡಬೇಕಾದ್ರೆ ಕೃಷ್ಣ ನಾನಾ ಅಥವಾ ಉಪೇಂದ್ರ ಅವರ ಅಂತ ಗೊತ್ತಾಗುತ್ತಿರಲಿಲ್ಲ ಅಂತ ಕಿಚ್ಚ, ಉಪೇಂದ್ರ ಅವರ ಕಾಲೆಳೆದಿದ್ದಾರೆ.

ಬಳಕ ಮಾತನಾಡಿದ ಕಿಚ್ಚ ಸುದೀಪ್.. ಎರಡು ವರ್ಷದಿಂದ ಮನೆಯಲ್ಲಿ ಟಿವಿ ನೋಡಿ ಇದೀಗ ಬಹಳ ದಿನಗಳ ನಂತರ ದೊಡ್ಡ ಪರದೆ ನೋಡುವಾಗ ಬಹಳ ಖುಷಿಯಾಗುತ್ತಿದೆ ಎಂದರು. ಪ್ರತಿಯೊಬ್ಬ ಕಲಾವಿದನಿಗೂ ಪರದೆ ಎಷ್ಟು ಮುಖ್ಯ ಎಂಬುದು ಮತ್ತೊಮ್ಮೆ ಅರಿವಾಗಿದೆ. ಥಿಯೇಟರ್ ಓಪನ್ ಆಗಿ ಮತ್ತೆ ಜನರು ದೊಡ್ಡ ಪರದೆ ಮೇಲೆ ಸಿನಿಮಾ ನೋಡಿದಾಗಲೇ ಪ್ರತಿಯೊಂದು ಚಿತ್ರಕ್ಕೆ ನ್ಯಾಯ ಸಿಗೋದು ಅಂತಾ ಹೇಳಿದ್ರು.

ಇದನ್ನೂ ಓದಿ: ನಟಿ ಸಮಂತಾಗೆ ನಾಗಚೈತನ್ಯ ಥ್ಯಾಂಕ್ಸ್​ ಹೇಳಿದ್ಯಾಕೆ?

ಇನ್ನು ಕನ್ನಡದಲ್ಲಿ ಯಾವುದೇ ಹೊಸ ಪ್ರಯತ್ನ ಮಾಡಿದ್ರೂ ಅದು ಅದ್ಭುತನೇ, ಅದಕ್ಕೊಂದು ನ್ಯಾಯ ಸಿಗಬೇಕಾದ್ರೆ ಮತ್ತೆ ಥಿಯೇಟರ್ ಶುರು ಆಗಬೇಕು.. ಆದಷ್ಟು ಬೇಗ ಎಲ್ಲವೂ ಸರಿ ಆಗುತ್ತೆ ಅಂತಾ ಅಂದುಕೊಂಡಿದ್ದೇನೆ ಎಂದು ಸುದೀಪ್ ಹೇಳಿದ್ರು. ಬಳಿಕ ಚಿತ್ರತಂಡಕ್ಕೆ ಶುಭ ಹಾರೈಸಿ. ತಮ್ಮನ್ನು ಅಥಿಯಾಗಿ ಕರೆದಿದ್ದಕ್ಕೆ ಸುದೀಪ್ ‘1980’ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​​ವುಡ್​​​ ಪ್ರತಿಭಾವಂತ ಸಂಭಾಷಣೆ ಬರಹಗಾರ ಕಶ್ಯಪ್​ ನಿಧನ

 

Source: newsfirstlive.com Source link