‘ನಮ್ಮ ಊರಿನ ಹೆಣ್ಣುಮಕ್ಕಳನ್ನ ಶಾಲೆಗೆ ಕಳುಹಿಸಲ್ಲ’- ಗ್ರಾಮಸ್ಥರು ಈ ನಿರ್ಧಾರ ಮಾಡಿದ್ದೇಕೆ ಗೊತ್ತೇ..?

‘ನಮ್ಮ ಊರಿನ ಹೆಣ್ಣುಮಕ್ಕಳನ್ನ ಶಾಲೆಗೆ ಕಳುಹಿಸಲ್ಲ’- ಗ್ರಾಮಸ್ಥರು ಈ ನಿರ್ಧಾರ ಮಾಡಿದ್ದೇಕೆ ಗೊತ್ತೇ..?

ಶಿವಮೊಗ್ಗ: ಸಾಗರ ತಾಲೂಕಿನ ಪಡವಗೋಡು ಗ್ರಾಮ ಪಂಚಾಯತಿಯ ಬೆಳ್ಳಿಕೊಪ್ಪ ಗ್ರಾಮಸ್ಥರು ಸರ್ಕಾರದ ವಿರುದ್ಧ ಹೋರಾಟಕ್ಕೆ ಅಭಿಯಾನ ಆರಂಭಿಸಿದ್ದಾರೆ. ಗ್ರಾಮದಲ್ಲಿನ ಮದ್ಯದಂಗಡಿಗಳನ್ನ ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ.

ಸಾಗರ ತಾಲೂಕಿನ ಕಸಬಾ ಹೋಬಳಿಯ ಪಡವಗೋಡು ಗ್ರಾಮ ಪಂಚಾಯತ್​ನ ಬೆಳ್ಳಿಕೊಪ್ಪ ಗ್ರಾಮದಲ್ಲಿ ಎಂಎಸ್ಐಎಲ್ ಮಳಿಗೆ ಬಂದ್ ಮಾಡಿ.. ಮಳಿಗೆ ಬಂದ್ ಮಾಡದ ಹೊರತು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಗ್ರಾಮಸ್ಥರು ಹೋರಾಟ ಆರಂಭಿಸಿದ್ದಾರೆ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಗ್ರಾಮದಲ್ಲಿ ಫ್ಲೆಕ್ಸ್ ಕೂಡ ಹಾಕಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಮದ್ಯದಂಗಡಿ ವಿರೋಧಿಸಿ ಇದೇ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಿದ್ದರು. ಈ ವೇಳೆ ಮದ್ಯದಂಗಡಿ ಬಂದ್ ಮಾಡಿ, ಮತದಾನ ಮಾಡುವಂತೆ ಅಧಿಕಾರಿಗಳು ಮನವೊಲಿಸಿದ್ದರು. ಇದೀಗ ಮತ್ತೆ ಗ್ರಾಮದಲ್ಲಿ ಎಂಎಸ್ಐಎಲ್ ಮಳಿಗೆ ಆರಂಭಿಸಿರುವ ಹಿನ್ನೆಲೆ. ಮದ್ಯ ದಂಗಡಿ ಬಂದ್ ಮಾಡದ ಹೊರತು ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Source: newsfirstlive.com Source link