“​ಮಿಷನ್​ ಮಜ್ನೂ” ಶೂಟಿಂಗ್​ ಕಂಪ್ಲೀಟ್​.. ಕೇಕ್​ ಕಟ್​ ಮಾಡಿ ಪಾರ್ಟಿ ಮಾಡಿದ ಕೊಡಗಿನ ಕ್ಯೂಟಿ

“​ಮಿಷನ್​ ಮಜ್ನೂ” ಶೂಟಿಂಗ್​ ಕಂಪ್ಲೀಟ್​.. ಕೇಕ್​ ಕಟ್​ ಮಾಡಿ ಪಾರ್ಟಿ ಮಾಡಿದ ಕೊಡಗಿನ ಕ್ಯೂಟಿ

ನ್ಯಾಶನಲ್​ ಕ್ರಶ್​, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್​ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ”​ ಮಿಷನ್​ ಮಜ್ನೂ” ಚಿತ್ರದ ಶೂಟಿಂಗ್​ ಕೆಲ ದಿನಗಳ ಹಿಂದೆಯಷ್ಟೇ ಪೂರ್ಣಗೊಂಡಿತ್ತು. ಸೌಥ್​ ಸಿನಿ ದುನಿಯಾದ ಬಹುಬೆಡಿಕೆಯ ನಟಿಯಾಗಿರುವ ರಶ್ಮಿಕಾ “​ ಮಿಷನ್​ ಮಜ್ನೂ” ಸಿನಿಮಾ ಮೂಲಕ ಟಾಲಿವುಡ್​ನಿಂದ ಬಾಲಿವುಡ್​ಗೆ ಹಾರಿದ್ದರು.

blank

ಇನ್ನು “​ ಮಿಷನ್​ ಮಜ್ನೂ” ಚಿತ್ರ 1970ರ ದಶಕದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ನಿರ್ದೇಶಕ ಶಾಂತನು ಬಗ್ಚೀ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರತಂಡ ಚಿತ್ರದ ಶೂಟಿಂಗ್​ ಕಂಪ್ಲೀಟ್​ ಮಾಡಿ ಕುಂಬಳಕಾಯಿ ಒಡೆದಿದ್ದರು. ಇದೀಗ ಚಿತ್ರದ ಶೂಟಿಂಗ್ ಮುಕ್ತಾಯವಾದ ಹಿನ್ನಲೆ “​ ಮಿಷನ್​ ಮಜ್ನೂ” ಚಿತ್ರತಂಡ ನಿನ್ನೆಯಷ್ಟೇ ಮುಂಬೈನಲ್ಲಿ ಭರ್ಜರಿ ಪಾರ್ಟಿ ಮಾಡಿದೆ.

blank

ಹೌದು ಮುಂಬೈನ ಖಾಸಗಿ ಹೋಟೆಲ್​ವೊಂದರಲ್ಲಿ ಪಾರ್ಟಿ ನಡೆದಿದ್ದು ,ಕೇಕ್​ ಕತ್ತರಿಸುವ ಮೂಲಕ ಚಿತ್ರತಂಡ ಸಂಭ್ರಮಿಸಿದೆ. ಇನ್ನು ಈ ವೇಳೆ ಸಿದ್ಧಾರ್ಥ್​ ಮಲ್ಹೋತ್ರಾ ಹಾಗೂ ರಶ್ಮಿಕಾ ಇಬ್ಬರು ಸ್ಲೈಲಿಶ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಮಿಶನ್​ ಮಜ್ನೂ ಚಿತ್ರದ ಪಾರ್ಟಿ ಪೋಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.

 

Source: newsfirstlive.com Source link