ಮುಂಬೈ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಸ್ಫೋಟದ ಸಂಚು ರೂಪಿಸಿದ್ದ 6 ಉಗ್ರರ ಬಂಧನ

ಮುಂಬೈ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಸ್ಫೋಟದ ಸಂಚು ರೂಪಿಸಿದ್ದ 6 ಉಗ್ರರ ಬಂಧನ

ನವದೆಹಲಿ: ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ದೆಹಲಿ ಪೊಲೀಸರು ಭಯೋತ್ಪಾದಕ ಟೀಂ ಒಂದನ್ನ ಬಂಧಿಸಿದೆ. ಈ ಟೀಂನಲ್ಲಿ 6 ಮಂದಿಯನ್ನ ಅರೆಸ್ಟ್ ಮಾಡಲಾಗಿದ್ದು ಈ ಪೈಕಿ ಇಬ್ಬರು ಪಾಕಿಸ್ತಾನದಲ್ಲಿ ಟ್ರೈನಿಂಗ್ ಪಡೆದಿದ್ದರು ಎನ್ನಲಾಗಿದೆ.

ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಈ ಮಹಾ ಕಾರ್ಯಾಚರಣೆ ನಡೆಸಿದ್ದು 6 ಭಯೋತ್ಪಾದಕರನ್ನ ಬಂಧಿಸಿದೆ. ದೆಹಲಿ, ಉತ್ತರಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಈ ಭಯೋತ್ಪಾದಕರು ಉಗ್ರ ಕೃತ್ಯ ನಡೆಸಲು ಸಂಚು ಹೂಡಿದ್ದರು ಎನ್ನಲಾಗಿದೆ. ಬಂದಧಿತ ಉಗ್ರರಿಂದ ಸ್ಫೋಟಕಗಳನ್ನ ವಶಪಡಿಸಿಕೊಳ್ಳಲಾಗಿದೆ.

ಭಯೋತ್ಪಾದಕರ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಭಯೋತ್ಪಾದಕರ ಬಗ್ಗೆ ಹಾಗೂ ಅವರ ಸಂಚಿನ ಬಗ್ಗೆ ಹಚ್ಚಿನ ಮಾಹಿತಿ ನೀಡಲಿದ್ದಾರೆ.

Source: newsfirstlive.com Source link