200ರ ಸಂಚಿಕೆ ಸಂಭ್ರಮದಲ್ಲಿ ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಧಾರಾವಾಹಿ

200ರ ಸಂಚಿಕೆ ಸಂಭ್ರಮದಲ್ಲಿ ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಧಾರಾವಾಹಿ

ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಧಾರಾವಾಹಿ ಮಾಡಿರೋ ಇಂಪ್ಯಾಕ್ಟ್‌ ಅಷ್ಟಿಷ್ಟಲ್ಲ. ಶಿಕ್ಷಣದ ಬಗ್ಗೆ ಇರಬಹುದು, ಜಾತಿ ವ್ಯವಸ್ಥೆ ಬಗ್ಗೆ ಇರಬಹುದು ಈ ಧಾರಾವಾಹಿ ಚೆಲ್ಲಿರೋ ಬೆಳಕು ಮೆಚ್ಚುಗೆಗೆ ಅರ್ಹ.

ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಧಾರಾವಾಹಿ ಕನ್ನಡದಲ್ಲಿ 200 ಎಪಿಸೋಡ್​ಗಳನ್ನ ಪೂರೈಸಿ ಭರ್ಜರಿಯಾಗಿ ಸಾಗುತ್ತಿದೆ.
ಅಂದ್ಹಾಗೇ, ಅಂಬೇಡ್ಕರ್‌ ಪ್ರೌಢಾವಸ್ಥೆಯ ಕಥೆ ಶುರುವಾಗಿದ್ದು, ಪ್ರೌಢಾವಸ್ಥೆಯ ಅಂಬೇಡ್ಕರ್ ಪಾತ್ರ ಮಾಡ್ತಿರೋದು ನಟ ಅಥರ್ವ ಕಾರ್ವೆ. ಹೊಸ ಟ್ವಿಸ್ಟ್​ಗಳೊಂದಿಗೆ ಕಥೆ ತುಂಬಾ ಚೆನ್ನಾಗಿ ಸಾಗುತ್ತಿದ್ದು, ಜನರ ಅಚ್ಚು ಮೆಚ್ಚಿನ ಸೀರಿಯಲ್​ ಆಗಿದೆ.

ಇದನ್ನೂ ಓದಿ:ಜೀ ಕುಟುಂಬಕ್ಕೆ ಎಂಟ್ರಿ ಕೊಟ್ಟ ಗೋಲ್ಡನ್​ ಸ್ಟಾರ್​ ಗಣೇಶ್​

ಈ ಧಾರಾವಾಹಿಯಲ್ಲಿ ಬಾಲ ಭೀಮನ ಪಾತ್ರ ಮಾಡಿರೋ ಬಾಲಾನಟ ಆಯುಧ್‌ನ ಅಭಿನಯವನ್ನ ಇಡೀ ದೇಶವೇ ಮೆಚ್ಚಿದೆ. ಈ ಧಾರಾವಾಹಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯೋಕೆ ಕಾರಣವೇ ಆಯುಧ್‌ ನಟನೆ. ಮರಾಠಿ ಭಾಷೆಯಲ್ಲಿ ಚಿರಪರಿಚಿತರಾಗಿರುವ ಅಥರ್ವ. ಈ ಹಿಂದೇ ಕೂಡ ಕೆಲವು ಹಿಂದಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

Source: newsfirstlive.com Source link