ಒಎಲ್​​ಎಕ್ಸ್​ ದೋಖಾ: ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರನ್ನೇ ಎಗರಿಸಿದ ಖತರ್ನಾಕ್​ ಕಳ್ಳ

ಒಎಲ್​​ಎಕ್ಸ್​ ದೋಖಾ: ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರನ್ನೇ ಎಗರಿಸಿದ ಖತರ್ನಾಕ್​ ಕಳ್ಳ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾರು ಖರೀದಿ ನೆಪದಲ್ಲಿ ಖತರ್ನಾಕ್​ ಕಳ್ಳನೋರ್ವ ಕಾರನ್ನೇ ಕದ್ದೊಯ್ದ ಘಟನೆ ವರದಿಯಾಗಿದೆ.

ಆಗಸ್ಟ್​ 28 ರಂದು ಅಬ್ದುಲ್ ಅಜೀಜ್ ಎಂಬುವವರು OLX ನಲ್ಲಿ ಕಾರು ಮಾರಾಟ ಮಾಡೋದಾಗಿ ಪೋಸ್ಟ್ ಮಾಡಿದ್ದಾರೆ. ಇದೇ ದಿನ ಕಾರನ್ನು ಕೊಳ್ಳೋದಾಗಿ ಜಗದೀಶ್ ಪಾಟೀಲ್ ಎಂಬಾತ ಕರೆ ಮಾಡಿದ್ದ. ಕರೆ ಮಾಡಿದ್ದೇ ತಡ ಕಾರು ನೋಡೋಕೆ ಬರ್ತೀನಿ, ಎಲ್ಲಿಗೆ ಬರ್ಲಿ ಅಂತ ಆರೋಪಿ ಜಗದೀಶ್ ಕೇಳಿದ್ದನಂತೆ.

blank

ಇದನ್ನೂ ಓದಿ:ಹಾಸ್ಯನಟ ರಾಜು ತಾಳಿಕೋಟಿ ಹಣೆಗೆ ಪಿಸ್ತೂಲ್ ಇಟ್ಟು ಹಲ್ಲೆ.. ನಡೆದಿದ್ದೇನು..?

ಅದ್ರಂತೆ ಒಂದು ಸಾವಿರ ಅಡ್ವಾನ್ಸ್ ಕೊಟ್ಟು ಜಯನಗರ 4th ಬ್ಲಾಕ್ ಬಳಿ ಕಾರನ್ನು ನೋಡೋಕೆ ಬಂದಿದ್ದ ಜಗದೀಶ್​. I-20 ಕಾರನ್ನು ನೋಡಿ ಕಾರ್ ಸೂಪರ್ ಸಾರ್ ಎಷ್ಟು ರೇಟ್ ಎಂದು ಡೈಲಾಗ್ ಹೊಡೆದಿದ್ದನಂತೆ. ಈ ವೇಳೆ 3 ಲಕ್ಷ 50 ಸಾವಿರಕ್ಕೆ ಕೊಡ್ತೀನಿ ಅಂದಿದ್ರಂತೆ ಅಬ್ದುಲ್ ಅಜೀಜ್. ಕಾರಿನ ಒರಿಜಿನಲ್​ ಡಾಕ್ಯುಮೆಂಟ್ ತೋರಿಸಿ ಅಂದಾಗ ದಾಖಲೆಗಳನ್ನು ತರಲು ಮನೆ ಒಳಗೆ ಹೋದಾಗ ಟೆಸ್ಟ್ ಡ್ರೈವ್ ಹೋಗ್ ಬರ್ತೀನಿ ಅಂದು ಕಾರ್ ಓಡಿಸಿಕೊಂಡು ಹೋದ ಆರೋಪಿ ಜಗದೀಶ್ ಕಾರ್​ ಸಮೇತ ಎಸ್ಕೇಪ್​ ಆಗಿದ್ದಾನೆ.
ಸದ್ಯ ಕಾರು ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕಾರು ಕಳೆದುಕೊಂಡ ಅಜೀಜ್​ ದೃಶ್ಯಾವಳಿ ಸಮೇತ ಜಯನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೋಟೆಲ್​ನಲ್ಲಿ ಅಗ್ನಿ ಅವಘಡ- ತಪ್ಪಿದ ಭಾರೀ ಅನಾಹುತ

Source: newsfirstlive.com Source link