ಮೈಸೂರು ದೇವಸ್ಥಾನ ನೆಲಸಮ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು..?

ಮೈಸೂರು ದೇವಸ್ಥಾನ ನೆಲಸಮ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು..?

ಬೆಂಗಳೂರು: ಮೈಸೂರು ದೇವಸ್ಥಾನ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ.. ಎಲ್ಲಾ ವಿವರಗಳನ್ನ ಸದನದಲ್ಲಿ ಹೇಳ್ತೀನಿ. ಈಗಾಗಲೇ ಹೇಗೆ ಒಡೆದಿದ್ದಾರೆ ಎಂಬ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ಕರ್ನಾಟಕದಲ್ಲಿ ದೇವಸ್ಥಾನಗಳನ್ನ ಅವಸರದಲ್ಲಿ ಒಡೆಯಬಾರದು ಅಂತ ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಸಮಗ್ರವಾಗಿ ಪರಿಶೀಲಿಸ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ‘ಹಬ್ಬದ ದಿನವೇ ದೇಗುಲ ನೆಲಸಮ ಮಾಡಿದ್ದು ನನಗೆ ಅತೀವ ನೋವು ತಂದಿದೆ’- ಸಿ.ಟಿ ರವಿ

ಯಾವ ರೀತಿ ದೇವಸ್ಥಾನ ತೆರವು ಮಾಡಲಾಯ್ತು ಎಂಬುದವರ ಬಗ್ಗೆ ತಹಾಸಿಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ನೋಟಿಸ್ ಕೊಡಲಾಗಿದೆ. ಅವರಿಂದ ಉತ್ತರ ಬರಲಿದೆ.. ಇಡೀ ರಾಜ್ಯದಲ್ಲಿ ದೇವಸ್ಥಾನ ತೆರವು ವಿಚಾರದಲ್ಲಿ ಅವಸರದ ಕ್ರಮ ಕೈಗೊಳ್ಳಬಾರದು ಎಂದು ಸೂಚನೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪುನ ಸಮಗ್ರವಾಗಿ ಅಧ್ಯಯನ ಮಾಡಿ ನಿರ್ದೇಶನ ಮಾಡಲಾಗುತ್ತೆ. ನಾಳೆ ನಾಡಿದ್ದರಲ್ಲಿ ಕ್ಯಾಬಿನೆಟ್ ಕರೆದು ಸ್ಪಷ್ಟವಾಗಿ ನಿರ್ದೇಶನ ಕೊಡುತ್ತೇವೆ. ಸದನ ನಡೆಯುತ್ತಿದೆ ಇದ್ರ ಬಗ್ಗೆ ಸದನದಲ್ಲಿ ಎಲ್ಲಾ ವಿವರವನ್ನ ನಾನು ಸದನದಲ್ಲಿ ಉತ್ತರಿಸುತ್ತೇನೆ ಎಂದಿದ್ದಾರೆ.

Source: newsfirstlive.com Source link