ಮಸೀದಿ, ಚರ್ಚ್, ದೇವಸ್ಥಾನವೆಂದು ನೋಡಲ್ಲ.. ಅಕ್ರಮ ಕಟ್ಟಡಗಳ ತೆರವು ಮಾಡ್ತೇವೆ ಎಂದ ರಾಮನಗರ ಡಿಸಿ

ಮಸೀದಿ, ಚರ್ಚ್, ದೇವಸ್ಥಾನವೆಂದು ನೋಡಲ್ಲ.. ಅಕ್ರಮ ಕಟ್ಟಡಗಳ ತೆರವು ಮಾಡ್ತೇವೆ ಎಂದ ರಾಮನಗರ ಡಿಸಿ

ರಾಮನಗರ: ಮೈಸೂರಿನಲ್ಲಿ ಅಕ್ರಮ ಕಟ್ಟಡಗಳ ತೆರವು ಹೆಸರಿನಲ್ಲಿ ದೇವಸ್ಥಾನ ನೆಲಸಮ ಮಾಡಿದ ವಿಚಾರ ಇನ್ನೂ ಚರ್ಚೆಯಲ್ಲಿರುವಾಗಲೇ ಇತ್ತ ರಾಮನಗರ ಜಿಲ್ಲಾಧಕಾರಿ ಅಕ್ರಮ ಕಟ್ಟಡಗಳ ತೆರವು ಮಾಡುವುದಾಗಿ ಹೇಳಿದ್ದಾರೆ. ಸರ್ಕಾರಿ ಜಾಗದಲ್ಲಿ ಧಾರ್ಮಿಕ ಕಟ್ಟಡಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಒಟ್ಟು 34 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನ ಗುರುತಿಸಲಾಗಿದೆ. ಅದರಲ್ಲಿ 18 ಅನಧಿಕೃತ ಕಟ್ಟಡಗಳ ತೆರವು ಮಾಡಲಾಗಿದೆ. 13 ಕಟ್ಟಡಗಳನ್ನ ಅಧಿಕೃತ ಮಾಡಲಾಗಿದೆ. 3 ಕಟ್ಟಡಗಳ ತೆರವು ಕಾರ್ಯ ಬಾಕಿಯಿದೆ. 2009 ರ ನಂತರ ನಿರ್ಮಾಣವಾದ ಕಟ್ಟಡಗಳನ್ನ ತೆರವು ಮಾಡಲಾಗುತ್ತೆ. ಅಂತಹ ಕಟ್ಟಡಗಳನ್ನ ಕಾಲಕ್ರಮೇಣ ತೆರವು ಮಾಡಲಾಗುತ್ತೆ. ಇದರಲ್ಲಿ ಮಸೀದಿ, ಚರ್ಚ್, ದೇವಸ್ಥಾನ ಅಂತಾ ಇಲ್ಲ. ಅನಧಿಕೃತವಾಗಿ ಯಾವುದೇ ಇದ್ದರೂ ತೆರವು ಮಾಡುತ್ತೇವೆ. ಕಾಲಕ್ರಮೇಣ ತೆರವು ಕಾರ್ಯ ನಡೆಯಲಿದೆ. ಈ ಬಗ್ಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ ಎಂದಿದ್ದಾರೆ.

ಈಗಲ್ ಟನ್ ರೆಸಾರ್ಟ್ ಒತ್ತುವರಿ‌ ಮಾಡಿಕೊಂಡಿದ್ದ ಸರ್ಕಾರಿ ಜಮೀನು ಜಿಲ್ಲಾಡಳಿತದ ವಶಕ್ಕೆ ಸಿಕ್ಕಿದೆ. ಒತ್ತುವರಿ ಜಮೀನು ಗುರುತಿಸಿ ಕಾಂಪೌಂಡ್ ‌ನಿರ್ಮಾಣಕ್ಕೆ ರಾಮನಗರ ಜಿಲ್ಲಾಡಳಿತ ಮುಂದಾಗಿದೆ. 77 ಎಕರೆ 18 ಗುಂಟೆ ಸರ್ಕಾರಿ ಗೋಮಾಳವನ್ನ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ ಲಿ ಆಕ್ರಮವಾಗಿ ಗೋಮಾಳ ಒತ್ತುವರಿ ಮಾಡಿಕೊಂಡಿತ್ತು ಎನ್ನಲಾಗಿದೆ.

ಒತ್ತುವರಿ ಜಾಗದ ಮೌಲ್ಯ 928 ಕೋಟಿ ರೂ ಎಂದು ರಾಮನಗರ ಜಿಲ್ಲಾಡಳಿತ ಅಂದಾಜಿಸಿದೆ. ಈ ವಿಚಾರವಾಗಿ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ ಲಿ ಕೋರ್ಟ್ ಮೊರೆ ಹೋಗಿತ್ತು. 77 ಎಕರೆಗೆ 12.35 ಕೋಟಿ ಪಾವತಿಸಲು ಸಿದ್ದ ಎಂದು ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ ಲಿ ಕೋರ್ಟ್ ಮೊರೆ ಹೋಗಿತ್ತು. ಇತ್ತೀಚೆಗೆ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ ಲಿ ನ ಅರ್ಜಿಯನ್ನ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಸರ್ಕಾರಕ್ಕೆ ಹಣವನ್ನ ಪಾವತಿಸದ ಹಿನ್ನೆಲೆ ಜಾಗವನ್ನ ವಶಕ್ಕೆ ಪಡೆದು ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಸರ್ಕಾರಿ‌ ಜಾಗದಲ್ಲಿ ಕಂಪನಿ ಗಾಲ್ಫ್, ರಸ್ತೆ, ವಿಲ್ಲಾ ನಿರ್ಮಾಣ ಮಾಡಿದೆ ಎನ್ನಲಾಗಿದೆ.

Source: newsfirstlive.com Source link